ವಾರಣಾಸಿ: ಕಾಶಿಯ ಜ್ಞಾನವಾಪಿ ಸಮೀಕ್ಷಾ ವರದಿಗೆ ಸ್ಥಳೀಯ `ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ' ಪ್ರತಿಕ್ರಿಯಿಸಿದ್ದು, ಇದು ಪುರಾತತ್ವ ಇಲಾಖೆ ನೀಡಿರುವ ಸಮೀಕ್ಷಾ ವರದಿಯಷ್ಟೇ, ನ್ಯಾಯಾಲಯದ ತೀರ್ಪು ಅಲ್ಲ ಎಂದು ಹೇಳಿದೆ.
ಜ್ಞಾನವಾಪಿ ಮಸೀದಿ ಕುರಿತು ಪುರಾತತ್ವ ಇಲಾಖೆ ನೀಡಿರುವ ಸಮೀಕ್ಷಾ ವರದಿ ಕೇವಲ ಸಮೀಕ್ಷಾ ವರದಿಯಾಗಿದ್ದು, ನ್ಯಾಯಾಲಯದ ತೀರ್ಪು ಅಲ್ಲ. ಸಮಿತಿಯು ಸಮೀಕ್ಷಾ ವರದಿಯನ್ನು ಅಧ್ಯಯನ ಮಾಡುತ್ತಿದ್ದು, ಸಂಪೂರ್ಣ ತಿಳುವಳಿಕೆ ಬಂದ ನಂತರವಷ್ಟೇ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ.
ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ - 1991 ರ ವಿಷಯವನ್ನು ಸುಪ್ರೀಂ ಕೋರ್ಟ್ ವಿಚಾರಣೆ ಮಾಡಿದಾಗ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇವೆ ಎಂದು ಸಮಿತಿಯ ಕಾರ್ಯದರ್ಶಿ ಮೊಹಮ್ಮದ್ ಯಾಸಿನ್ ಹೇಳಿದ್ದಾರೆ.