More

    ಪ್ರಗತಿಗೆ ಕಾರ್ಮಿಕರ ಕೊಡುಗೆ ಅಪಾರ

    ಬೀದರ್: ನಗರ ಸೇರಿ ಜಿಲ್ಲಾದ್ಯಂತ ಬುಧವಾರ ವಿಶ್ವ ಕಾರ್ಮಿಕ ದಿನ ಆಚರಿಸಲಾಯಿತು. ಕಾರ್ಮಿಕ ಸೇರಿ ವಿವಿಧ ಸಂಸ್ಥೆ ಮತ್ತು ಸಂಘಟನೆಗಳಿಂದ ರ್ಯಾಲಿ, ಉಪನ್ಯಾಸ, ಸನ್ಮಾನ ಇತ್ಯಾದಿ ಕಾರ್ಯಕ್ರಮ ನಡೆದವು. ಎಲ್ಲರೂ ದುಡಿವ ವರ್ಗಕ್ಕೆ, ಶ್ರಮ ಜೀವಿಗಳ ಸೇವೆಗೆ ಸಲಾಂ ಹೇಳಿದರು.
    ನೌಬಾದ್ ಹತ್ತಿರದ ಶ್ರೀ ಔದೊಂಬರಲಿಂಗ ಮಲ್ಲಿನಾಥ ಆಶ್ರಮದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿಯಿಂದ ಕಾರ್ಮಿಕರ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
    ದಿವ್ಯ ಸಾನ್ನಿಧ್ಯ ವಹಿಸಿದ್ದ ಸಮಿತಿ ಸಂಸ್ಥಾಪಕರಾದ ಪೂಜ್ಯ ಹವಾ ಮಲ್ಲಿನಾಥ ಮಹಾರಾಜ ಮಾತನಾಡಿ, ಸಮಾಜದ ಭೌತಿಕ ಪ್ರಗತಿಗೆ ಕಾರ್ಮಿಕರು ಬೆವರು ಸುರಿಸುತ್ತಿದ್ದಾರೆ. ಕಾರ್ಮಿಕರ ಬಗ್ಗೆ ಎಲ್ಲರಲ್ಲೂ ಗೌರವ ಭಾವನೆ ಇರಬೇಕು. ಸರ್ಕಾರ ಅಥವಾ ಖಾಸಗಿಯಿರಲಿ ಕಾರ್ಮಿಕರ ದುಡಿಮೆಗೆ ತಕ್ಕ ಕೂಲಿ ಸಿಗಬೇಕು ಎಂದು ಹೇಳಿದರು.
    ಸಮಿತಿಯ ಭಾಲ್ಕಿ ತಾಲೂಕಾಧ್ಯಕ್ಷ ಪಪ್ಪು ಪಾಟೀಲ್ ಖಾನಾಪುರ ಮಾತನಾಡಿ, ಹವಾ ಮಲ್ಲಿನಾಥ ಪೂಜ್ಯರು ದೇಶಾದ್ಯಂತ ಸಾವಿರಾರು ಆಶ್ರಮಗಳನ್ನು ಸ್ಥಾಪಿಸಿದ್ದಾರೆ. ಎಲ್ಲ ಆಶ್ರಮಗಳಲ್ಲಿ ವರ್ಷಕ್ಕೆ 365 ದಿನ ಕಾರ್ಮಿಕರಿಗೆ ಕೆಲಸಕ್ಕೆ ತಕ್ಕ ಕೂಲಿ ನೀಡುವ ಜತೆಗೆ ಉಚಿತವಾಗಿ ಊಟ, ವಸತಿ, ಬಟ್ಟೆಗಳನ್ನು ನೀಡಿ ಅವರ ನೆರವಿಗೆ ಬರುತ್ತಿದ್ದಾರೆ ಎಂದರು.
    ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಪ್ರಮುಖರಾದ ಶಿವಕುಮಾರ ಮದನೂರ, ನಾಗಶೆಟ್ಟಿ ಧರಂಪುರ, ಮಾಣಿಕ್ ಯರನಳ್ಳಿ, ನಾಗೇಶ ಬೇಮಳಖೇಡ್, ಸಾಗರ್ ಪಾಟೀಲ್, ಲೋಕೇಶ್, ಗಣಪತಿ, ಶಿವಶೆಟ್ಟಿ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts