ನ್ಯೂಸ್

ಪ್ಲಾಸ್ಮಾ ದಾನಿಗಳ ಕುಟುಂಬಗಳಿಗೆ ವಿಶೇಷ ಆರೋಗ್ಯ ಪ್ರೋತ್ಸಾಹ ಧನ ಘೋಷಿಸಿದ ಗೋವಾ ಸರ್ಕಾರ

ಪಣಜಿ: ಕೋವಿಡ್​-19 ನಿಂದ ಚೇತರಿಸಿಕೊಂಡು ಪ್ಲಾಸ್ಮಾ ದಾನ ಮಾಡುವವರ ಕುಟುಂಬದ ಸದಸ್ಯರಿಗೆ ವಿಶೇಷ ಆರೋಗ್ಯ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಗೋವಾ ಸರ್ಕಾರ ಘೋಷಿಸಿದೆ.

ಕೋವಿಡ್​​ನಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡುವಂತೆ ಪ್ರೋತ್ಸಾಹಿಸಲು ಗುಜರಾತ್ ಸರ್ಕಾರದಿಂದ ಸ್ಫೂರ್ತಿ ಪಡೆದಿದ್ದು, ಆರೋಗ್ಯ ಇಲಾಖೆ ಪ್ಲಾಸ್ಮಾ ದಾನಿಗಳಿಗೆ ಮೆಚ್ಚುಗೆಯ ಪ್ರಮಾಣಪತ್ರ ನೀಡಿ ಸನ್ಮಾನಿಸಲಿದೆ. ದಾನಿಗಳ ಕುಟುಂಬದ ಸದಸ್ಯರಿಗೆ ವಿಶೇಷ ಆರೋಗ್ಯ ಪ್ರೋತ್ಸಾಹ ಧನ ಸಿಗುವಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಟ್ವೀಟ್ ಮಾಡಿದ್ದಾರೆ.