More

    ಅಮೆರಿಕದಲ್ಲೂ ಡೀಪ್‌ಫೇಕ್ ಸಂಚಲನ: ಅಧ್ಯಕ್ಷ ಬಿಡೆನ್ ಧ್ವನಿ ನಕಲು – ಕಳವಳ ವ್ಯಕ್ತಪಡಿಸಿದ ಶ್ವೇತಭವನ!

    ವಾಷಿಂಗ್ಟನ್: ಅಮೆರಿಕದಲ್ಲಿ ಡೀಪ್‌ಫೇಕ್ ಸಂಚಲನ ಮೂಡಿಸುತ್ತಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಜನಪ್ರಿಯ ಗಾಯಕ ಟೇಲರ್ ಸ್ವಿಫ್ಟ್ ಅವರ ತನಕ ಬಂದು ನಿಂತಿದೆ. ಬಿಡೆನ್ ಅವರ ಧ್ವನಿಯನ್ನು ಅನುಕರಿಸುತ್ತ ಮೊದಲೇ ರೆಕಾರ್ಡ್​ ಮಾಡಿದ ಫೇಕ್​ ಕಾಲ್ಸ್​ ಬರುತ್ತಿದ್ದು, ಇದಕ್ಕೆ ವೈಟ್​ಹೌಸ್​ ಕಳವಳ ವ್ಯಕ್ತಪಡಿಸಿದೆ.

    ಇದನ್ನೂ ಓದಿ: ಬಿಹಾರ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ: ಸೋನಿಯಾ ಕರೆ ನಿರ್ಲಕ್ಷಿಸಿದ ನಿತೀಶ್ – ಇಂದೇ ಕ್ಲೈಮ್ಯಾಕ್ಸ್​​..!

    “ಸುಳ್ಳು ಚಿತ್ರಗಳು ಮತ್ತು ಮಾಹಿತಿಯ ಹರಡುವಿಕೆಯ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸು್ತಿದ್ದೇವೆ. ಸಮಸ್ಯೆಯನ್ನು ಪರಿಹರಿಸಲು ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ” ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಹೇಳಿದರು.
    ಇದನ್ನು ತಡೆಯುವಲ್ಲಿ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತವೆ. ಆದರಲ್ಲೂ ‘X'(ಟ್ವಿಟ್ಟರ್) ನಂತಹ ಸಂಸ್ಥೆಗಳು ನಿರ್ಬಂಧಗಳನ್ನು ವಿಧಿಸಿದ್ದರೂ ಟೇಲರ್ ಸ್ವಿಫ್ಟ್ ಗೆ ಸಂಬಂಧಿಸಿದ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲು ಸಾಧ್ಯವಾಗಲಿಲ್ಲ. ಅವು ನೆಟ್‌ನಲ್ಲಿ 17 ಗಂಟೆಗಳ ಕಾಲ ಪ್ರಸಾರವಾಗಿವೆ. 45 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಸ್ವೀಕರಿಸಲಾಗಿದೆ. ಈ ಚಿತ್ರಗಳ ವಿರುದ್ಧ ಅವರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತೋರುತ್ತದೆ.
    ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಉಮೇದುವಾರಿಕೆಗಾಗಿ ಪ್ರಸ್ತುತ ಪ್ರಾಥಮಿಕ ಚುನಾವಣೆಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲೇ ಕಳೆದ ವಾರ ನ್ಯೂಹ್ಯಾಂಪ್‌ಶೈರ್‌ನಲ್ಲಿ ಪ್ರಾಥಮಿಕ ಚುನಾವಣೆ ನಡೆದಿತ್ತು. ಈ ಸಂದರ್ಭದಲ್ಲಿ ಅಲ್ಲಿನ ಮತದಾರರಿಗೆ ಬ್ರೈಡನ್ ಹೇಳಿದಂತೆ ಮೊದಲೇ ರೆಕಾರ್ಡ್ ಮಾಡಿದ ಕೆಲವು ಮೊಬೈಲ್​ ಕರೆಗಳು ಬಂದವು. ಈ ಬಾರಿಯ ಚುನಾವಣೆಯಲ್ಲಿ ಮತ ಹಾಕಬೇಡಿ ಎಂದು ಮತದಾರರಲ್ಲಿ ಕೇಳಿಕೊಂಡಿದ್ದು ಅದರ ಸಾರಾಂಶವಾಗಿತ್ತು.
    ಕೃತಕ ಬುದ್ಧಿಮತ್ತೆ(ಎಐ) ರಚಿತ ಕರೆಗಳ ಮೇಲೆ ಅಧಿಕಾರಿಗಳು ಈಗಾಗಲೇ ಕ್ರಮವನ್ನು ಪ್ರಾರಂಭಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ತಂತ್ರಜ್ಞಾನ ಅಭ್ಯರ್ಥಿಗಳನ್ನು ಕಂಗೆಡಿಸುತ್ತಿದೆ. ಬಿಡೆನ್ ಅವರ ಧ್ವನಿಯನ್ನು ಅನುಕರಿಸುವ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

    ಇತ್ತೀಚಿನ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಿದ ಐಶ್ವರ್ಯಾ.. ರಜನಿಕಾಂತ್ ಕಣ್ಣೀರು ಹಾಕಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts