ಮುಂಬೈ: ಕರೊನಾ ಸೋಂಕಿನ ಹೆಚ್ಚಳ, ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಮರದ ಪರಿಣಾಮ ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಏರಿದೆ.
ಬುಧವಾರ ಬೆಳಗ್ಗೆ ಆರಂಭವಾದ ವಹಿವಾಟಿನಲ್ಲಿ ಬಂಗಾರದ ಮೇಲೆ ಹೆಚ್ಚಿನ ಹೂಡಿಕೆ ಕಂಡುಬಂತು. ಪರಿಣಾಮ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ ಆಫ್ ಇಂಡಿಯಾ ಲಿ.ನಲ್ಲಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆ 50,020 ರೂ.ಗೆ ಜಿಗಿಯಿತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿತ ಭಾರತದ ಮಾರುಕಟ್ಟೆ ಮೇಲೂ ಪ್ರಭಾವ ಬೀರುತ್ತದೆ. ಮತ್ತೊಂದೆಡೆ ಬೆಳ್ಳಿ ಬೆಲೆ ಕೂಡ ತುಟ್ಟಿಯಾಗಿದೆ. ಲಾಕ್ಡೌನ್ಗೆ ಮೊದಲು 35 ಸಾವಿರ ರೂಪಾಯಿ ಇದ್ದ ಕೆಜಿ ಬೆಳ್ಳಿ ದರ ಇದೀಗ 61 ಸಾವಿರ ರೂ.ಗೆ ಏರಿಕೆಯಾಗಿದೆ.