More

    ಮಧ್ಯರಾತ್ರಿ ಚಾಕೋಲೆಟ್​, ಐಸ್​ಕ್ರೀಂ ತಿನ್ನಬೇಕು ಅನಿಸುತ್ತಾ? ಇದರ ಹಿಂದಿರುವ ಕಾರಣ ಬಿಚ್ಚಿಟ್ಟಿದ್ದಾರೆ ಸಂಶೋಧಕರು

    ಬೆಂಗಳೂರು: ನಮ್ಮಲ್ಲಿ ಅನೇಕರಿಗೆ ಕೇವಲ ರಾತ್ರಿ ವೇಳೆಯಲ್ಲ, ಮಧ್ಯರಾತ್ರಿಯ ಸಮಯದಲ್ಲಿ ಸಿಹಿ ಪದಾರ್ಥಗಳಾದ ಚಾಕೊಲೇಟ್ ಅಥವಾ ಐಸ್ ಕ್ರೀಮ್ ತಿನ್ನುವ ಅಭ್ಯಾಸವಿದೆ. ಹೌದು, ಬಹುತೇಕರಿಗೆ ಈ ಅಭ್ಯಾಸ ದಿನನಿತ್ಯವೂ ಇರಬಹುದು ಅಥವಾ ವಾರಕ್ಕೆ ಎರಡರಿಂದ ಮೂರು ಬಾರಿಯಾದರು ಇರಬಹುದು. ಒಟ್ಟಿನಲ್ಲಿ ತಿನ್ನುವುದನ್ನು ರೂಢಿಸಿಕೊಂಡಿರುತ್ತಾರೆ. ಅದರಲ್ಲೂ ಫ್ರೀಡ್ಜ್​ಯಿದ್ದರೆ ಕೇಳಬೇಕೆ? ಐಸ್​ ಕ್ರೀಂ, ಚಾಕೊಲೇಟ್​ನಿಂದಲೇ ಫ್ರೀಸರ್​ ತುಂಬಿ ಹೋಗಿರುತ್ತದೆ. ಆದರೆ, ಸಂಶೋಧಕರು ಹೇಳುವ ಪ್ರಕಾರ ಈ ಅಭ್ಯಾಸದ ಹಿಂದೆ ಬಲವಾದ ಕಾರಣ ಇರುವುದು ನಿಜ ಎಂದು ಅಚ್ಚರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.

    ಇದನ್ನೂ ಓದಿ:ಐಶ್ವರ್ಯ ಫಸ್ಟ್​ನೈಟ್​​ ದಿನ ಮಂಚವೇ ಮುರಿದು ಹೋಗಿತ್ತು; ಮಧುಚಂದ್ರದ ಅಜ್ಞಾತ ಸ್ಟೋರಿ ರಿವೀಲ್…

    JAMA ನೆಟ್‌ವರ್ಕ್ ಓಪನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಒಂಟಿತನವು ಸಕ್ಕರೆ ಅಂಶವುಳ್ಳ ಆಹಾರಗಳ ತೀವ್ರ ಬಯಕೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ. ಅಧ್ಯಯನವನ್ನು ನಡೆಸಲು, ಸಂಶೋಧಕರು ಸಾಮಾಜಿಕವಾಗಿ ಪ್ರತ್ಯೇಕವಾಗಿರುವ ವ್ಯಕ್ತಿಗಳಿಂದ ಮೆದುಳಿನ ರಸಾಯನಶಾಸ್ತ್ರವನ್ನು ಕಳಪೆ ಮಾನಸಿಕ ಆರೋಗ್ಯ, ತೂಕ ಹೆಚ್ಚಾಗುವುದು, ಅರಿವಿನ ನಷ್ಟ ಮತ್ತು ಟೈಪ್ 2 ಡಯಾಬಿಟೀಸ್​ ಮತ್ತು ಸ್ಥೂಲಕಾಯದಂತಹ ದೀರ್ಘಕಾಲದ ಕಾಯಿಲೆಗಳಿಗೆ ಲಿಂಕ್ ಮಾಡಿದ್ದಾರೆ.

    ಈ ಕುರಿತು ನಡೆಸಿದ ಅಧ್ಯಯನದ ಪ್ರಕಾರ, ಒಂಟಿತನ ಅಥವಾ ಒಂದು ಕೋಣೆಯಲ್ಲಿ ಇರಲು ಬಯಸುವ ವ್ಯಕ್ತಿಗಳಲ್ಲಿ ಹೆಚ್ಚಿನ ದೇಹದ ಕೊಬ್ಬಿನಾಂಶದ ಪ್ರಮಾಣ ಇರುತ್ತದೆ. ಇದಲ್ಲದೆ, ಅವರ ಆಹಾರ ಪದ್ಧತಿಯಲ್ಲಿ ಭಾರೀ ಬದಲಾವಣೆ ಆಗಿರುತ್ತದೆ. ಅದು ಅತೀಯಾಗಿ ಊಟ ಸೇವಿಸುವುದು ಅಥವಾ ನಿಯಂತ್ರಣ ಇಲ್ಲದೆ ತಿನ್ನುವುದು ಸಹ ಇರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

    ಇದನ್ನೂ ಓದಿ: ಮದ್ವೆ ಮಂಟಪಕ್ಕೆ ನುಗ್ಗಿ ಖಾರದಪುಡಿ ಎರಚಿ ಕಿಡ್ನಾಪ್​ ಮಾಡಲು ಯತ್ನಿಸಿದ್ರೂ ಪ್ರೇಯಸಿಯನ್ನು ಬಿಟ್ಟುಕೊಡದ ಪ್ರಿಯಕರ!

    ಮಧ್ಯರಾತ್ರಿಯಲ್ಲಿ ಚಾಕೋಲೆಟ್ ಅಥವಾ ಐಸ್​ಕ್ರೀಂನಂತಹ ಸಿಹಿ ಪದಾರ್ಥಗಳನ್ನು ಸೇವಿಸುವ ಅಭ್ಯಾಸವು ಒಂಟಿತನದ ಒಂದು ಕಾರಣವಿರಬಹುದು ಎಂದು ಸಂಶೋಧಕರು ತಾವು ನಡೆಸಿದ ಅಧ್ಯಯನದ ಆಧಾರದ ಮೇರೆಗೆ ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts