More

    ರಮೇಶ ಜಿಗಜಿಣಗಿ ಕೊಡುಗೆ ಶೂನ್ಯ; ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದ್ದೇನು ಗೊತ್ತಾ?

    ವಿಜಯಪುರ: ಕಳೆದ ಹತ್ತು ವರ್ಷಗಳ ಹಿಂದೆ ನೀಡಿದ ಒಂದೇ ಒಂದು ಭರವಸೆ ಕೂಡ ಮೋದಿ ಈಡೇರಿಸಿಲ್ಲ. ಜನರ ಬದುಕು ಕಟ್ಟಿಕೊಡುವ ಪ್ರಯತ್ನ ಮಾಡಲಿಲ್ಲ. ಬದಲಾಗಿ ಜನರ ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

    ಬಿಜೆಪಿ ನಿರೀಕ್ಷಿತ ‘ಚಾರ್ ಸೋ ಪಾರ್’ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿಯಲಿದೆ. ಜನ ಪ್ರಜ್ಞಾವಂತರಾಗಿದ್ದಾರೆ. ಬದುಕು ಕಟ್ಟಿಕೊಡುವ ಪಕ್ಷಗಳಿಗೆ ಮಣೆ ಹಾಕಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಸುಭದ್ರ ಆಡಳಿತ ನೀಡಿದೆ. ಈ ಹಿಂದಿನ ಎಲ್ಲ ಭರವಸೆ ಈಡೇರಿಸಿದೆ. ಹೀಗಾಗಿ ಜನರ ಭರವಸೆ ಹೆಚ್ಚಿದೆ ಎಂದರು.

    ವಿಜಯಪುರಕ್ಕೆ ಸಂಸದ ರಮೇಶ ಜಿಗಜಿಣಗಿ ಕೊಡುಗೆ ಶೂನ್ಯ. ಅವರ ಸ್ವಂತ ಊರನ್ನೇ ಬಯಲು ಶೌಚಮುಕ್ತ ಗ್ರಾಮ ಮಾಡಿಲ್ಲ. ಮತ ಕೇಳಲು ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ. ಸಂಸತ್‌ನಲ್ಲಿ ಒಂದೇ ಒಂದು ಪ್ರಶ್ನೆ ಕೇಳಿಲ್ಲ ಎಂದರೆ ಇವರ ಸಾಮರ್ಥ್ಯ ಎಂಥದ್ದು ಎಂದು ಪ್ರಶ್ನಿಸಬೇಕಾಗುತ್ತದೆ ಎಂದರು.

    ಆರ್ಟಿಕಲ್ 371 ಅಡಿ ವಿಜಯಪುರ ಜಿಲ್ಲೆಯನ್ನು ಸೇರಿಸಬೇಕು, ಇಲ್ಲವಾದಲ್ಲಿ ವಿದರ್ಭ ಪ್ಯಾಕೇಜ್ ಮಾದರಿ ಪ್ಯಾಕೇಜ್ ಘೋಷಿಸಬೇಕು, ಬರದಿಂದ ತತ್ತರಿಸುವ ಜಿಲ್ಲೆಗೆ ವಿಶೇಷ ಅನುದಾನ ಕೊಡಬೇಕು, ಈ ನಿಟ್ಟಿನಲ್ಲಿ ಈವರೆಗೂ ಜಿಲ್ಲೆಯ ಸಂಸದರು ಶ್ರಮಿಸಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts