More

    ಈ  ರಾಶಿಯವರಿಗಿಂದು ಸ್ಥಿರಾಸ್ತಿ ಖರೀದಿ. ಪ್ರಿಯ ಜನರ ಭೇಟಿ. ಪರರ ಧನ ಪ್ರಾಪ್ತಿ: ನಿತ್ಯಭವಿಷ್ಯ

    ಮೇಷ: ಕುಟುಂಬದಲ್ಲಿ ಅಹಿತಕರ ವಾತಾವರಣ. ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು. ಸ್ವಂತ ವ್ಯಾಪಾರದಲ್ಲಿ ಅಲ್ಪ ಲಾಭ ಬರುವುದು. ಶುಭಸಂಖ್ಯೆ: 5

    ವೃಷಭ: ಸರ್ಕಾರಿ ಕೆಲಸದಲ್ಲಿ ಮಂದಗತಿ. ಮನೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುವುದು. ಸಾಧಾರಣ ಫಲ ದೊರೆಯುವುದು. ಶುಭಸಂಖ್ಯೆ:3

    ಮಿಥುನ: ಮನೆಯಲ್ಲಿ ದೇವತಾ ಕಾರ್ಯ. ಇತರರ ಭಾವನೆಗಳಿಗೆ ಸ್ಪಂದಿಸುವಿರಿ. ನಿರೀಕ್ಷಿತ ಆದಾಯ.ಮಕ್ಕಳೊಂದಿಗೆ ವಿನಾಕಾರಣ ನಿಷ್ಠುರ.ಶುಭಸಂಖ್ಯೆ: 9

    ಕಟಕ: ಹೊಸ ವ್ಯಕ್ತಿಗಳ ಪರಿಚಯವಾಗುವುದು. ಹಿರಿಯರೊಂದಿಗೆ ಮಾತುಕತೆ. ಗೆಳತಿಗೆ ಸಹಾಯ ಮಾಡುವಿರಿ. ಮನಸ್ಸಿನಲ್ಲಿ ಸಂಕಟ. ಶುಭಸಂಖ್ಯೆ:6

    ಸಿಂಹ: ಗುತ್ತಿಗೆ ಕೆಲಸಗಾರರಿಗೆ ಅನುಕೂಲ. ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ. ಆರೋಗ್ಯ ಸಮಸ್ಯೆ ಕಾಡಬಹುದು. ಶುಭಸಂಖ್ಯೆ:2

    ಕನ್ಯಾ: ದಾನ ಧರ್ಮ ಕಾರ್ಯಗಳಲ್ಲಿ ಭಾಗಿ. ಧನಾತ್ಮಕ ಚಿಂತನೆಯಿಂದ ಯಶಸ್ಸು. ಮಹಿಳೆಯರಿಗೆ ವಿಶೇಷ ದಿನ. ವಿದೇಶ ಪ್ರವಾಸ ರದ್ದು. ಶುಭಸಂಖ್ಯೆ: 6

    ತುಲಾ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಆಯ್ಕೆ. ಉದ್ಯೋಗ ಪ್ರಾಪ್ತಿ. ಸಾಲಬಾಧೆ ನಿವಾರಣೆ. ಗ್ಯಾಸ್ಟ್ರಿಕ್ ಸಮಸ್ಯೆ. ಕಾಲು ನೋವು. ಶುಭಸಂಖ್ಯೆ: 4

    ವೃಶ್ಚಿಕ: ಅತಿ ಒಳ್ಳೆಯತನದಿಂದ ಮೋಸ ಹೋಗುವಿರಿ. ಬೇಜವಾಬ್ದಾರಿಯಿಂದ ಸಂಕಷ್ಟ. ಮನಕ್ಲೇಷ. ಕೋರ್ಟ್ ಕೆಲಸಗಳಲ್ಲಿ ಚಿಂತೆ. ಶುಭಸಂಖ್ಯೆ:2

    ಧನಸ್ಸು: ವಿರಳವಸ್ತು ಪ್ರಾಪ್ತಿ. ಅತಿಯಾದ ನಿದ್ರೆ ಆವರಿಸುವುದು. ಮಿತ್ರರಿಂದ ಸಹಾಯ. ಕಲಾವಿದರಿಗೆ ಕಾರ್ಯಸಾಧನೆ. ಅಧಿಕಾರ-ಪ್ರಾಪ್ತಿ. ಶುಭಸಂಖ್ಯೆ:3

    ಮಕರ: ಮಾನಸಿಕ ವೇದನೆ. ಕೆಟ್ಟ ಆಲೋಚನೆ. ವಿವಾಹ ಯೋಗ. ಅಕಾಲ ಭೋಜನದಿಂದ ಅನಾರೋಗ್ಯ. ವ್ಯಾಸಂಗದಲ್ಲಿ ತೊಂದರೆ. ಶುಭಸಂಖ್ಯೆ:7

    ಕುಂಭ: ಆತ್ಮೀಯರಿಂದ ಸಹಾಯ. ಖರ್ಚು. ಸ್ಥಿರಾಸ್ತಿ ಖರೀದಿ. ಪ್ರಿಯ ಜನರ ಭೇಟಿ. ಪರರ ಧನ ಪ್ರಾಪ್ತಿ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಶುಭಸಂಖ್ಯೆ:2

    ಮೀನ: ಕೆಲಸದಲ್ಲಿ ಮತ್ತಷ್ಟು ಏಕಾಗ್ರತೆ. ದುಷ್ಟ ಜನರ ಸಹವಾಸ. ವಾತ ರೋಗಗಳಿಂದ ತೊಂದರೆ.ಸಾಹಿತಿ, ಪತ್ರಕರ್ತರಿಗೆ ಹೆಚ್ಚಿದ ಒತ್ತಡ.ಶುಭಸಂಖ್ಯೆ: 6

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts