ನ್ಯೂಸ್

GOING DOWN... MAYDAY..MAYDAY.. ವಿಮಾನ ಪತನಕ್ಕೂ ಮುನ್ನ ಪೈಲಟ್​​ ಕಳುಹಿಸಿದ ಕೊನೆಯ ಸಂದೇಶ: ಏನಿದರ ಅರ್ಥ..?

GOING DOWN: ಜೂ.12ರ ಮಧ್ಯಾಹ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ಬೋಯಿಂಗ್ 787 ಡ್ರೀಮ್‌ಲೈನರ್ (AI-171) ವಿಮಾನವು ಮೇಘನಿನಗರದಲ್ಲಿರುವ ವೈದ್ಯಕೀಯ ಹಾಸ್ಟೆಲ್ ಮತ್ತು ಅದರ ಕ್ಯಾಂಟೀನ್ ಸಂಕೀರ್ಣಕ್ಕೆ ಅಪ್ಪಳಿಸಿತು. ಈ ಅಪಘಾತದಲ್ಲಿ ಒಟ್ಟು 270 ಜನರು ಸಾವನ್ನಪ್ಪಿದರು.

ಈ ಘಟನೆ ನಡೆಯುವ ಸ್ವಲ್ಪ ಸಮಯದ ಮುನ್ನ ಏರ್​​ ಇಂಡಿಯಾದ ವಿಮಾನ ಪೈಲಟ್​​ ಪತನಕ್ಕೂ ಮುಂಚೆ ಏರ್​​ ಟ್ರಾಫಿಕ್​​ ಕಟ್ರೋಲರ್​​ಗೆ (ATC) ಕೆಲ ಸಂದೇಶಗಳನ್ನು ಕಳುಹಿಸಿದ್ದು ಇದೀಗ 5 ನಿಮಿಷಗಳ ಆಡಿಯೋ ಬಹಿರಂಗಗೊಂಡಿದೆ.

ಆಡಿಯೋದಲ್ಲೇನಿದೆ..?

ಮೇಡೇ, ಮೇಡೇ, ಮೇಡೇ... NO POWER.. NO THRUST.. GOING DOWN.. ಎಂದು ಕೂಗಿದ್ದಾರೆ. ಅಷ್ಟರಲ್ಲೇ ವಿಮಾನ ಪತನಗೊಂಡಿದೆ. ಈ ಆಡಿಯೋ ATCಗೆ ಕಳುಹಿಸಿದ್ದಾರೆ. ಇತ್ತ ಎಡಿಸಿ ಪೈಲಟ್​ ಜತೆ ಸಂಪರ್ಕ ಸಾಧಿಸಲು ಎಷ್ಟೇ ಯತ್ನಿಸಿದರೂ ಸಂಪರ್ಕ ಕಡಿತಗೊಂಡಿದೆ.

ಮೇಡೇ ಅರ್ಥವೇನು..?

ಮೇಡೇ ಎಂದ್ರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ ಒಂದು ಪದವಾಗಿದ್ದು, ಜೀವಕ್ಕೆ ಸಂಕಷ್ಟ ಬಂದಾಗ ಅಥವಾ ವಿಮಾನ ಬೃಹತ್​​ ಗಾತ್ರದ ಸಮಸ್ಯೆಯಲ್ಲಿ ಸಿಲುಕಿಕೊಂಡಾಗ ಈ ಕರೆ ಮಾಡಲಾಗುತ್ತದೆ. ಇದಕ್ಕೆ ಮೇಡೇ ತುರ್ತು ಕರೆ ಎನ್ನುತ್ತಾರೆ. ಮೇಡೇ ಎಂದ್ರೆ Help ಮಾಡಿ ಎಂದರ್ಥ.(ಏಜೆನ್ಸೀಸ್​​)