ನ್ಯೂಸ್

VIDEO| ಎಸ್ಕಲೇಟರ್​ನಲ್ಲಿ ಮೊಬೈಲ್​ ಕಸಿದುಕೊಂಡ ಯುವತಿಯರು; ಯುವಕ ಮಾಡಿದ್ದೇನು ಗೊತ್ತಾ?

ಅಮೆರಿಕಾ: ಶಾಪಿಂಗ್​ ಮಾಲ್​ನಲ್ಲಿ ಎಸ್ಕಲೇಟರ್​ನಲ್ಲಿ ಹೋಗುತ್ತಿದ್ದ ಯುವಕನೊಬ್ಬನಿಂದ ಸ್ಮಾರ್ಟ್​ಫೋನ್​ ಕಸಿದುಕೊಂಡ ಯುವತಿಯರಿಗೆ ಮುಂದೇನಾಯ್ತು ಎಂಬ ಸಂಗತಿ ವಿಡಿಯೋ ನೋಡಿದ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ಈ ಘಟನೆಯ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಶಾಪಿಂಗ್​ ಮಾಲ್​ಗೆ ತೆರಳಿದ್ದ ಯುವಕನೊಬ್ಬ ಕೆಳ ಮಹಡಿಯಿಂದ ಮೇಲಿನ ಮಹಡಿಗೆ ಎಸ್ಕಲೇಟರ್​ ಸಹಾಯದಿಂದ ಬರುತ್ತಿದ್ದ. ಈ ವೇಳೆ ಕೆಳಗಿನ ಫ್ಲೋರ್​ಗೆ ಹಿಂದಿರುಗುತ್ತಿದ್ದ ಯುವತಿಯರು, ಆತ ಕೈಯಲ್ಲಿ ಹಿಡಿದಿದ್ದ ಸ್ಮಾರ್ಟ್​ಫೋನ್​ ಅನ್ನು ಕಸಿದುಕೊಂಡಿದ್ದಾರೆ.

​​ಮೊಬೈಲ್​ ಕಿತ್ತುಕೊಂಡ ಖುಷಿಯಲ್ಲಿದ್ದ ಯುವತಿಯರಿಗೆ ಶಾಕ್​ ನೀಡಿದ ಯುವಕ, ಶರವೇಗದಲ್ಲಿ ಅವರು ವಿಡಿಯೋ ಮಾಡುತ್ತಿದ್ದ ಸ್ಮಾರ್ಟ್​ಫೋನ್​ ಅನ್ನು ಕಸಿದಿದ್ದಾರೆ. ಈ ದೃಶ್ಯ ನೋಡುಗರನ್ನು ಒಮ್ಮೆ ಅಚ್ಚರಿಗೊಳಿಸಿದೆ.