Dead Mosquitoes: ಸಾಮಾಜಿಕ ಜಾಲತಾಣದ ಎಂಬುದೇ ಒಂದು ವಿಚಿತ್ರ ಲೋಕ. ಒಂದಷ್ಟು ವಿಷಯಗಳು ಹಿತ, ಖುಷಿ ನೀಡಿದರೆ, ಇನ್ನೂ ಹಲವು ವಿಚಿತ್ರ, ವಿಸ್ಮಯ, ಅಚ್ಚರಿ, ಭಯದ ಭೀತಿ, ನಡುಕ ಹುಟ್ಟಿಸುತ್ತದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಒಂದು ಸಣ್ಣ ಘಟನೆ ಕೂಡ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಗುತ್ತವೆ. ಅವುಗಳು ಎಷ್ಟರ ಮಟ್ಟಿಗೆ ಜನರ ವೀಕ್ಷಣೆಗೆ ಗುರಿಯಾಗುತ್ತೆ ಎಂಬ ಕಲ್ಪನೆಯು ಹಂಚಿಕೊಂಡವರಿಗೆ ತಿಳಿದಿರುವುದಿಲ್ಲ. ಈ ಸಾಲಿಗೆ ಇಲ್ಲೊಂದು ವಿಡಿಯೋ ಸೇರ್ಪಡೆಗೊಂಡಿದ್ದು, ನೆಟ್ಟಿಗರನ್ನು ಅಕ್ಷರಶಃ ಅಚ್ಚರಿಗೆ ದೂಡಿದೆ.
ಇದನ್ನೂ ಓದಿ: ಇದು 1993ರ ವರದಕ್ಷಿಣೆ ಪಟ್ಟಿ! ಆಭರಣಗಳಿಂದ ಹಿಡಿದು ಬಾತ್ರೂಮ್ನಲ್ಲಿ ಬಳಸುವ ಮಗ್ಗಳವರೆಗೆ ಇತ್ತು ಬೇಡಿಕೆ… 1993 Dowry List
ಪ್ರತಿಯೊಬ್ಬರು ರಾತ್ರಿ ಮಲಗುವ ಸಮಯದಲ್ಲಿ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ನಾನಾ ರೀತಿಯಲ್ಲಿ ಕಸರತ್ತು ನಡೆಸುತ್ತಾರೆ. ಕೆಲವರು ಲಿಕ್ವಿಡ್ ಕಾಯಿಲ್, ಸೊಳ್ಳೆ ಬತ್ತಿ, ಪರದೆ ಬಳಸಿದರೆ, ಇನ್ನೂ ಕೆಲವರು ಸೊಳ್ಳೆಗಳನ್ನು ಸುಟ್ಟು ಭಸ್ಮಗೊಳಿಸುವ ಮಸ್ಕಿಟೋ ವಿದ್ಯುತ್ ಬ್ಯಾಟ್ ಬಳಸಿ, ಅವುಗಳ ರಕ್ತ ಹೀರುವಿಕೆಯಿಂದ ತಪ್ಪಿಸಿಕೊಳ್ಳುವ ತಂತ್ರ ರೂಪಿಸುತ್ತಾರೆ. ಕೇವಲ ಒಂದು ಸಣ್ಣ ಸೊಳ್ಳೆಯ ಶಬ್ದಕ್ಕೆ ಗಾಢವಾದ ನಿದ್ರೆಯಿಂದ ಎದ್ದು ಪರದಾಡುವವರು ಇದ್ದಾರೆ. ಆದ್ರೆ, ಇಲ್ಲೊಬ್ಬಳು ಯುವತಿ, ಸತ್ತ ಸೊಳ್ಳೆಗಳನ್ನು ಬಿಳಿ ಹಾಳೆಯ ಮೇಲೆ ಅಂಟಿಸಿ, ಅವು ಸತ್ತ ದಿನ, ಸಮಯ ಮತ್ತು ವಿವರಣೆ ಬರೆಯುವ ಮೂಲಕ ತನ್ನ ವಿಚಿತ್ರ ಹವ್ಯಾಸವನ್ನು ಬಹಿರಂಗಪಡಿಸಿದ್ದಾಳೆ.
ಆಕಾಂಕ್ಷಾ ರಾವತ್ ಎಂಬ ಯುವತಿ, ತನ್ನ ವಿಚಿತ್ರ ಹವ್ಯಾಸದಿಂದ ಜಾಲತಾಣದ ಬಳಕೆದಾರರ ಗಮನ ಸೆಳೆದಿದ್ದಾಳೆ. ಸತ್ತ ಸೊಳ್ಳೆಗಳನ್ನು ಸಂಗ್ರಹಿಸಿ ಅದಕ್ಕೆ ವಿವಿಧ ವಿವರಗಳೊಂದಿಗೆ ಲೇಬಲ್ ಮಾಡುವ ಹವ್ಯಾಸವನ್ನು ಈಕೆ ಹೊಂದಿದ್ದಾಳೆ. ಸತ್ತ ಸೊಳ್ಳೆಗಳನ್ನು ಟೇಪ್‌ನಿಂದ ಅಂಟಿಸಿ, ಪ್ರತಿ ಸೊಳ್ಳೆಗೂ ಒಂದೊಂದು ಹೆಸರಿಟ್ಟು, ಅವು ಮೃತಪಟ್ಟಿದ್ದು ಎಲ್ಲಿ, ಯಾವ ಸಮಯ ಎಂಬುದರ ವಿವರಣೆಯನ್ನು ಸಹ ನೀಡಿದ್ದಾಳೆ. ಇದು ಹಲವರ ತಲೆಗೆ ಹುಳಬಿಟ್ಟಿದೆ.
ಇದನ್ನೂ ಓದಿ: ಸಂಪೂರ್ಣ ಸ್ವಚ್ಛತೆ ಇರುವಲ್ಲಿ ದೇವರ ನೆಲೆ; ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ಅಭಿಯಾನದಲ್ಲಿ ಶೀನ ಶೆಟ್ಟಿ ಪ್ರೇರಣೆ
ಸೊಳ್ಳೆಗಳಿಗೆ ಹುಡುಗರ ಹೆಸರನ್ನೇ ಹೆಚ್ಚಾಗಿ ಇಟ್ಟಿರುವುದು ಗಮನಾರ್ಹ. ಉದಾಹರಣೆಗೆ, 'ಸಿಗ್ಮಾ ಬಾಯ್', 'ರಮೇಶ್', 'ಬಬ್ಲಿ', 'ಟಿಂಕು' ಎಂದು ಸತ್ತ ಸೊಳ್ಳೆಗಳ ಕೆಳಗೆ ಬರೆದು, ಅವುಗಳ ಸಾವಿನ ಸಮಯ ಮತ್ತು ಸ್ಥಳದ ವಿವರಗಳನ್ನು ಹಾಳೆಯಲ್ಲಿ ಬರೆದಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು, "ಇಡೀ ಸೊಳ್ಳೆ ಸೈನ್ಯಕ್ಕೆ ಈಕೆ ನಡುಕ ಹುಟ್ಟಿಸಿದ್ದಾಳೆ. ಇವಳನ್ನು ಕಂಡರೆ ಅವುಗಳೇ ಹೆದರಿ ಓಡುತ್ತವೆ" ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).