ನ್ಯೂಸ್

ದಸರಾ, ದೀಪಾವಳಿಗೆ ಚಿನ್ನ ಬಲು ದುಬಾರಿ!? ಹಿಂದಿನ ದಾಖಲೆಗಳು ಬ್ರೇಕ್​, ಚಿನ್ನ-ಬೆಳ್ಳಿ ಖರೀದಿ ಕಷ್ಟಸಾಧ್ಯ | Gold Rates

Gold Rates: 'ಚಿನ್ನ'ದ ಗ್ರಾಹಕರಿಗೆ ಅದ್ಯಾಕೋ ಖರೀದಿ ಭಾಗ್ಯ ದಿನದಿಂದ ದಿನಕ್ಕೆ ದೂರ ಸರಿಯುತ್ತಿದೆ. ಮದುವೆ, ಶುಭ ಸಮಾರಂಭಗಳ ಸೀಸನ್​ನಲ್ಲೇ ಗೋಲ್ಡ್​ ಬೆಲೆ ಆಕಾಶಕ್ಕೆ ಜಿಗಿಯುತ್ತಿರುವುದು ಸದ್ಯ ಗ್ರಾಹಕರಲ್ಲಿ ತಲೆಬಿಸಿ ತಂದೊಡ್ಡಿದೆ. ಹಿಂದಿನ ದಾಖಲೆಗಳು ಮುರಿಯುತ್ತಿರುವ ಪ್ರಸ್ತುತ ಚಿನ್ನದ ದರ, ಕಳೆದ ಎರಡು ವಾರಗಳಲ್ಲಿ, ಸುಮಾರು 7 ಸಾವಿರ ರೂ. ಹೆಚ್ಚಾಗಿದೆ. ಇದು 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆಯಲ್ಲಿನ ಏರಿಕೆ ಎಂಬುದು ಇಲ್ಲಿ ಗಮನಾರ್ಹ.

ಶನಿವಾರ (ಸೆ.06) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 870 ರೂ. ಹೆಚ್ಚಾಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 800 ರೂ. ಏರಿಕೆಯಾಗಿದೆ. ಮತ್ತೊಂದೆಡೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವೂ ಗಮನಾರ್ಹವಾಗಿ ಹೆಚ್ಚಳ ಕಂಡಿದೆ. ಒಂದು ಔನ್ಸ್ ಚಿನ್ನದ ಬೆಲೆ 38 ಡಾಲರ್​ ಏರಿದೆ. ಇದರೊಂದಿಗೆ, ಪ್ರಸ್ತುತ ಒಂದು ಔನ್ಸ್ ಚಿನ್ನದ ಬೆಲೆ 3,586 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ

  • ನವದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 99,600 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,08,620 ರೂ. ಆಗಿದೆ.
  • ಮುಂಬೈ, ಬೆಂಗಳೂರು, ಚೆನ್ನೈ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 99,450 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,08,490 ರೂ. ಆಗಿದೆ.
  • ಇನ್ನು ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣದಲ್ಲಿ, 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 99,450 ರೂ. ಇದ್ದರೆ, 24 ಕ್ಯಾರೆಟ್ ಬೆಲೆ 1,08,490 ರೂ. ಆಗಿದೆ.

ಬೆಳ್ಳಿ ಕೂಡ ದುಬಾರಿ!

ಬೆಳ್ಳಿಯ ಬೆಲೆಯೂ ಗಮನಾರ್ಹವಾಗಿ ಹೆಚ್ಚಳ ಕಂಡಿದೆ. ಒಂದು ಕೆಜಿ ಬೆಳ್ಳಿ 2,000 ರೂ. ಹೆಚ್ಚಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಗಗನಕ್ಕೇರುತ್ತಿರುವುದರಿಂದ, ಇದು ಮಧ್ಯಮ ವರ್ಗದ ಜನತೆಗೆ ಭಾರೀ ನಿರಾಶೆ ಉಂಟುಮಾಡಿದೆ. ದಸರಾ ಮತ್ತು ದೀಪಾವಳಿಗೆ ಬಲು ದುಬಾರಿಯಾಗುತ್ತಿರುವ ಚಿನ್ನದ ಬೆಲೆಗಳು, ಸತತವಾಗಿ ಏರಿಕೆ ಕಾಣಲು ಅಂತಾರಾಷ್ಟ್ರೀಯ ಭೌಗೋಳಿಕ ರಾಜಕೀಯ ಪರಿಸ್ಥಿತಿ ಮತ್ತು ಯುಎಸ್ ಸುಂಕಗಳು ಸಹ ಕಾರಣ ಎಂದು ತಜ್ಞರು ಅಂದಾಜಿಸಿದ್ದಾರೆ,(ಏಜೆನ್ಸೀಸ್).