ನ್ಯೂಸ್

ಪ್ರತಿ ಬಾರಿ ಇದನ್ನೇ ಮಾಡ್ತೀರಾ... ಗೆಳೆಯನ ವಿರುದ್ಧ ತಿರುಗಿಬಿದ್ದ ಗೆಳತಿ; Bigg Boss ಮನೆಯಲ್ಲಿ ಅಷ್ಟಕ್ಕೂ ನಡೆದಿದ್ದಾರೂ ಏನು?

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ (Bigg Boss) ವಾರ ಕಳೆದಂತೆ ರೋಚಕತೆ ಸೃಷ್ಟಿಸುತ್ತಿದ್ದು, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸ್ಫರ್ಧಿಗಳ ನಡುವಿವ ಕಿತ್ತಾಟ ಹಾಗೂ ಮನಸ್ತಾಪದಿಂದಲೇ ಹೆಚ್ಚು ಸುದ್ದಿಯಾಗುತ್ತಿರುವ ಬಿಗ್​ಬಾಸ್​ ಈ ವಾರ ಕೂಡ ಸಖತ್​ ಸೌಂಡ್​ ಮಾಡುತ್ತಿದೆ. ಅದರಂತೆ ಈ ವಾರದ ಟಾಸ್ಕ್​ನಲ್ಲಿ ಕೂಡ ಸ್ಪರ್ಧಿಗಳು ಆಟವಾಡುವುದಕ್ಕಿಂತ ತಮ್ಮ ನಡುವಿನ ಕಿತ್ತಾಟದಿಂದಲೇ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಪ್ರಮುಖವಾಗಿ ಮಂಜು ಹಾಗೂ ಗೌತಮಿ ನಡುವಿನ ಕಿತ್ತಾಟದಿಂದಲೇ ಶೋ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಇದು ಕಟ್ಟಪ್ಪಣೆಯೋ, ಗೌತಮಿಯ ಶಾಸನವೋ? ಎಂಬ ಶೀರ್ಷಿಕೆಯಡಿ ರಿಲೀಸ್​ ಮಾಡಲಾಗಿರುವ ಪ್ರೋಮೋ ನೋಡುವುದಾದರೆ ಬಿಗ್​ಬಾಸ್​ ಕೊಟ್ಟ ಟಾಸ್ಕ್​ ಆಡಲು ಮನೆ ಮಂದಿ ಹರಸಾಹಸ ಪಡುತ್ತಿದ್ದು, ಚೆಂಡು ಅಡೆತಡೆಗಳನ್ನು ದಾಟಿ ಅಲ್ಲಿರುವ ಬುಟ್ಟಿಗ ಬಂದು ಬೀಳಬೇಕಿತ್ತು. ಈ ಆಟವನ್ನು ಗೌತಮಿ ಹಾಗೂ ಐಶ್ವರ್ಯಾ ಆಡುತ್ತಾರೆ. ಈ ವೇಳೆ ಸ್ಫರ್ಧಿಗಳ ಏಕಾಗ್ರತೆಯನ್ನು ಹಾಳು ಮಾಡಲು ಉಗ್ರಂ ಮಂಜು ಮೋಕ್ಷಿತಾ ಈ ಹಿಂದೆ ಹಾಡಿದ್ದ ಹಾಡನ್ನು ಹಾಡುತ್ತಾರೆ. ಇದಕ್ಕೆ ಶಿಶಿರ್​ ಸುಮ್ಮನೆ ಇರುವಂತೆ ಮಂಜುಗೆ ಹೇಳುತ್ತಾರೆ. ಈ ವೇಳೆ ಮಂಜು ಹಾಗೂ ಶಿಶಿರ್ ನಡುವೆ ಮಾತಿನ ಚಕಮಕಿಯಾಗಿದೆ.

ಟಾಸ್ಕ್​ ಬಳಿಕ ಮಂಜು ವಿರುದ್ಧ ಗೌತಮಿ ತಿರುಗಿ ಬಿದ್ದಿದ್ದು, ನಾನು ಆಡ್ತೀನೋ, ಸಾಯ್ತಿನೋ ದಯವಿಟ್ಟು ನನ್ನ ಕಡೆ ತಿರುಗಬೇಡಿ, ನೀವು ಮಾಡುವ ತಪ್ಪಿಗೆ ನನಗೆ ಬಹಳ ತೊಂದರೆಯಾಗಿದೆ. ಪ್ರತಿ ಬಾರಿ ಇದನ್ನೇ ಮಾಡುತ್ತೀರಾ ಎಂದು ಗೌತಮಿ ಮಂಜು ಮೇಲೆ ಕೂಗಾಡಿದ್ದಾರೆ. ಗೌತಮಿರನ್ನು ಸಮಾಧಾನಪಡಿಸಲು ಮಂಜು ಮುಂದಾಗಿದ್ದು, ಕ್ಯಾಪ್ಟನ್​ ರೂಮಿಗೆ ಪ್ರವೇಶವಿಲ್ಲ ಎಂದು ಹೇಳಿ ಹೊರಡುತ್ತಾರೆ. ಇದಲ್ಲದೆ ನಿನ್ನೆಯ (ಡಿಸೆಂಬರ್​ 11) ಸಂಚಿಕೆಯಲ್ಲೂ ಮಂಜು ವಿರುದ್ಧ ಗೌತಮಿ ರೆಬೆಲ್​ ಆಗಿದ್ದರು. ಇಷ್ಟು ದಿನಗಳ ಕಾಲ ಗೆಳೆಯ-ಗೆಳತಿ ಎಂದೇ ಫೇಮಸ್​ ಆಗಿದ್ದ ಇವರಿಬ್ಬರು ಕ್ಯಾಪ್ಟನ್​ ಆದ ಬಳಿಕ ಒಂದಿಲ್ಲೊಂದು ಕಾರಣಕ್ಕೆ ದೂಷಿಸುತ್ತ ದೂರಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದುನೋಡಬೇಕಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​ (Bigg Boss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.