ನವದೆಹಲಿ: ತಿಂಗಳಾಂತ್ಯದಲ್ಲಿ ಪಡೆಯುವ ಸಂಬಳಕ್ಕಾಗಿ ಪ್ರತಿದಿನ 8 ತಾಸು ಕೆಲಸ ಮಾಡುತ್ತಾರೆ ಮತ್ತು ಇನ್ನು ಕೆಲವರು 12 ಗಂಟೆಗಳ ಕಾಲ ದುಡಿಯುವವರೂ ಇರುತ್ತಾರೆ. ಆದರೆ, ಕೇವಲ 1 ಗಂಟೆ ಕೆಲಸ ಮಾಡಿ ವರ್ಷಕ್ಕೆ 1,50,000 ಡಾಲರ್ ಅಂದರೆ ಭಾರತೀಯ ಕರೆನ್ಸಿ ಪ್ರಕಾರ 1.2 ಕೋಟಿ ರೂ. ಸಂಪಾದನೆ ಮಾಡುತ್ತಾರೆ ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಏಕೆಂದರೆ, ಗೂಗಲ್ ಕಂಪನಿಯ ಜೆನ್ಝಡ್ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಇದಕ್ಕೆ ತಾಜಾ ಉದಾಹರಣೆಯಾಗಿದ್ದಾರೆ.
ಟೆಕ್ಕಿಯ ಗುಪ್ತನಾಮ ಡೆವೊನ್ ಎಂದು ಗುರುತಿಸಲಾಗಿದೆ.ಇವರು ಒಂದು ದಿನವೂ ಪೂರ್ತಿ ದಿನ ಕೆಲಸ ಮಾಡಿಲ್ಲವಂತೆ. ಆದರೆ, ಉತ್ತಮ ಸಂಬಳ ಪಡೆಯುತ್ತಿರುವ ಡೆವೂನ್, ವರ್ಷಾಂತ್ಯದಲ್ಲಿ ಬೋನಸ್ ಸಹ ಪಡೆಯಲಿದ್ದಾರೆ. ಟೆಕ್ ದೈತ್ಯ ಕಂಪನಿಯಲ್ಲಿ ಕೋಡ್ ಬರೆಯುವುದೇ ಡೆವೂನ್ ಅವರ ಕೆಲಸ. ಅಲ್ಲದೆ, ತಮ್ಮ ಟೆಕ್ಕಿ ಸ್ನೇಹಿತರ ಜತೆ ಸೇರಿ ಕಂಪನಿ ನಿರ್ಮಾಣ ಮಾಡಲು ಸಹ ಮುಂದಾಗಿದ್ದಾರೆ.
ಕಂಪನಿ ಕೊಡುವ ಕೆಲಸಕ್ಕೆ ಅನುಗುಣವಾಗಿ ಕೋಡ್ ರಚನೆ ಮಾಡಿ, ಅದನ್ನು ಮ್ಯಾನೇಜರ್ಗೆ ಕಳುಹಿಸಿಕೊಡುತ್ತಾರೆ. ಸಾಮಾನ್ಯವಾಗಿ ಬೆಳಗ್ಗೆ 9 ಗಂಟೆಗೆ ಏಳುವ ಡೆವೂನ್, ಸ್ನಾನ ಮಾಡಿ, ಬ್ರೇಕ್ಫಾಸ್ಟ್ ಮುಗಿಸಿಕೊಂಡು 11 ಗಂಟೆ ಅಥವಾ ಮಧ್ಯಾಹ್ನದ ವೇಳೆ ಕೆಲಸಕ್ಕೆ ಕೂರುತ್ತಾರೆ. ಕೇವಲ ಒಂದು ಗಂಟೆಯಷ್ಟೇ ಕೆಲಸ ಮಾಡುತ್ತಾರೆ. ಉಳಿದ ಸಮಯದಲ್ಲಿ ಡೆವೂನ್ ತಮ್ಮ ಸ್ಟಾರ್ಟಪ್ಗಾಗಿ ಕೆಲಸ ಮಾಡುತ್ತಾರೆ.
ಅಂದಹಾಗೆ 97 ಪ್ರತಿಶತ ಗೂಗಲ್ ಉದ್ಯೋಗಿಗಳು ಟೆಕ್ ದೈತ್ಯವನ್ನು ಕೆಲಸ ಮಾಡಲು ಉತ್ತಮ ಸ್ಥಳವೆಂದು ಕರೆಯುತ್ತಾರೆ. ಸಾಮಾನ್ಯ ಯುಎಸ್ ಕಂಪನಿಯ ಉದ್ಯೋಗಿಗಳ 57% ಜನರು ಇದನ್ನು ಹೇಳುತ್ತಾರೆ. ಗೂಗಲ್ ತನ್ನ ಪ್ರಯೋಜನಗಳ ಕಾರಣದಿಂದಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಉದ್ಯೋಗಿಗಳಿಗೆ ಬೈಸಿಕಲ್‌ಗಳು, ಜಿಮ್ ಮತ್ತು ಉಚಿತ ಊಟಗಳಿಂದ ತುಂಬಿರುವ ಚಮತ್ಕಾರಿ ಕ್ಯಾಂಪಸ್ ಮತ್ತು ಹೆಚ್ಚಿನ ಸಂಬಳದಿಂದಾಗಿ ಗೂಗಲ್ ಒಳ್ಳೆಯ ಹೆಸರು ಮಾಡಿದೆ.
ಹೆಚ್ಚಿನ ಜನರು ಕೆಲಸ-ಜೀವನದ ಸಮತೋಲನ ಮತ್ತು ಪ್ರಯೋಜನಗಳ ಕಾರಣದಿಂದಾಗಿ ಗೂಗಲ್ ಅನ್ನು ಆಯ್ಕೆ ಮಾಡುತ್ತಾರೆ. ನೀವು ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡಬಹುದು, ಆದರೆ ಆ್ಯಪಲ್ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ತನ್ನದೇಯಾದ ಮನವಿಯನ್ನು ಹೊಂದಿದೆ. ಅವರು ದೀರ್ಘಕಾಲ ಕೆಲಸ ಮಾಡುತ್ತಾರೆ. ಆದರೆ ಗೂಗಲ್ನಲ್ಲಿ ಹೆಚ್ಚಿನ ಜನರು ಏನು ಮಾಡುತ್ತಿದ್ದಾರೆಂದು ಎಲ್ಲರಿಗು ತಿಳಿದಿದೆ ಎಂದು ಡೆವೂನ್ ಹೇಳಿದ್ದಾರೆ. (ಏಜೆನ್ಸೀಸ್)