ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ದಿ ಡೆವಿಲ್' ಸಿನಿಮಾ ತಂಡ ತನ್ನ ಅಭಿಮಾನಿಗಳಿಗೆ ಭರ್ಜರಿ ಗುಡ್ನ್ಯೂಸ್ ನೀಡಿದೆ. ಸಿನಿಮಾದ ಮೊದಲ ಲಿರಿಕಲ್ ಸಾಂಗ್ ಬಿಡುಗಡೆಗೆ ಸಜ್ಜಾಗಿದ್ದು, ಇದೇ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚಾರಣೆಯ ಪ್ರಯುಕ್ತ ಹಾಡು ಬಿಡುಗಡೆಯಾಗಲಿದೆ. ದರ್ಶನ್ ಅವರ ಬಾಯಿಂದ ಉದುರಿದ ಡೈಲಾಗ್ಅನ್ನೇ ಈ ಸಿನಿಮಾದಲ್ಲಿ ಸಾಂಗ್ ಮಾಡಲಾಗಿದ್ದು, ಅಭಿಮಾನಿಗಳಲ್ಲಿನ ಆಸಕ್ತಿ ಮತ್ತಷ್ಟು ಹೆಚ್ಚಾಗಿದೆ.
ಅಕ್ಟೋಬರ್ 31ರಂದು ಡೆವಿಲ್ ಸಿನಿಮಾ ತೆರೆಗೆ ಬರಲಿದೆ ಎನ್ನುವ ಮಾತು ಕೇಳಿಬರುತ್ತಿದ್ದರೂ ಸಹ ಚಿತ್ರತಂಡ ಈ ಕುರಿತು ಇನ್ನೂ ಯಾವುದೇ ಅಧಿಕೃತವಾದ ಮಾಹಿತಿಯನ್ನು ಹಂಚಿಕೊಂಡಿಲ್ಲ. ಸದ್ಯ ಈ ಚಿತ್ರದ ಮೊದಲ ಹಾಡಿನ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಎಂಬ ಹಾಡನ್ನು ಆಗಸ್ಟ್ 15 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರದ ಆಡಿಯೊ ಕಂಪನಿ ತಿಳಿಸಿದೆ.
'ಇದ್ರೆ ನೆಮ್ದಿಯಾಗ್ ಇರ್ಬೇಕು ಎಂಬ ಡೈಲಾಗ್ ಈ ಹಿಂದೆ ದರ್ಶನ್ ಅವರದ್ದೇ ಎನ್ನಲಾದ ಆಡಿಯೋದಲ್ಲಿ ಎಲ್ಲರ ಗಮನ ಸೆಳೆದಿತ್ತು. ಈ ಸಾಲನ್ನು ಇಟ್ಟುಕೊಂಡು ಹಲವಾರು ಜನ ರೀಲ್ಸ್ ಅನ್ನು ಸಹ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಡೈಲಾಗ್ ಹಂಚಿಕೊಂಡು ತಮ್ಮ ಅಭಿಮಾನದ ಪ್ರದರ್ಶನವನ್ನು ಮಾಡಿದ್ದರು. dಇನ್ನೂ ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಡೆವಿಲ್–ದಿ ಹೀರೊ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಡಬ್ಬಿಂಗ್ ಕೂಡಾ ಮುಗಿದು, ಬಿಡುಗಡೆಗೆ ಸಿದ್ದವಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.
ಇದನ್ನೂ ಓದಿ: ಅರುಂಧತಿ ಚಿತ್ರದ ಬಾಲನಟಿಗೆ ಕೂಡಿಬಂತು ಕಂಕಣ ಭಾಗ್ಯ: ಸ್ಟಾರ್ ನಟಿಯರಿಗೂ ಕಮ್ಮಿ ಇಲ್ಲ ದಿವ್ಯಾ! Arundhati
(ಏಜೆನ್ಸೀಸ್)
ಡೆವಿಲ್ ಚಿತ್ರವನ್ನು ಅನೇಕರು ಮಾಸ್ ಕಥೆಯನ್ನು ಹೊಂದಿರುವ ಚಿತ್ರ ಎಂದು ಅಂದುಕೊಂಡಿದ್ದರು. ದರ್ಶನ್ ಚಿತ್ರದಲ್ಲಿ ಅಂಡರ್‌ವರ್ಲ್ಡ್ ಡಾನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದುಕೊಂಡಿದ್ದರು. ಆದರೆ ಕಳೆದ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಯ ರೂಪದಲ್ಲಿ ಪ್ರತ್ಯಕ್ಷವಾದ ಫೋಟೊ ಒಂದು ವೈರಲ್ ಆಗಿತ್ತು. ದರ್ಶನ್ ಮುಖ್ಯಮಂತ್ರಿ ಶ್ರೀ ಧನುಶ್ ರಾಜಶೇಖರ್ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ ಎನ್ನುವುದು ತಿಳಿದು ಬಂತು.
ದಕ್ಷಿಣ ಭಾರತದಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು 'ದಿ ಡೆವಿಲ್' ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಟ ದರ್ಶನ್, ರಚನಾ ರೈ ಜೊತೆಗೆ ಅಚ್ಯುತ್ ಕುಮಾರ್, ಮಹೇಶ್ ಮಾಂಜ್ರೇಕರ್, ಶರ್ಮಿಳಾ ಮಾಂಡ್ರೆ, ಚಂದು ಗೌಡ, ವಿನಯ್ ಗೌಡ ಸೇರಿದಂತೆ ಅನೇಕರ ಕಲಾವಿದರು ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.