More

    ಮೂರೇ ನಿಮಿಷದಲ್ಲಿ ಈ ಸ್ಕೂಟರ್​ ಕಾರ್​ ಆಗುತ್ತೆ.. ಸ್ಟಾರ್ಟಪ್​ನ ವಿನೂತನ ಆವಿಷ್ಕಾರ!

    ನವದೆಹಲಿ: ವಿಲನ್ ತನ್ನ ವಾಹನದಲ್ಲಿ ಅತ್ಯಂತ ವೇಗವಾಗಿ ಸಂಚರಿಸುತ್ತಿರುತ್ತಾನೆ. ಹೀರೋ ತನ್ನ ಬೈಕ್​ನಲ್ಲಿ ಅವನನ್ನು ಬೆನ್ನತ್ತುತ್ತಾನೆ. ಅಲ್ಲಿಯವರೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ನಾಯಕ ಒಂದು ಗುಂಡಿಯನ್ನು ಒತ್ತಿದರೆ ಆ ವಾಹನವು ಶಕ್ತಿಶಾಲಿ ರೇಸಿಂಗ್ ಕಾರ್ ಆಗಿ ಬದಲಾಗುತ್ತದೆ… ಇಂತಹ ದೃಶ್ಯ ಸಾಮಾನ್ಯವಾಗಿ ಹಾಲಿವುಡ್ ಸಾಹಸ ಚಿತ್ರಗಳಲ್ಲಿ ಕಂಡುಬರುತ್ತವೆ. ಆದರೆ, ಇದು ನಿಜ ಜೀವನದಲ್ಲೂ ನಡೆದರೆ? ಹೌದು ಬೈಕ್​ ತ್ರಿಚಕ್ರವಾಹನ(ಕಾರ್​)ವಾಗಿ ಮಾರ್ಪಡುವ ಆವಿಷ್ಕಾರವಾಗಿದೆ!

    ಇದನ್ನೂ ಓದಿ: ಅಮೆರಿಕದಲ್ಲೂ ಡೀಪ್‌ಫೇಕ್ ಸಂಚಲನ: ಅಧ್ಯಕ್ಷ ಬಿಡೆನ್ ಧ್ವನಿ ನಕಲು – ಕಳವಳ ವ್ಯಕ್ತಪಡಿಸಿದ ಶ್ವೇತಭವನ!

    ಹೀರೋ ಮೋಟೋಕಾರ್ಸ್‌ನ ಸರ್ಜ್ ಸ್ಟಾರ್ಟ್ಅಪ್ ಹೊಸ ವಾಹನವನ್ನು ವಿನ್ಯಾಸಗೊಳಿಸಿದ್ದು ಎಲೆಕ್ಟ್ರಿಕ್ ಸ್ಕೂಟರ್ ಸೆಕೆಂಡುಗಳಲ್ಲಿ ಕಾರ್​ ಆಗಿ ಪರಿವರ್ತಿಸಬಹುದಾಗಿದೆ. ಇತ್ತೀಚೆಗೆ ನಡೆದ ‘ಹೀರೋ ವರ್ಲ್ಡ್’ ಕಾರ್ಯಕ್ರಮದಲ್ಲಿ ಇದನ್ನು ಪ್ರದರ್ಶಿಸಲಾಯಿತು.

    ಈ ವಾಹನವನ್ನು ಸರ್ಚ್32 ಎಂದು ಕರೆಯಲಾಗಿದೆ. ಇದನ್ನು ವಿಶೇಷವಾಗಿ ಸ್ವಯಂ ಉದ್ಯೋಗಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಇದು ಟು-ಇನ್-ಒನ್ ಎಲೆಕ್ಟ್ರಿಕ್ ವಾಹನವಾಗಿದೆ.

    ಇದನ್ನು ಅವಶ್ಯಕತೆಗೆ ಅನುಗುಣವಾಗಿ ಬದಲಾಯಿಸಬಹುದು. ಬೈಕ್​ ಮೂರು ಚಕ್ರ(ಕಾರ್​)ನಂತೆ ವಿಂಡ್‌ಸ್ಕ್ರೀನ್, ಹೆಡ್‌ಲ್ಯಾಂಪ್, ಟರ್ನ್ ಇಂಡಿಕೇಟರ್‌ಗಳು, ವಿಂಡ್‌ಸ್ಕ್ರೀನ್ ವೈಪರ್‌ಗಳನ್ನು ಕೇವಲ ಮೂರು ನಿಮಿಷಗಳಲ್ಲಿ ವ್ಯಾಪಾರ, ವೈಯಕ್ತಿಕ ಅಗತ್ಯಗಳಿಗಾಗಿ ಬದಲಿಸಬಹುದು. ಅಗತ್ಯವೆನಿಸಿದರೆ ಬಳಿಕ 3ನಿಮಿಷದಲ್ಲಿ 2 ವೀಲರ್ ಆಗಿ ಪರಿವರ್ತಿಸಬಹುದು.

    ಹೊಸ ಮಾದರಿಯ ವಾಹನಗಳಲ್ಲಿ ತ್ರಿಚಕ್ರ ಮತ್ತು ದ್ವಿಚಕ್ರವಾಗಿ ಬದಲಾಯಿಸಬಹುದಾದ ಈ ವಾಹನಗಳು ವಿಭಿನ್ನ ಸಾಮರ್ಥ್ಯ ಹೊಂದಿವೆ. ತ್ರಿಚಕ್ರ ವಾಹನ(ಕಾರ್​)ದಲ್ಲಿ 10ಕೆವಿ ಎಂಜಿನ್ ನೀಡಲಾಗಿದೆ. 11ಕೆಡಬ್ಲ್ಯೂಎ ಬ್ಯಾಟರಿ ನೀಡಲಾಗಿದೆ. ಸ್ಕೂಟರ್ 3ಕೆಡಬ್ಲ್ಯೂಎಂಜಿನ್ ಹೊಂದಿದೆ. ವೈಯಕ್ತಿಕ ಅಗತ್ಯಗಳಿಗೆ ಸರಿಹೊಂದುವಂತೆ 3.5 ಡಬ್ಲ್ಯೂಎಚ್​ ಬ್ಯಾಟರಿಯನ್ನು ಅಳವಡಿಸಲಾಗಿದೆ.

    ತ್ರಿಚಕ್ರ ವಾಹನ(ಕಾರ್​)ದ ಗರಿಷ್ಠ ವೇಗ ಗಂಟೆಗೆ 50 ಕಿ.ಮೀ. 500 ಕೆಜಿ ವರೆಗೆ ತೂಕವನ್ನು ಸಾಗಿಸಬಹುದು. ದ್ವಿಚಕ್ರ ವಾಹನವು ಗರಿಷ್ಠ 60 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಬ್ಯಾಟರಿ ವ್ಯಾಪ್ತಿಯ ವಿವರಗಳು ತಿಳಿದಿಲ್ಲ.

    ಬಿಜೆಪಿಯಿಂದ ಪ್ರತಿ ಶಾಸಕರಿಗೆ 25 ಕೋಟಿ ರೂ. ಆಮಿಷ: ಕೇಜ್ರಿವಾಲ್ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts