More

    ಬಿಜೆಪಿಯಿಂದ ಪ್ರತಿ ಶಾಸಕರಿಗೆ 25 ಕೋಟಿ ರೂ. ಆಮಿಷ: ಕೇಜ್ರಿವಾಲ್ ಗಂಭೀರ ಆರೋಪ

    ನವದೆಹಲಿ: ದೆಹಲಿ ಮುಖ್ಯಮಂತ್ರಿ, ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಯವರು ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದು, ಶಾಸಕರಿಗೆ ತಲಾ 25 ಕೋಟಿ ರೂ. ನೀಡುವ ಭರವಸೆ ನೀಡಿ ಏಳು ಶಾಸಕರನ್ನು ಖರೀದಿಸುವ ಸಂಚು ನಡೆಸಿದ್ದಾರೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಅಮೆರಿಕದಲ್ಲೂ ಡೀಪ್‌ಫೇಕ್ ಸಂಚಲನ: ಅಧ್ಯಕ್ಷ ಬಿಡೆನ್ ಧ್ವನಿ ನಕಲು – ಕಳವಳ ವ್ಯಕ್ತಪಡಿಸಿದ ಶ್ವೇತಭವನ!

    ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕಿರುವ ಕೇಜ್ರಿವಾಲ್​, ಇತ್ತೀಚೆಗೆ ಅವರು (ಬಿಜೆಪಿ) ಏಳು ಮಂದಿ ದೆಹಲಿ ಶಾಸಕರನ್ನು ಸಂಪರ್ಕಿಸಿದ್ದಾರೆ. ಈ ಶಾಸಕರಿಗೆ ‘ಅರವಿಂದ್ ಕೇಜ್ರಿವಾಲ್ ಅವರನ್ನು ಕೆಲವೇ ದಿನಗಳಲ್ಲಿ ಬಂಧಿಸಲಾಗುವುದು, ಶಾಸನ ಸಭೆ ವಿಸರ್ಜಿಸಬಹುದು. ನಾವು 21 ಶಾಸಕರೊಂದಿಗೆ ಚರ್ಚೆ ನಡೆಸಿದ್ದೇವೆ. ಇನ್ನೂ ಹಲವರ ಜೊತೆ ಮಾತನಾಡಿದ್ದೇವೆ. ನಾವು ಎಎಪಿ ಸರ್ಕಾರವನ್ನು ಉರುಳಿಸುತ್ತೇವೆ. ನೀವು ಸಹ ಕೈಜೋಡಿಸಬಹುದು. ನಾವು ನಿಮಗೆ 25 ಕೋಟಿ ಕೊಡುತ್ತೇವೆ. ಮುಂದೆ ನಮ್ಮ ಪಕ್ಷದಿಂದ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಬಹುದು’ ಎಂದು ಬಿಜೆಪಿಯವರು ಮಾತನಾಡಿದ್ದಾರೆ ಎಂದು ಕೇಜ್ರಿವಾಲ್​ ವಿವರಿಸಿದ್ದಾರೆ.

    ಇನ್ನು ಮಾದ್ಯ ಹಗರಣದ ತನಿಖೆಗೆ ನನ್ನನ್ನು ಬಂಧಿಸುತ್ತಿಲ್ಲ, ಅವರು ಸರ್ಕಾರ ಉರುಳಿಸಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ನಮ್ಮ ಸರ್ಕಾರದ ವಿರುದ್ಧ ಕಳೆದ 9 ವರ್ಷಗಳಲ್ಲಿ ಅನೇಕ ಪ್ರಯತ್ನಗಳನ್ನು ಮಾಡಿದರು. ಆದರೆ ಅವು ಯಶಸ್ವಿಯಾಗಲಿಲ್ಲ. ಜನರ ಬೆಂಬಲ ಯಾವಾಗಲೂ ನಮಗೆ ಮತ್ತು ನಮ್ಮ ಶಾಸಕರಿಗೆ ಇರುವುದರಿಂದ ಅವರ ಆಸೆ, ಆಮೀಷಗಳಿಗೆ ಬಲಿಯಾಗಿಲ್ಲ. ಈ ಬಾರಿಯೂ ಅವರ ಪಿತೂರಿಗಳನ್ನು ವಿಫಲಗೊಳಿಸಲಾಗುವುದು ಎಂದು ಕೇಜ್ವಾಲ್ ಸುದೀರ್ಘವಾಗಿ ಬರೆದು ಪೋಸ್ಟ್ ಮಾಡಿದ್ದಾರೆ.

    ದೆಹಲಿ ಮದ್ಯ ಹಗರಣದ ಆರೋಪಿ ಎಎಪಿ ನಾಯಕನಿಗೆ ಇಡಿ ಈಗಾಗಲೇ ಹಲವು ಬಾರಿ ನೋಟಿಸ್ ಕಳುಹಿಸಿದೆ. ಈ ತನಿಖೆಯ ಭಾಗವಾಗಿ ಅವರನ್ನು ಬಂಧಿಸಬಹುದು ಎಂದು ಎಎಪಿ ನಾಯಕರು ಈಗಾಗಲೇ ಹಲವಾರು ಬಾರಿ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ತನಿಖಾ ಸಂಸ್ಥೆ ಕಳುಹಿಸುವ ಯಾವುದೇ ಪ್ರಶ್ನಾವಳಿಗೆ ಉತ್ತರಿಸಲು ಸಿದ್ಧ ಎಂದು ಹೇಳುವ ಕೇಜಿವಾಲ್, ಇಡಿ ತನಿಖೆಗೆ ಹಾಜರಾಗುತ್ತಿಲ್ಲ.

    ಬಿಹಾರ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ: ಸೋನಿಯಾ ಕರೆ ನಿರ್ಲಕ್ಷಿಸಿದ ನಿತೀಶ್ – ಇಂದೇ ಕ್ಲೈಮ್ಯಾಕ್ಸ್​​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts