ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುವಂತೆ ಕರೆ ನೀಡಿದ್ದಾರೆ. ಹಮಾಸ್ ಹಾಗೆ ಮಾಡದಿದ್ದರೆ ನಾವು ತ್ವರಿತ ಹಿಂಸಾತ್ಮಕ ಕ್ರಮ ಕೈಗೊಳ್ಳುತ್ತದೆ ಎಂದು ಬುಧವಾರ (ಅಕ್ಟೋಬರ್,15) ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಶ್ವೇತಭವನದಲ್ಲಿ ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲ್ಲಾರೊಂದಿಗಿನ ಸಭೆಯಲ್ಲಿ ಮಾತನಾಡಿದ ಟ್ರಂಪ್, ಮಧ್ಯವರ್ತಿಗಳ ಮೂಲಕ ಹಮಾಸ್‌ಗೆ ಸಂದೇಶವನ್ನು ರವಾನಿಸಿದ್ದೇನೆ. ಹಮಾಸ್ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುತ್ತಾರೆ. ಅವರು ಹಾಗೆ ಮಾಡದಿದ್ದರೆ, ನಾವು ಅವರನ್ನು ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಮಾಡುತ್ತೇವೆ. ಅಲ್ಲದೆ, ಹಿಂಸಾತ್ಮಕವಾಗಿಯಾದರು ಸರಿಯೇ ಹಮಾಸ್ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುತ್ತಾರೆ ಎಂದು ಖಾರವಾಗಿ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಟ್ರಂಪ್, ನಾನು ಹಮಾಸ್ ಜತೆ ಮಾತನಾಡಿದೆ ಮತ್ತು ನೀವು ನಿಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಡುತ್ತೀರಾ ಎಂದು ಕೇಳಿದೆ? ಎಂದಿದ್ದಾರೆ. ಅಲ್ಲದೆ, ಈ ಸಂದೇಶಕ್ಕೆ ಹೌದು ಸರ್, ನಾವು ನಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಡುತ್ತೇವೆ ಎಂದು ಹಮಾಸ್ ಒಪ್ಪಿಕೊಂಡಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಹಮಾಸ್‌ನ ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಕ್ರಮದಲ್ಲಿ ಯಾರು ಭಾಗಿಯಾಗುತ್ತಾರೆ ಎಂಬುದನ್ನು ಟ್ರಂಪ್ ಸ್ಪಷ್ಟಪಡಿಸಿಲ್ಲ. ಹಮಾಸ್ ಅನ್ನು ನಿಶ್ಯಸ್ತ್ರಗೊಳಿಸುವುದು ಟ್ರಂಪ್‌ರ 20 ಅಂಶಗಳ ಗಾಜಾ ಯೋಜನೆಯ ಮುಂದಿನ ಹಂತದ ಪ್ರಮುಖ ಭಾಗವಾಗಿತ್ತು. ಆದರೆ ಪ್ಯಾಲೆಸ್ಟೀನಿಯನ್ ಗುಂಪು ನಿಶ್ಯಸ್ತ್ರಗೊಳಿಸಲು ನಿರಾಕರಿಸಿದೆ.
ಇಸ್ರೇಲ್ ಮತ್ತು ಈಜಿಪ್ಟ್ ಭೇಟಿಯನ್ನು ಮುಗಿಸಿದ ಕೆಲವೇ ಗಂಟೆಗಳ ನಂತರ, ಟ್ರಂಪ್ ತಮ್ಮ ಗಾಜಾ ಯೋಜನೆಯ ಎರಡನೇ ಹಂತದ ಶಾಂತಿ ಘೋಷಿಸಿದ್ದಾರೆ. ನಾನು ಭರವಸೆ ನೀಡಿದಂತೆ, ಸತ್ತವರನ್ನು ಹಿಂತಿರುಗಿಸಲಾಗಿಲ್ಲ. ಎರಡನೇ ಹಂತವು ಇದೀಗ ಪ್ರಾರಂಭವಾಗಿದೆ ಎಂದು ಅಮೆರಿಕ ಅಧ್ಯಕ್ಷರು ಟ್ರೂತ್ ಸೋಶಿಯಲ್‌ನಲ್ಲಿ ಹೇಳಿದ್ದಾರೆ.
ಗಾಜಾದಲ್ಲಿ ಒತ್ತೆಯಾಳುಗಳ ಶವಗಳನ್ನು ಬಿಡುಗಡೆ ಮಾಡುವಂತೆ ಟ್ರಂಪ್ ಹಮಾಸ್‌ಗೆ ಕರೆ ನೀಡಿದರು. ಅಲ್ಲದೆ, ಎಲ್ಲಾ 20 ಒತ್ತೆಯಾಳುಗಳನ್ನು ಹಿಂತಿರುಗಿಸಲಾಗಿದೆ ಮತ್ತು ಅವರು ನಿರೀಕ್ಷೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೊಡ್ಡ ಹೊರೆಯನ್ನು ತೆಗೆದುಹಾಕಲಾಗಿದೆ. ಆದರೆ ಕೆಲಸ ಇನ್ನೂ ಮುಗಿದಿಲ್ಲ ಎಂದು ಟ್ರಂಪ್ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಲ್ಲಿ ನಡೆದ ಐತಿಹಾಸಿಕ ಶಾಂತಿ ಶೃಂಗಸಭೆಯ ಕೆಲವೇ ದಿನಗಳ ನಂತರ ಟ್ರಂಪ್ ಹೇಳಿಕೆ ಬಂದಿದೆ. ಗಾಜಾ ಶಾಂತಿ ಒಪ್ಪಂದದ 20 ಅಂಶಗಳ ಯೋಜನೆಯ ಭಾಗವಾಗಿ ಹಮಾಸ್ ಮತ್ತು ಇಸ್ರೇಲ್ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದವು. ಅಲ್ಲದೆ, ಹಮಾಸ್ ಉಳಿದಿರುವ ಕೊನೆಯ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಆದರೆ ಇಸ್ರೇಲ್ ಒಪ್ಪಂದದ ಭಾಗವಾಗಿ ಹಲವಾರು ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆ ಮಾಡಿತು.
ಹಮಾಸ್ ತನ್ನ ಎಲ್ಲಾ ಶಸ್ತ್ರಾಸ್ತ್ರಗಳನ್ನು ಶರಣಾಗುವುದಾಗಿ ಇನ್ನೂ ಸಾರ್ವಜನಿಕವಾಗಿ ದೃಢಪಡಿಸಿಲ್ಲ. ಟ್ರಂಪ್ ಗಾಜಾದಲ್ಲಿ ಅಲ್ಪಾವಧಿಗೆ ಹಮಾಸ್ ಸೀಮಿತ ಪಾತ್ರವನ್ನು ವಹಿಸಬಹುದು ಎಂದು ಸೂಚಿಸಿದ್ದಾರೆ. (ಏಜೆನ್ಸೀಸ್)