ನ್ಯೂಸ್

ಚಿನ್ನ ಆಮದು ದುಪ್ಪಟ್ಟು: ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಬಳಸುವ ದೇಶಗಳ ಪೈಕಿ ಭಾರತಕ್ಕೆ ಎರಡನೇ ಸ್ಥಾನ

ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಬಳಕೆ ಮಾಡುವ ದೇಶಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದ್ದರೆ, ಚೀನಾ ಮೊದಲ ಸ್ಥಾನದಲ್ಲಿದೆ. ಆಭರಣ, ಹವಳಗಳ ರಫ್ತು ಪ್ರಮಾಣದಲ್ಲಿ ಭಾರತ ಶೇ. 71 ಏರಿಕೆ ದಾಖಲಿಸಿದೆ.

  • ಏಪ್ರಿಲ್-ಡಿಸೆಂಬರ್ ತ್ರೖೆಮಾಸಿಕದಲ್ಲಿ ಅತ್ಯಧಿಕ ಬಂಗಾರ ಭಾರತಕ್ಕೆ ಆಮದು
  • ಚಾಲ್ತಿ ಖಾತೆ ಕೊರತೆ (ಸಿಎಡಿ)ಗೆ ಪ್ರಮುಖ ಕಾರಣ
  • ವಾಣಿಜ್ಯ ಸಚಿವಾಲಯದ ಅಂಕಿ-ಅಂಶ ಬಿಡುಗಡೆ

ಬೆಳ್ಳಿಗೂ ಇದೆ ಬೇಡಿಕೆ

  • 2020 ಅಂತ್ಯಕ್ಕೆ ಬೆಳ್ಳಿ ಆಮದು ಮೊತ್ತ 762 ಮಿಲಿಯನ್ ಡಾಲರ್ (56 ಸಾವಿರ ಕೋಟಿ ರೂ.) ಆಗಿತ್ತು
  • 2021 ಅಂತ್ಯಕ್ಕೆ ಈ ಮೊತ್ತ 2 ಬಿಲಿಯನ್ ಡಾಲರ್​ಗೆ (1.4 ಲಕ್ಷ ಕೋಟಿ ರೂ.) ಏರಿಕೆ ಕಂಡಿದೆ
  • 2020ರ ಏಪ್ರಿಲ್-ಡಿಸೆಂಬರ್ ತ್ರೖೆಮಾಸಿಕದಲ್ಲಿ ಆಮದಾದ ಚಿನ್ನದ ಮೊತ್ತ 16.78 ಬಿಲಿಯನ್ ಡಾಲರ್ (1.2 ಲಕ್ಷ ಕೋಟಿ ರೂ.)
  • 2021ರ ಏಪ್ರಿಲ್-ಡಿಸೆಂಬರ್ ತ್ರೖೆಮಾಸಿಕದಲ್ಲಿ ಆಮದಾದ ಚಿನ್ನದ ಮೊತ್ತ 38 ಬಿಲಿಯನ್ ಡಾಲರ್ (2.8 ಲಕ್ಷ ಕೋಟಿ ರೂ.)
  • ಕಳೆದ ಡಿಸೆಂಬರ್ ಒಂದೇ ತಿಂಗಳಲ್ಲಿ 4.8 ಬಿಲಿಯನ್ ಡಾಲರ್ (35 ಸಾವಿರ ಕೋಟಿ ರೂ.) ಮೊತ್ತದ ಬಂಗಾರ ಆಮದು
  • ಸತತ 8 ತಿಂಗಳಿಂದ ಚಿನ್ನದ ಆಮದಿನಲ್ಲಿ ಏರಿಕೆ ಯಾದ ಕಾರಣ ದೇಶದ ಚಾಲ್ತಿ ಖಾತೆ ಕೊರತೆ ಪ್ರಮಾಣ 142.44 ಬಿಲಿಯನ್ ಡಾಲರ್​ಗೆ (10 ಲಕ್ಷ ಕೋಟಿ ರೂ.) ಏರಿಕೆ
  • 2020 ಡಿಸೆಂಬರ್ ಅಂತ್ಯಕ್ಕೆ ಈ ಮೊತ್ತ 61.38 ಬಿಲಿಯನ್ ಡಾಲರ್ (4.5 ಲಕ್ಷ ಕೋಟಿ ರೂ.) ಆಗಿತ್ತು