More

    ಅನುದಾನ ಹಂಚಿಕೆಯಲ್ಲಿ ತಾರತಮ್ಯ; ಸುಪ್ರಿಂ ಕೋರ್ಟ್ ಚಾಟಿ ಬೀಸಿದ್ದು ಬಿಜೆಪಿ ದುರಾಡಳಿತಕ್ಕೆ‌ ನಿದರ್ಶನ: ಸಚಿವ ಶಿವಾನಂದ ಪಾಟೀಲ್

    ವಿಜಯಪುರ: ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿರುವ ಕೇಂದ್ರ ಸರ್ಕಾರಕ್ಕೆ ನ್ಯಾಯಾಂಗವೇ ಚಾಟಿ ಬೀಸಿದೆ ಎಂದರೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ಹಂತಕ್ಕೆ ತಲುಪಿದೆ ಎಂಬುದಕ್ಕೆ ನಿದರ್ಶನ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

    ಇದನ್ನೂ ಓದಿ: ಕೇವಲ 3 ಸೆಕೆಂಡ್‌ಗಳಲ್ಲಿ ಮೂರು ದೇಶಗಳನ್ನು ಸುತ್ತಿದ ಯುವತಿ; ಅಬ್ಬಾ ಇದು… ಚೆನ್ನಾಗಿರೋದು ಅಂದ್ರೆ

    ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಭೀಕರ ಬರದಲ್ಲೂ ಬರ ಪರಿಹಾರ ನೀಡದ ಕೇಂದ್ರ ಸರ್ಕಾರದ ತಾರತಮ್ಯ ನೀತಿಗೆ ಸುಪ್ರೀಂ ಕೋರ್ಟ್​ ಸಹ ಚಾಟಿ ಬೀಸಿದೆ. ಉದ್ಯೋಗ ಖಾತ್ರಿ ಯೋಜನೆಗೂ ಅನುದಾನ ನೀಡುತ್ತಿಲ್ಲ. ಹೀಗಾಗಿ ಪ್ರತಿಯೊಂದು ಸಮಸ್ಯೆಗೂ ಸುಪ್ರಿಂ ಕೋರ್ಟ್ ಬಾಗಿಲು ತಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ನೇರ ವಾಗ್ದಾಳಿ ನಡೆಸಿದರು.

    ಕೃಷ್ಣಾ ನ್ಯಾಯಾಧೀಕರಣದ ವಿಚಾರದಲ್ಲಿ ಡಬ್ಬಲ್ ಇಂಜಿನ್ ಸರ್ಕಾರ ಯಾವುದೇ ಮಹತ್ವದ ನಿರ್ಣಯ ಕೈಗೊಳ್ಳಲಿಲ್ಲ. ರಕ್ತದಲ್ಲಿ ಪತ್ರ ಬರೆದು ನಾಟಕ ಮಾಡಿದವರು ಈಗ ಎಲ್ಲಿ ಇದ್ದಾರೆ? ಇವರ ಸುಳ್ಳು ಹೇಳಿಕೆಯಿಂದಾಗಿಯೇ ಜನ ಡಬ್ಬಲ್ ಇಂಜಿನ್ ಸರ್ಕಾರವನ್ನು ಸಿಂಗಲ್ ಇಂಜಿನ್ ಮಾಡಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ ಆ ಸಿಂಗಲ್ ಇಂಜಿನ್ ಕೂಡ ಹೋಗಲಿದೆ ಎಂದು ಲೇವಡಿ ಮಾಡಿದರು.

    ಇದನ್ನೂ ಓದಿ: ಮಧ್ಯರಾತ್ರಿ ಚಾಕೋಲೆಟ್​, ಐಸ್​ಕ್ರೀಂ ತಿನ್ನಬೇಕು ಅನಿಸುತ್ತಾ? ಇದರ ಹಿಂದಿರುವ ಕಾರಣ ಬಿಚ್ಚಿಟ್ಟಿದ್ದಾರೆ ಸಂಶೋಧಕರು

    ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಇಡಿ, ಐಟಿ, ಸಿಬಿಐ ದುರ್ಬಳಿಕೆ ಮಾಡಿಕೊಳ್ಳುತ್ತಿದೆ. ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿನಲ್ಲಿಟ್ಟು ಚುನಾವಣೆ ನಡೆಸುತ್ತಿರುವುದು ದೇಶದ ಇತಿಹಾಸದಲ್ಲಿಯೇ ಕಪ್ಪು ಚುಕ್ಕೆ. ರಾಷ್ಟ್ರದಲ್ಲಿ ಸಾಮರಸ್ಯದಿಂದ ಬದುಕುವ ವಾತಾವರಣ ಇಲ್ಲ. ಬೆಲೆ ಏರಿಕೆಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ, ಚಿನ್ನ ಏರಿಕೆಯಾಗಿದೆ, ಕಬ್ಬಿಣದ ತಾಳಿ ಮಾಡಿಸುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜನ ಬಿಜೆಪಿ ಬಗ್ಗೆ ಬೇಸರ ಹೊಂದಿದ್ದಾರೆ ಎಂದರು.

    ಕೋಟ್-1:
    ಆರು ಬಾರಿ ಅವಕಾಶ ಕೊಟ್ಟರೂ ರಮೇಶ ಜಿಗಜಿಣಗಿ ಕೊಡುಗೆ ಶೂನ್ಯ‌. ಸ್ಮಾರ್ಟ್ ಸಿಟಿ ಮಾಡಲಿಲ್ಲ. ಐತಿಹಾಸಿಕ ಗೋಳಗುಮ್ಮಟಕ್ಕೆ ಸಣ್ಣ ಲಿಫ್ಟ್ ಒದಗಿಸುವ ಕೆಲಸ ಇವರಿಂದ ಆಗಿಲ್ಲ. ಟೂರಿಸ್ಟ್ ಬಸ್ ಇಲ್ಲ. ಎನ್​ಟಿಪಿಸಿಗಾಗಿ ರೈಲ್ವೆ ಡಬ್ಬಲ್ ಮಾರ್ಗ ಆಯ್ತು ವಿನಃ ಜಿಗಜಿಣಗಿ ಕೊಡುಗೆ ಅಲ್ಲ. ರೈಲ್ವೆ ಸಂಪರ್ಕ ಸಮರ್ಪಕವಾಗಿಲ್ಲ. ತೋಟಗಾರಿಕೆ ಜಿಲ್ಲೆಯಾಗಿರುವ ವಿಜಯಪುರಕ್ಕೆ ಬೃಹತ್ ಕೈಗಾರಿಕೆ ತರಲಿಲ್ಲ. ಜಿಲ್ಲೆಯ ಬೆಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ಕೆಲಸ ಆಗಿಲ್ಲ. ಒಣದ್ರಾಕ್ಷಿ ಬೆಲೆ ಬಿದ್ದಿದ್ದು, ಬೆಂಬಲ ಬೆಲೆ ಒದಗಿಸುವ ಕೆಲಸ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಗೆಲುವು ನಿಶ್ಚಿತ ಎಂದು ಹೇಳಿದರು.

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts