ನ್ಯೂಸ್

ಮೆಗಾ ಸ್ಟಾರ್​ ಚಿತ್ರದ ಪ್ರಿ-ರಿಲೀಸ್​ ಈವೆಂಟ್​ಗೆ ಫಿಕ್ಸ್​ ಆಯ್ತು ಸ್ಥಳ, ಸಮಯ

ಆಂಧ್ರಪ್ರದೇಶ: ಟಾಲಿವುಡ್​ನ ಮೆಗಾ ಸ್ಟಾರ್​ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ 'ಭೋಲಾ ಶಂಕರ್' ಚಿತ್ರದ ಪ್ರಿ-ರಿಲೀಸ್​ ಕಾರ್ಯಕ್ರಮದ ವೇಳೆ ಮತ್ತು ಸ್ಥಳದ ಬಗ್ಗೆ ಇದೀಗ ಹೊಸ ಮಾಹಿತಿ ದೊರಕಿದೆ.

ಮೆಹರ್ ರಮೇಶ್ ನಿರ್ದೇಶಿಸಿದ ಬಿಗ್​ ಬಜೆಟ್​ 'ಭೋಲಾ ಶಂಕರ್' ಚಿತ್ರದಲ್ಲಿ ತಮನ್ನಾ ಭಾಟಿಯಾ ಮತ್ತು ಕೀರ್ತಿ ಸುರೇಶ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಆಗಸ್ಟ್ 11, 2023 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಈ ಮಧ್ಯೆ ಅಭಿಮಾನಿಗಳನ್ನು ಮನರಂಜಿಸಲು ಪ್ರಿ-ರಿಲೀಸ್​ ಈವೆಂಟ್​ ಅನ್ನು ಆಯೋಜಿಸಲಾಗಿದೆ.

ಚಿತ್ರದ ತಯಾರಕರು ಈ ಬಗ್ಗೆ ಅಧಿಕೃತ ಮಾಹಿತಿ ಪ್ರಕಟಿಸಿದ್ದು, ಭೋಲಾ ಶಂಕರ್ ಚಿತ್ರದ ಪ್ರಿ-ರಿಲೀಸ್​ ಈವೆಂಟ್​ ಇದೇ ಆಗಸ್ಟ್ 6, 2023 ರಂದು ಹೈದರಾಬಾದ್​ನ ಶಿಲ್ಪಕಲಾ ವೇದಿಕೆಯಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ ಎಂದು ತಿಳಿಸಿದೆ. ಸದ್ಯ ಈ ಸಂಗತಿ ಮೆಗಾ ಸ್ಟಾರ್​ ಅಭಿಮಾನಿಗಳಿಗೆ ಸಂತಸ ನೀಡಿದ್ದು, ಚಿತ್ರದ ಮೇಲೆ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಚಿತ್ರದಲ್ಲಿ ಕೀರ್ತಿ ಸುರೇಶ್, ಸುಶಾಂತ್, ರಘು ಬಾಬು, ಮುರಳಿ ಶರ್ಮಾ, ವೆನ್ನೆಲ ಕಿಶೋರ್, ರವಿಶಂಕರ್, ತುಳಸಿ, ಶ್ರೀ ಮುಖಿ, ಸುರೇಖಾ ವಾಣಿ, ಹೈಪರ್ ಆದಿ, ಹರ್ಷ ಚೆಮುಡು ಸೇರಿದಂತೆ ದೊಡ್ಡ ತಾರಗಣವಿದೆ,(ಏಜೆನ್ಸೀಸ್).