ನ್ಯೂಸ್

ಮದ್ಯ ಖರೀದಿಸಲು ಕ್ಯೂನಲ್ಲಿ ನಿಂತ ಹುಡುಗಿ: ಆಕೆಯ ತಂದೆಗೆ ಶಾಕ್​ ಕೊಟ್ಟ ಪೊಲೀಸರು! Liquor

Liquor : ಮದ್ಯದ ಅಂಗಡಿಯಲ್ಲಿ ಮದ್ಯ ಖರೀದಿಸಲು ಕ್ಯೂನಲ್ಲಿ ನಿಂತಿದ್ದ ಅಪ್ರಾಪ್ತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ಆಕೆಯ ತಂದೆಯನ್ನು ಠಾಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್​ ನೀಡಿದ್ದಾರೆ.

ಈ ಘಟನೆ ಕೇರಳದ ಪಾಲಕ್ಕಾಡ್‌ನ ಪಟ್ಟಾಂಬಿಯಲ್ಲಿರುವ ಮದ್ಯದ ಅಂಗಡಿಯಲ್ಲಿ ನಡೆದಿದೆ. ತ್ರಿಥಾಲ ಠಾಣೆಯ ಪೊಲೀಸರು ಆಕೆಯ ತಂದೆಯನ್ನು ಠಾಣೆಗೆ ಬರುವಂತೆ ಸೂಚಿಸಿದ್ದಾರೆ. ಇಂದು ಠಾಣೆಗೆ ಆಗಮಿಸಿ, ವಿಚಾರಣೆ ಎದುರಿಸುವ ಸಾಧ್ಯತೆ ಇದೆ.

ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಬಾಲಕಿಯನ್ನು ಮದ್ಯದ ಅಂಗಡಿಯಲ್ಲಿ ಕ್ಯೂನಲ್ಲಿ ನಿಲ್ಲಿಸಲಾಯಿತು. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದರು.

ಪಟ್ಟಂಬಿಯ ಕರಿಂಪನಕ್ಕಡವ್‌ನಲ್ಲಿರುವ ಮದ್ಯದ ಅಂಗಡಿಯಲ್ಲಿ ಬಾಲಕಿ ಕ್ಯೂನಲ್ಲಿ ನಿಂತಿದ್ದಳು. ಅದನ್ನು ನೋಡಿ ಯಾರೊಬ್ಬರು ಕೂಡ ಆಕೆಯನ್ನು ಪ್ರಶ್ನೆ ಮಾಡಲಿಲ್ಲ. ಆ ಹುಡುಗಿಯ ವಯಸ್ಸು ಹತ್ತು ವರ್ಷ ಎಂದು ತಿಳಿದುಬಂದಿದೆ. ಆಕೆಯನ್ನು ಏಕೆ ಕ್ಯೂನಲ್ಲಿ ನಿಲ್ಲಿಸಲಾಯಿತು ಎಂಬ ಪ್ರಶ್ನೆಗೆ ಉತ್ತರ ಬರಬೇಕಿದೆ. ಬಾಲಕಿಯ ತಂದೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. (ಏಜೆನ್ಸೀಸ್​)