PM Awas Yojana: ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಪ್ರಧಾನಿ ಮಂತ್ರಿ ಆವಾಸ್ ಯೋಜನೆಯು ಪ್ರಯಾಗ್‌ರಾಜ್‌ನಲ್ಲಿ ವಿವಾದಾತ್ಮಕವಾಗಿ ಚರ್ಚೆಯಾಗುತ್ತಿದೆ. ಈ ಸರ್ಕಾರಿ ಯೋಜನೆಯ ಉದ್ದೇಶವು ಬಡವರಿಗೆ ಮನೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿತ್ತು.
ಇದನ್ನೂ ಓದಿ: ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರ ಸಂ ಪ್ರೇರಣೆ
ಸುದ್ದಿಮೂಲಗಳ ಪ್ರಕಾರ, ಈ ಪ್ರಕರಣದಲ್ಲಿ 9,000ಕ್ಕೂ ಹೆಚ್ಚು ಜನರು ಈಗಾಗಲೇ ಮನೆಯನ್ನು ಹೊಂದಿದ್ದರೂ, ಸುಳ್ಲು ದಾಖಲೆಗಳನ್ನು ನೀಡಿ, ಈ ಯೋಜನೆಯಡಿ ತಲಾ 1.20 ಲಕ್ಷ ರೂ.ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಮನೆ ನಿರ್ಮಾಕ್ಕೆ ಮೀಸಲಾದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತನಿಖೆಗಳು ಬಹಿರಂಗಪಡಿಸಿವೆ. ಕೆವಲು ಫಲಾನುಭವಿಗಳು ಎರಡು ಅಂತಸ್ತಿನ ಮನೆಗಳನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಯಾಗ್‌ರಾಜ್‌ನ ಶಂಕರ್‌ಗಢ ಬ್ಲಾಕ್ 1 ರಲ್ಲೇ ಸುಮಾರು 3,127 ಫಲಾನುಭವಿಗಳು ಮೊದಲ ಕಂತನ್ನು ತೆಗೆದುಕೊಂಡಿದ್ದು, ಇಲ್ಲಿಯವರೆಗೂ ಇಟ್ಟಿಗೆಯನ್ನೂ ಸಹ ಹಾಕಿಲ್ಲ. ಇನ್ನು ಸ್ಥಳೀಯ ಪರಿಶೀಲನೆಗಳು ಅವರಿಗೆ ಹೊಸ ಮನೆಯ ಅಗತ್ಯವಿಲ್ಲ ಎಂದು ತಿಳಿಸಿವೆ. ಅರ್ಜಿಗಳನ್ನು ಪರಿಶೀಲಿಸಿದ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಹಣವನ್ನು ಮರು ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ.
ಈ ಹಗರಣಗಳು ವಸತಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಪಿಂಚಣಿ ಯೋಜನೆಗಳಲ್ಲೂ ಸಹ ಭಾರೀ ವಂಚನೆ ಎದುರಿಸಿವೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ನಕಲಿ ಹಕ್ಕುಗಳು, ಸಾವಿನ ವರದಿ ಮಾಡದಿರುವುದು ಹಾಗೂ ಫಲಾನುಭವಿಗಳು ಮತ್ತೊಂದು ಮದುವೆಯಾಗಿದ್ದರೂ ಸುಳ್ಳು ದಾಖಲೆ ನೀಡಿ, 40 ಲಕ್ಷಕ್ಕೂ ಅಧಿಕ ಹಣವನ್ನು ಪಡೆದಿದ್ದಾರೆ ಎಂದು ವರದಿಗಳು ಬಂದಿದೆ.
ವೃದ್ಧಾಪ್ಯ ಪಿಂಚಣಿ ಯೋಜನೆಯಲ್ಲಿ ಸುಮಾರು 2,351 ಫಲಾನುಭವಿಗಳು ಸಾವನ್ನಪ್ಪಿದ್ದಾರೆ. ಆದರೆ ಅವರ ಕುಟುಂಬಗಳು ಈ ಹಣವನ್ನು ಪಡೆಯುತ್ತಿದ್ದಾರೆ. ಇನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ ನಂತರ ಆ ಮೊತ್ತವನ್ನು ಹಿಂಪಡೆಯಲು ಪ್ರಸ್ತುತ ವ್ಯವಸ್ಥೆಯಲ್ಲಿ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)