More

    ಬಿಹಾರ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ: ಸೋನಿಯಾ ಕರೆ ನಿರ್ಲಕ್ಷಿಸಿದ ನಿತೀಶ್ – ಇಂದೇ ಕ್ಲೈಮ್ಯಾಕ್ಸ್​​..!

    ಪಾಟನಾ: ಲೋಕಸಭೆ ಚುನಾವಣೆಗೂ ಮುನ್ನ ಬಿಹಾರದ ರಾಜಕೀಯ ನಾಟಕೀಯವಾಗಿ ಬದಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯಗಳಿರುವ ಹೊತ್ತಿನಲ್ಲಿಯೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮತ್ತೆ ಬಿಜೆಪಿ ಜತೆ ಕೈಜೋಡಿಸಲು ಯತ್ನಿಸುತ್ತಿದ್ದಾರೆ ಎಂಬ ವರದಿಗಳಿವೆ. ಇದು ನಿಜವಾದರೆ ಕೇಂದ್ರದ ಪ್ರತಿಪಕ್ಷ ‘INDIA’ ಒಕ್ಕೂಟಕ್ಕೆ ಪ್ರಬಲ ಹಿನ್ನಡೆಯಾಗಲಿದೆ. ಈ ಊಹಾಪೋಹಗಳ ಮಧ್ಯೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ನಿತೀಶ್ ಅವರಿಗೆ ಕರೆ ಮಾಡಿದ್ದರು. ಆದರೆ, ಸೋನಿಯಾಗಾಂಧಿ ಅವರೊಂದಿಗೆ ಮಾತನಾಡಲು ನಿತಿಷ್​ ಕುಮಾರ್​ ಹಿಂದೇಟು ಹಾಕಿದ್ದಾರೆ ಎಂದು ವರದಿಯಾಗಿದೆ.

    ಇದನ್ನೂ ಓದಿ: ಇತ್ತೀಚಿನ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಿದ ಐಶ್ವರ್ಯಾ.. ರಜನಿಕಾಂತ್ ಕಣ್ಣೀರು ಹಾಕಿದ್ದೇಕೆ?

    ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಇದೇ ತಿಂಗಳ 30 ರಂದು ಬಿಹಾರವನ್ನು ಪ್ರವೇಶಿಸಲಿದೆ. ಈ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕೈ ಪಕ್ಷ ಈಗಾಗಲೇ ಜೆಡಿಯು ನಾಯಕ ಹಾಗೂ ಸಿಎಂ ನಿತೀಶ್‌ ಕುಮಾರ್​ ಅವರಿಗೆ ಆಹ್ವಾನ ನೀಡಿದೆ. ಶುಕ್ರವಾರ ಸೋನಿಯಾ ಗಾಂಧಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಲು ಪ್ರಯತ್ನಿಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ಬಹಿರಂಗಪಡಿಸಿವೆ. ಆದರೆ, ಸಿಎಂ ಆ ಕರೆಗಳನ್ನು ನಿರ್ಲಕ್ಷಿಸಿದ್ದಾರೆ. ಯಾತ್ರೆಯಲ್ಲಿ ಭಾಗವಹಿಸದಿರಲು ರಾಹುಲ್ ಈಗಾಗಲೇ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಮೈತ್ರಿ ಪತನವಾಗಲಿದೆ ಎಂಬ ಊಹಾಪೋಹಗಳಿಗೆ ಈ ಸುದ್ದಿ ಇನ್ನಷ್ಟು ಬಲ ನೀಡಿದೆ.

    ಬಿಹಾರ ಬಿಕ್ಕಟ್ಟು: ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ತಲ್ಲಣಗಳು ಎಲ್ಲೆ ಮೀರಿದ್ದು ಹೊಸ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾದಂತಿದೆ. ರಾಜ್ಯ ರಾಜಕಾರಣ ವೇಗವಾಗಿ ಬದಲಾಗುತ್ತಿದೆ. ಭಾನುವಾರ ಮಹತ್ವದ ಬೆಳವಣಿಗೆಗಳು ನಡೆಯಲಿವೆ ಎಂದು ವರದಿಯಾಗಿದೆ.
    ನಿತೀಶ್ ಕುಮಾರ್ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರಿ ಹೊಸದಾಗಿ ಮೈತ್ರಿ ಸರ್ಕಾರ ರಚಿಸುತ್ತಾರೆ ಎಂಬ ಊಹಾಪೋಹಗಳು ಬಲವಾಗಿರುವ ಹೊತ್ತಿನಲ್ಲೇ, ಅವರು ಭಾನುವಾರ(ಜ.27) ಸಿಎಂ ನಿವಾಸದಲ್ಲಿ ಜೆಡಿಯುನ ಎಲ್ಲಾ ಶಾಸಕರ ಸಭೆ ಕರೆದಿದ್ದಾರೆ. ಮತ್ತೊಂದೆಡೆ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಸಹ ಸರ್ಕಾರವನ್ನು ರಚಿಸಲು ತಂತ್ರಗಾರಿಕೆ ಹೆಣೆದಿವೆ.
    13 ಕಾಂಗ್ರೆಸ್ ಶಾಸಕರ ಫೋನ್ ನಾಟ್‌ ರೀಚಬಲ್:
    ಇದೆಲ್ಲದರ ಮಧ್ಯೆ 13 ಕಾಂಗ್ರೆಸ್ ಶಾಸಕರ ಮೊಬೈಲ್ ಫೋನ್ ನಾಟ್‌ ರೀಚಬಲ್ ಆಗಿದೆ. ಅವರು ಬಿಜೆಪಿ ಮತ್ತು ಜೆಡಿಯು ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ನಿತೀಶ್ ಮನವೊಲಿಕೆಗೆ ಸೋನಿಯಾ ಗಾಂಧಿ ಯತ್ನಿಸಿದ್ದಾರೆ. ಇದರ ನಡುವೆ ಬಿಹಾರ ಕಾಂಗ್ರೆಸ್ ಉಸ್ತುವಾರಿ ಮೋಹನ್ ಪ್ರಕಾಶ್ ಪಕ್ಷದ 14 ಶಾಸಕರೊಂದಿಗೆ ಮಾತುಕತೆ ನಡೆಸಿದ್ದು, ಬದಲಾದ ರಾಜಕೀಯ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ಪೂರ್ಣಿಯಾದಲ್ಲಿ ನಡೆಸಲು ಉದ್ದೇಶಿಸಿದ್ದ ಪಕ್ಷದ ರ್ಯಾಲಿಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ.

    ಸದ್ಯ ಜೆಡಿಯು 45, ಬಿಜೆಪಿ 76 ಮತ್ತು ಜಿತನ್ ರಾಮ್ ಮಾಂಝಿ ಅವರ ಎಚ್‌ಎಎಂ 4 ಶಾಸಕರನ್ನು ಹೊಂದಿದೆ. ಈ ಮೂರು ಪಕ್ಷಗಳು ಒಟ್ಟಾಗಿ 125 ಶಾಸಕರನ್ನು ಹೊಂದಿದ್ದು, ಇದು ಸರ್ಕಾರ ರಚಿಸಲು ಅಗತ್ಯವಿರುವ 122 ಮ್ಯಾಜಿಕ್ ನಂಬರ್​ಗಿಂತ ಮೂರು ಸ್ಥಾನ ಹೆಚ್ಚು ಇದೆ. ಮತ್ತೊಂದೆಡೆ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕೂಡ ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪ್ರಸ್ತುತ ಆರ್‌ಜೆಡಿಯ 79, ಕಾಂಗ್ರೆಸ್‌ನ 19 ಮತ್ತು ಎಡಪಕ್ಷಗಳ 16 ಶಾಸಕರಿದ್ದಾರೆ. ಹೀಗಿರುವಾಗ ಯಾವ ಶಾಸಕರು ಯಾವ ಕಡೆ ಹಾರುತ್ತಾರೆ ಎಂಬುದರ ಮೇಲೆ ನಿತೀಶ್ ಕುಮಾರ್ ಸರ್ಕಾರದ ಭವಿಷ್ಯ ನಿಂತಿದೆ.

    ಈ ಬಾರಿ ಪದ್ಮಭೂಷಣ ಪಡೆದ ಏಕೈಕ ವಿದೇಶಿಯ ‘ಯಾಂಗ್ ಲಿ’: ಕೋಲಾರಕ್ಕೂ ಅವರಿಗೇನು ನಂಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts