ವಿಜಯಪುರ: ‘ಗಾಡಿ ವಾಲಾ ಆಯಾ ಗರಸೆ ಕಚರಾ ನಿಕಾಲ್’ ಎನ್ನುತ್ತ ಬೆಳ್ಳಂಬೆಳಗ್ಗೆ ಬರುವ ಕಸದ ಗಾಡಿಗೆ ಇಲ್ಲೊಬ್ಬ ಮಹಿಳೆ ಕಸದ ಬದಲು ಚಿನ್ನವನ್ನೇ ಹಾಕಿದ್ಳು!
ಅಯ್ಯೋ, ಆಕೆಗೇನು ತಲೆ ಕೆಟ್ಟಿದ್ಯಾ? ಅಂತ ನಿಮ್ಗೆ ಅನ್ನಿಸ್ಬಹುದು. ಹೌದು ಇಂತಹ ವಿಚಿತ್ರ ಘಟನೆ ವಿಜಯಪುರದ 22ನೇ ವಾರ್ಡ್ನಲ್ಲಿ ಗುರುವಾರ ನಡೆದಿದೆ. ಶಂಕರ್ ಚವಾಣ್ ಅವರ ಪತ್ನಿ ಚಿನ್ನದ ಮಾಂಗಲ್ಯ ಸರವನ್ನು ಕಸದ ಗಾಡಿಗೆ ಹಾಕಿ ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ. ಮುಂದೇನಾಯ್ತು ಗೊತ್ತಾ? ಇದನ್ನೂ ಓದಿರಿ ನಟಿ ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್
ಗುರುವಾರ ಬೆಳಗ್ಗೆ ಕಸದ ಗಾಡಿ ಬಂದು ಹೋದಾಗಿನಿಂದ ಶಂಕರ್ ಚವಾಣ್ರ ಪತ್ನಿಯ ಮಾಂಗಲ್ಯ ಸರ ಕಾಣೆಯಾಗಿದೆ. ಕಸ ಗುಡಿಸುವಾಗ ಚಿನ್ನದ ಸರವೂ ಕಸದ ರಾಶಿಗೆ ಸೇರಿದ್ದು, ತಡವಾಗಿ ಗೃಹಿಣಿ ಗಮನಕ್ಕೆ ಬಂದಿದೆ. ಆಗಲೇ ಪಾಲಿಕೆ ಕಸದ ಗಾಡಿ ಓಣಿಯಿಂದ ನಿರ್ಗಮಿಸಿದೆ. ಕೂಡಲೇ ಮಹಾನಗರ ಪಾಲಿಕೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪಾಲಿಕೆ ಸಿಬ್ಬಂದಿ ತಕ್ಷಣಕ್ಕೆ ಆ ಗಾಡಿ ಚಾಲಕನಿಗೆ ಕರೆ ಮಾಡಿ ಕಸದ ರಾಶಿ ಖಾಲಿ ಮಾಡದೇ ಗಾಡಿ ನಿಲ್ಲಿಸುವಂತೆ ತಿಳಿಸಿದ್ದಾರೆ. ಇನ್ನೇನು ಕಸ ಚೆಲ್ಲಬೇಕೆಂದಿದ್ದ ಚಾಲಕ, ಸಿಬ್ಬಂದಿ ಕರೆ ಮೇರೆಗೆ ಕಸ ತುಂಬಿದ ಗಾಡಿಯೊಂದಿಗೆ ನಗರ ಹೊರವಲಯದಲ್ಲಿ ನಿಂತಿದ್ದಾನೆ. ಸ್ಥಳಕ್ಕೆ ಪಾಲಿಕೆಯ ಸಿಬ್ಬಂದಿ ತೆರಳಿ ಹುಡುಕಿಸಲಾಗಿ ಚಿನ್ನದ ಸರ ಸಿಕ್ಕಿದೆ.