ನ್ಯೂಸ್

ಸತತ ಐದು ದಿನಗಳಿಂದ ಇಳಿಯುತ್ತಲೇ ಇದೆ ಚಿನ್ನದ ದರ; ಇಂದು ಎಷ್ಟಿದೆ ಗೊತ್ತಾ?

Mandara

ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ಈ ವರ್ಷದ ಬಜೆಟ್​ ಶುಭಸುದ್ದಿ ನೀಡಿತ್ತು. ಅದರಂತೆ ಬಜೆಟ್​ ಮಂಡನೆಯಾದಾಗಿನಿಂದಲೂ ಚಿನ್ನದ ದರದಲ್ಲಿ ಸತತವಾಗಿ ಇಳಿಕೆ ಕಂಡುಬಂದಿದೆ. ಐದು ದಿನಗಳಲ್ಲಿ 10 ಗ್ರಾಂಗೆ 2 ಸಾವಿರಕ್ಕೂ ಹೆಚ್ಚು ರೂಪಾಯಿ ಕಡಿಮೆಯಾಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶುಕ್ರವಾರ ಚಿನ್ನದ ದರದಲ್ಲಿ 163 ರೂಪಾಯಿ ಇಳಿಕೆಯುಂಟಾಗಿದ್ದು, 10 ಗ್ರಾಂ ಚಿನ್ನದ ದರ 46,738 ರೂಪಾಯಿಯಷ್ಟಾಗಿದೆ. ಬೆಳ್ಳಿಯ ದರದಲ್ಲಿ ಮಾತ್ರ 530 ರೂಪಾಯಿ ಏರಿಕೆಯಾಗಿದ್ದು ಒಂದು ಕೆಜಿ ಬೆಳ್ಳಿ ದರ 67,483 ರೂಪಾಯಿಷ್ಟಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್​ (10 ಗ್ರಾಂ) ಚಿನ್ನದ ದರ 43,750 ರೂಪಾಯಿಯಿದ್ದರೆ, 24 ಕ್ಯಾರೆಟ್​ (10 ಗ್ರಾಂ) ಚಿನ್ನದ ದರ 40,730 ರೂಪಾಯಿಯಾಗಿದೆ. ಶುಕ್ರವಾರದಂದು 10 ಗ್ರಾಂ ಚಿನ್ನದ ದರದಲ್ಲಿ 600 ರೂಪಾಯಿ ಇಳಿಕೆಯಾಗಿದೆ. ಸೋಮವಾರದಂದು 310 ರೂಪಾಯಿ, ಮಂಗಳವಾರ 350 ರೂಪಾಯಿ, ಬುಧವಾರ 400 ರೂಪಾಯಿ ಮತ್ತು ಗುರುವಾರ 400 ರೂಪಾಯಿ ಇಳಿಕೆ ದಾಖಲಾಗಿತ್ತು. ಈ ವರ್ಷದ ಆರಂಭದಲ್ಲಿ ಚಿನ್ನದ ದರ 46,800 ರೂಪಾಯಿಯಷ್ಟಿತ್ತು. (ಏಜೆನ್ಸೀಸ್​)