ನ್ಯೂಸ್

ಸರ್ಕಾರದಿಂದ ಗುಡ್‌ನ್ಯೂಸ್; ಇನ್ಮುಂದೆ ರಾಜ್ಯದ ಎಲ್ಲಾ ಬಸ್​ಗಳಲ್ಲಿ ಅಂಧರಿಗೆ ಉಚಿತ ಪ್ರಯಾಣ| blind

ಬೆಂಗಳೂರು: ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ನೀಡಿದ್ದ ರಾಜ್ಯ ಸರ್ಕಾರ ಇದೀಗ ಅಂಧತ್ವ ಹೊಂದಿರೋ ವಿಶೇಷ ಚೇತನರಿಗೂ ಗುಡ್ ನ್ಯೂಸ್ ನೀಡಿದೆ. ಇದೇ ರೀತಿಯ ಯೋಜನೆಯ ಅನುಭವವನ್ನು ಅಂಧತ್ವ ಹೊಂದಿರುವ ವಿಶೇಷ ಚೇತನರೂ ಪಡೆದುಕೊಳ್ಳಲು ಸರ್ಕಾರ ಹೊಸ ಯೋಜನೆಯನ್ನ ಜಾರಿಗೆ ತಂದಿದೆ. ಈ ಮೂಲಕ ಅಂಧರು ರಾಜ್ಯ ಸಾರಿಗೆ 4 ನಿಗಮಗಳಲ್ಲಿ ಉಚಿತವಾಗಿ ಓಡಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಈ ಹಿಂದಿನ ವ್ಯವಸ್ಥೆಯಲ್ಲಿ ಅಂಧರು ಯಾವುದೇ ಒಂದು ನಿಗಮದ ಪಾಸ್ ಪಡೆದಿದ್ದರೆ, ಆ ನಿಗಮದ ಬಸ್‌ಗಳಲ್ಲಿ ಮಾತ್ರ ಉಚಿತ ಪ್ರಯಾಣ ಸಾಧ್ಯವಾಗುತ್ತಿತ್ತು. ಉದಾಹರಣೆಗೆ, ಬಿಎಂಟಿಸಿ ಪಾಸ್ ಹೊಂದಿರುವವರು ಬಿಎಂಟಿಸಿ ಬಸ್‌ಗಳಲ್ಲಿ ಮಾತ್ರ ಓಡಾಡಬಹುದಿತ್ತು. ಆದರೆ ಕೆಎಸ್‌ಆರ್‌ಟಿಸಿ, NEKRTC ಅಥವಾ NWKRTC ಬಸ್‌ಗಳಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಪಡೆಯಬೇಕಾಗುತಿತ್ತು. ಇದರಿಂದಾಗಿ ಅನೇಕ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು.

ಅಂಧರು ರಾಜ್ಯದ ಎಲ್ಲಾ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

(ಏಜೆನ್ಸೀಸ್)

ಬೆಂಗಳೂರು ಒಂದರಲ್ಲೇ ಸುಮಾರು 20 ಸಾವಿರಕ್ಕೂ ಹೆಚ್ಚು ಅಂಧರಿದ್ದಾರೆ. ರಾಜ್ಯವ್ಯಾಪಿ ಲಕ್ಷದಷ್ಟು ಅಂಧ ವಿಶೇಷ ಚೇತನರಿದ್ದು, ಎಲ್ಲರಿಗೂ ಸರ್ಕಾರ ಉಚಿತ ಪಾಸ್ ನೀಡುತ್ತಿದೆ. ಸದ್ಯ ರಾಜ್ಯ ಸರ್ಕಾರವು ಹೊಸದಾಗಿ ಕೈಗೊಳ್ಳಲು ಹೊರಟಿರುವ ಈ ನಿರ್ಧಾರ ಲಕ್ಷಾಂತರ ಅಂಧ ವಿಶೇಷ ಚೇತನರಿಗೆ ಪ್ರಯೋಜನವಾಗಲಿದೆ.

ಈ ಹಿನ್ನೆಲೆ ಇಂದು ಸಾರಿಗೆ ಇಲಾಖೆ ಹೊಸ ಆದೇಶ ಹೊರಡಿಸಿದ್ದು, ಅಂಧತ್ವ ಹೊಂದಿರುವವರು ಯಾವುದೇ ನಿಗಮದ ಪಾಸ್ ಹೊಂದಿದ್ದರೂ, ಎಲ್ಲಾ 4 ನಿಗಮಗಳ ಬಸ್‌ಗಳಲ್ಲಿ ಅಂದರೆ ಬಿಎಂಟಿಸಿ, ಕೆಎಸ್​ಆರ್​ಟಿಸಿ, NEKRTC & NWKRTC ಯಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿದೆ.