ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ವಿಡಿಯೋವನ್ನು ಪೋಸ್ಟ್ ಮಾಡಿದರೆ ನಮಗೆ ಹೆಚ್ಚು ಫಾಲೋವರ್ಸ್, ಅಧಿಕ ಲೈಕ್ಸ್ ಸಿಗುತ್ತದೆ ಎಂಬ ಗೀಳಿಗೆ ಬಿದ್ದು ಹಲವರು ವಿಭಿನ್ನ ಪ್ರಯತ್ನ ಮಾಡುವಲ್ಲಿ ಇದೀಗ ಮುಂದಿದ್ದಾರೆ. ಅದೇ ರೀತಿಯ ಘಟನೆಯೊಂದು ಇಲ್ಲಿ ನಡೆದಿದ್ದು, ಯುವತಿಯೊಬ್ಬಳು ಇನ್ಸ್ಟಾಗ್ರಾಮ್ ರೀಲ್ಸ್ ಮಾಡಲು ಹೋಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
ಮಳೆಯಿಂದ ಜಲಾವೃತಗೊಂಡ ರಸ್ತೆಯ ಮಧ್ಯೆದಲ್ಲಿ ನಿಂತು ತನಗೆ ಬೇಕಾದ ಹಾಡಿಗೆ ಡ್ಯಾನ್ಸ್ ಮಾಡುವ ಮುಖೇನ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋವನ್ನು ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿದ ಬಳಿಕ ನೆಟ್ಟಿಗರು ಯುವತಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ರೀಲ್ಸ್ ಮಾಡುವ ಮೋಜಿಗೆ ಬಿದ್ದು ಇಂದಿನ ಯುವ ಜನತೆ ಹಾಳಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾಡುವ ಅಗತ್ಯವೇನು? ಇಂಥ ಚಟುವಟಿಕೆಗಳಿಗೆ ಬ್ರೇಕ್ ಬೀಳಬೇಕು ಎಂದು ಹಲವರು ಕಾಮೆಂಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).