ನ್ಯೂಸ್

ಜೈಪುರದಲ್ಲಿ ಹಳಿ ತಪ್ಪಿದ ಗೂಡ್ಸ್​ ರೈಲು; ಏಳು ರೈಲುಗಳ ಸಂಚಾರ ಸ್ಥಗಿತ

Webdesk - Manjunatha B

ಜೈಪುರ: ಗೂಡ್ಸ್​ ರೈಲಿನ ಬೋಗಿಗಳು ಹಳಿ ತಪ್ಪಿದ ಪರಿಣಾಮ ಏಳು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯೂ ಶನಿವಾ ಬೆಳಗ್ಗೆ ರಾಜಸ್ಥಾನದ ಜೈಪುರದ ಬಳಿ ಇರುವ ಅಸಲ್​ಪುರ-ಜೊಬನಾರ್​ ಮತ್ತು ಹಿರ್ನೋಡ ನಿಲ್ದಾಣಗಳ ನಡುವೆ ಸಂಭವಿಸಿದ್ದು, ಗೂಡ್ಸ್​ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ ಎಂದು ವರದಿಯಾಗಿದೆ.

ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳ ತಂಡ ಬೋಗಿಗಳನ್ನು ಹೊರತೆಗೆದು ಹಳಿಗಳನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ರೈಲಿನ ಬೋಗಿಗಳು ಹಳಿ ತಪ್ಪಿದ ಪರಿಣಾಮ ಜೈಪುರ-ಮರ್ವಾರ್​, ಜೈಪುರ-ಜೋಧ್​ಪುರ, ಜೈಪುರ-ಅಜ್ಮೇರ್​, ಜೈಪುರ-ಸೂರಜ್​ಗಢತ್​ಗಢ ಮಾರ್ಗವಾಗಿ ಸಂಚರಿಸುವ ಏಳು ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.