ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ದೇವಮಾನವ ಅಸಾರಾಂ ಬಾಪುಗೆ ವೈದ್ಯಕೀಯ ಕಾರಣಗಳಿಂದಾಗಿ ಮಾರ್ಚ್ 31ರ ವರೆಗೆ ಸುಪ್ರೀಂಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ಮಂಜೂರು(Interim Bail)ಮಾಡಿದೆ.
ಸಾಕ್ಷಿ ಹಾಳು ಮಾಡದಂತೆ ಮತ್ತು ಬಿಡುಗಡೆಯ ನಂತರ ತಮ್ಮ ಅನುಯಾಯಿಗಳು ಸೇರಿದಂತೆ ಯಾರನ್ನು ಭೇಟಿ ಮಾಡದಂತೆ ಕೋರ್ಟ್ ನಿರ್ದೇಶಿಸಿದೆ.
ಅಸಾರಾಂ ಬಾಪು ಸದ್ಯ ಜೋದ್ಪುರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭಿಸುತ್ತಿದ್ದಾರೆ. ಬಿಡುಗಡೆ ಬಳಿಕ ಜೋದ್ಪುರ ಆರೋಗ್ಯ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಬಾಪು ಹೃದ್ರೋಗಿಯಾಗಿದ್ದಾರೆ. ಈ ಹಿಂದೆ ಹೃದಾಯಘಾತಕ್ಕೆ ಒಳಾಗಾಗಿದ್ದರು. ಅವರ ಜಾಮೀನಿನ ಅವಧಿಯಲ್ಲಿ ಮೇಲ್ವಿಚಾರಣೆ ಕೈಗೊಳ್ಳಲು ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.
ಆಶ್ರಮದಲ್ಲಿ ಹದಿಹರಿಯದ ಹುಡುಗಿಯ ಮೇಲೆ ಅತ್ಯಾಚಾರ ಎಸೆಗಿದ್ದಕ್ಕಾಗಿ ಜೋಧ್ಪುರ್ ನ್ಯಾಯಾಲಯವು ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 2013ರಲ್ಲಿ ಅವರ ಆಶ್ರಮದಲ್ಲಿ ಹಲವಾರು ಸಂದರ್ಭದಲ್ಲಿ ಮಹಿಳಾ ಶಿಷ್ಯರ ಮೇಲೆ ಅತ್ಯಾಚಾರ ಎಸೆಗಿದ್ದಕ್ಕಾಗಿ 2023ರಲ್ಲಿ ಅಪರಾಧಿ ಎಂದು ಸಾಕ್ಷ್ಯಧಾರಗಳ ಮೂಲಕ ಪರಿಗಣಿಸಿ ಶಿಕ್ಷೆ ವಿಧಿಸಿತ್ತು.(ಏಜೆನ್ಸೀಸ್).