More

    ದೇಶದಲ್ಲಿ 96 ಕೋಟಿ ಮತದಾರರು..ಲೋಕಸಭಾ ಚುನಾವಣೆಗೆ ಸಜ್ಜಾಗಿದೆ ಇಸಿ

    ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ 96 ಕೋಟಿ ಜನರು ಮತದಾನದ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗದ (ಇಸಿ) ಅಂಕಿಅಂಶಗಳು ಸ್ಪಷ್ಟಪಡಿಸಿವೆ.

    ಇದನ್ನೂ ಓದಿ: ‘ಕಾಲು ಕೆರೆದು ಇವರ ಮೇಲೆ ಜಗಳಕ್ಕೆ ಬರಬೇಡಿ’: ಶತ್ರುರಾಷ್ಟ್ರಗಳ ಸೇನೆಗೆ ಮಹೀಂದ್ರಾ ಸಲಹೆ

    ಅವರಲ್ಲಿ 47 ಕೋಟಿ ಮಹಿಳೆಯರು ಇದ್ದಾರೆ. ಅದೇ ರೀತಿ ಮತದಾನದ ಅರ್ಹತೆ ಹೊಂದಿರುವವರಲ್ಲಿ 1.73 ಕೋಟಿ ಜನರು 18-19 ವರ್ಷ ವಯಸ್ಸಿನವರಾಗಿದ್ದಾರೆ.

    ಚುನಾವಣಾ ಆಯೋಗದ ಮೂಲಗಳ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆಗೆ ದೇಶಾದ್ಯಂತ 12 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸುವ ಸಾಧ್ಯತೆಯಿದೆ. ಸುಮಾರು 1.5 ಕೋಟಿ ಚುನಾವಣಾ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ.

    ಇತ್ತೀಚೆಗೆ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಕಳುಹಿಸಿರುವ ಪತ್ರದ ಪ್ರಕಾರ, 1951 ರಲ್ಲಿ ದೇಶದಲ್ಲಿ 17.32 ಕೋಟಿ ನೋಂದಾಯಿತ ಮತದಾರರಿದ್ದರೆ, 2019 ರ ವೇಳೆಗೆ ಈ ಸಂಖ್ಯೆ 91.20 ಕೋಟಿಗೆ ತಲುಪಿದೆ. ಮೊದಲ ಲೋಕಸಭೆ ಚುನಾವಣೆಯಲ್ಲಿ ಶೇ.45ರಷ್ಟು ಮತದಾನವಾಗಿದ್ದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಶೇ.67ರಷ್ಟು ಮತದಾನವಾಗಿತ್ತು.

    ಮೂರೇ ನಿಮಿಷದಲ್ಲಿ ಈ ಸ್ಕೂಟರ್​ ಕಾರ್​ ಆಗುತ್ತೆ.. ಸ್ಟಾರ್ಟಪ್​ನ ವಿನೂತನ ಆವಿಷ್ಕಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts