More

    ಈ ಬಾರಿ ಪದ್ಮಭೂಷಣ ಪಡೆದ ಏಕೈಕ ವಿದೇಶಿಯ ‘ಯಾಂಗ್ ಲಿ’: ಕೋಲಾರಕ್ಕೂ ಅವರಿಗೇನು ನಂಟು?

    ನವದೆಹಲಿ: ತೈವಾನ್‌ನ ಎಲೆಕ್ಟ್ರಾನಿಕ್ಸ್ ಉತ್ಪಾದನಾ ದೈತ್ಯ ಫಾಕ್ಸ್‌ಕಾನ್ ಗ್ರೂಪ್‌ನ ಸಿಇಒ ಮತ್ತು ಅಧ್ಯಕ್ಷ ಯಾಂಗ್ ಲಿ ಅವರಿಗೆ ಈ ಬಾರಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. 75 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾದ ಪ್ರಶಸ್ತಿಗಳಲ್ಲಿ ಅವರಿಗೆ ದೇಶದ ಮೂರನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಯನ್ನು ನೀಡಲಾಯಿತು.

    ಇದನ್ನೂ ಓದಿ: ಜಾಹೀರಾತಿನಲ್ಲಿ ಕಾಣಿಸಿಕೊಂಡ ಡಿವೈನ್‌ ಸ್ಟಾರ್: ರಾಮ್ ರಾಜ್ ಕಾಟನ್ ಸಂಸ್ಥೆಗೆ ಬ್ರ್ಯಾಂಡ್ ಅಂಬಾಸಿಡರ್ ಆದ ರಿಷಬ್ ಶೆಟ್ರು
    ಈ ಬಾರಿ 17 ಮಂದಿಗೆ ಪದ್ಮಭೂಷಣ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಪ್ರಶಸ್ತಿಗೆ ಪಾತ್ರರಾದ ಏಕೈಕ ವಿದೇಶಿ ವ್ಯಕ್ತಿ. ಯಾಂಗ್ ಲಿ ಆಗಿದ್ದಾರೆ. ಇಷ್ಟಕ್ಕೂ ಯಾಂಗ್​ಲಿ ಅವರಿಗೆ ಪದ್ಮಪ್ರಶಸ್ತಿ ಸಿಕ್ಕಿದ್ದರ ಹಿಂದಿನ ಕಾರಣವೇನು ಎಂಬುದಕ್ಕೂ ಇಲ್ಲಿ ಉತ್ತರವಿದೆ.

    ಯಾಂಗ್ ಲಿ ಅವರ ನಾಯಕತ್ವದಲ್ಲಿ ಫಾಕ್ಸ್‌ಕಾನ್ 2019 ರಲ್ಲಿ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸಿತು. ಅವರು ಜೂನ್ 2019 ರಲ್ಲಿ ಟೆರ್ನಿ ಗೋ ಅವರಿಂದ ಸಿಇಒ ಮತ್ತು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ಕೋಲಾರ ಬಳಿಯ ನರಸಾಪುರದ ವಿಸ್ಟ್ರಾನ್ ಸ್ಥಾವರದಲ್ಲಿ ಐಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸಿದರು.

    ಆ ನಂತರ ಅದನ್ನು ಟಾಟಾ ಗ್ರೂಪ್ ಸ್ವಾಧೀನಪಡಿಸಿಕೊಂಡಿತು. ಫಾಕ್ಸ್‌ಕಾನ್ ಪ್ರಸ್ತುತ 40,000 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ. ಕಂಪನಿಯು ಈ ವರ್ಷ ತನ್ನ ಉದ್ಯೋಗಿಗಳನ್ನು ದ್ವಿಗುಣಗೊಳಿಸಲು ಯೋಜಿಸಿದೆ. ಭಾರತದಲ್ಲಿ ಕಂಪನಿಯ ವಹಿವಾಟು 10 ಬಿಲಿಯನ್ ಡಾಲರ್ ಆಗಿದ್ದರೆ, ಇದುವರೆಗೆ ದೇಶದಲ್ಲಿ 8 ಬಿಲಿಯನ್ ಡಾಲರ್‌ಗೂ ಹೆಚ್ಚು ಹೂಡಿಕೆ ಮಾಡಿದೆ. ಈ ಎಲ್ಲ ಕಾರಣದಿಂದ ಯಾಂಗ್ ಲಿ ಅವರಿಗೆ ಕೇಂದ್ರ ಸರ್ಕಾರ ಪದ್ಮಪ್ರಶಸ್ತಿ ನೀಡಿ ಗೌರವಿಸಿದೆ.

    ‘ಅರುಣ್ ಯೋಗಿರಾಜ್ ಮಧ್ಯರಾತ್ರಿ ಎಚ್ಚರಗೊಳ್ಳುತ್ತಿದ್ದರು…’ ಪ್ರತಿಮೆ ಕೆತ್ತಿದ ಕುರಿತು ಕಣ್ಣಾರೆ ಕಂಡದ್ದನ್ನು ವಿವರಿಸಿದ ಆಚಾರ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts