ನ್ಯೂಸ್

ಆಕ್ರಮಣಕಾರರನ್ನು ವೈಭವಿಕರಿಸುವುದು ದೇಶದ್ರೋಹ; ಔರಂಗಜೇಬನ ಸಮಾಧಿ ವಿವಾದದ ಮಧ್ಯೆ ಯೋಗಿ ಆದಿತ್ಯನಾಥ್​ ಹೇಳಿಕೆ | Controversy

Controversy : ಐತಿಹಾಸಿಕ ಆಕ್ರಮಣಕಾರರನ್ನು ವೈಭವಿಕರಿಸುವವರ ವಿರುದ್ಧ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಕ್ನೋದಲ್ಲಿ​​ ತೀವ್ರ ವಾಗ್ಧಾಳಿ ನಡೆಸಿದ್ದಾರೆ.

ನಮ್ಮ ನಾಗರಿಕತೆಯ ಮೇಲೆ ದಾಳಿ ಮಾಡಿದ, ನಮ್ಮ ಮಹಿಳೆಯರ ಮೇಲೆ ಮತ್ತು ನಮ್ಮ ನಂಬಿಕೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಆಚರಿಸುವವರ ವಿರುದ್ಧ ಮುಖ್ಯಮಂತ್ರಿ ಔರಂಗಜೇಬನನ್ನು ನೇರವಾಗಿ ಹೆಸರಿಸದೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಆಕ್ರಮಣಕಾರರನ್ನು ವೈಭವೀಕರಿಸುವುದು ಎಂದರೆ ದೇಶದ್ರೋಹದ ಬೇರುಗಳನ್ನು ಬಲಪಡಿಸುವುದು. ನಮ್ಮ ಮಹಾನ್ ಪೂರ್ವಜರನ್ನು ಅವಮಾನಿಸುವವರನ್ನು ಮತ್ತು ನಮ್ಮ ನಾಗರಿಕತೆಯ ಮೇಲೆ ದಾಳಿ ಮಾಡಿದ, ನಮ್ಮ ಮಹಿಳೆಯರನ್ನು ಉಲ್ಲಂಘಿಸಿದ ಮತ್ತು ನಮ್ಮ ನಂಬಿಕೆಯ ಮೇಲೆ ಹಲ್ಲೆ ಮಾಡಿದವರನ್ನು ಹೊಗಳುವವರನ್ನು ನವ ಭಾರತ ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಬಹ್ರೈಚ್‌ನಲ್ಲಿ ಗುರುವಾರ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಆದಿತ್ಯನಾಥ್ ಮಾತನಾಡಿದರು.

ಇಡೀ ಜಗತ್ತು ಭಾರತ ಶ್ರೀಮಂತ ಪರಂಪರೆಯನ್ನು ಗುರುತಿಸುತ್ತಿರುವಾಗ ಪ್ರತಿಯೊಬ್ಬ ನಾಗರಿಕ ಕರ್ತವ್ಯ ಎಂದರೆ ನಮ್ಮ ಮಹಾನ್​ ನಾಯಕರನ್ನು ಗೌರಿಸುವುದು. ನಮ್ಮ ಗುರುತನ್ನು ಅಳಿಸಲು ಪ್ರಯತ್ನಿಸಿದವರನ್ನು ಹೊಗಳುವುದಲ್ಲ ಎಂದಿದ್ದಾರೆ.

ಇನ್ನು ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿರುವ ಮೊಘಲ್ ದೊರೆ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಬೇಕೆಂಬ ಬೇಡಿಕೆಗಳು ಹೆಚ್ಚುತ್ತಿರುವ ಮಧ್ಯೆ ಬಿಜೆಪಿ ನಾಯಕನ ಈ ಹೇಳಿಕೆ ಹೊರಬಿದ್ದಿದೆ.(ಏಜೆನ್ಸೀಸ್​)