ಸಾಂದರ್ಭಿಕ ಚಿತ್ರ 
ನ್ಯೂಸ್

ವಿಷಾನಿಲ ಸೋರಿಕೆ: 3 ಮಕ್ಕಳು ಸೇರಿದಂತೆ 16 ಮಂದಿ ಸಾವು

ಜೋಹಾನ್ಸ್‌ಬರ್ಗ್:ವಿಷಾನಿಲ ಸೋರಿಕೆಯಿಂದಾಗಿ 3 ಮಕ್ಕಳು ಸೇರಿದಂತೆ 16 ಮಂದಿ ಮೃತಪಟ್ಟಿರುವ ಘಟನೆ ದಕ್ಷಿಣ ಆಫ್ರಿಕಾದ ಜೋಹಾನ್ಸ್​​ಬರ್ಗ್​ನಲ್ಲಿ ನಡೆದಿದೆ.

ಜೋಹಾನ್ಸ್‌ ಬರ್ಗ್‌ನ ಪೂರ್ವ ಹೊರವಲಯದಲ್ಲಿರುವ ವಸಾಹತು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅನಿಲ ಸೇವನೆಯಿಂದಾಗಿ ತೀವ್ರ ಅಸ್ವಸ್ಥರಾಗಿರುವ ಹಲವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ವಿಷಾನಿಲ ಸೇವನೆ ಮಾಡಿರುವ ಜನರ ಮೃತದೇಹಗಳು ಎಲ್ಲೆಂದರಲ್ಲಿ ಬಿದ್ದಿದ್ದು, ದೃಶ್ಯ ಮನಕಲಕುವಂತಿದೆ. ಈ ಕುರಿತು ಮಾತನಾಡಿರುವ ಪ್ರಧಾನ ಮಂತ್ರಿ, ಇದು ಉತ್ತಮ ದೃಶ್ಯವಲ್ಲ. ಇದು ನೋವಿನಿಂದ ಕೂಡಿದ್ದು, ಭಾವನಾತ್ಮಕವಾಗಿ ಬರಿದಾಗಿರುವ ಜತೆಗೆ ಇದೊಂದು ದುರಂತವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಹುನಿರೀಕ್ಷಿತ ‘ಸಲಾರ್’ ಟೀಸರ್ ಬಿಡುಗಡೆ: ಪ್ರಶಾಂತ್ ನೀಲ್ ಅದ್ದೂರಿ ಮೇಕಿಂಗ್, ಮಾಸ್​ ಲುಕ್‌ನಲ್ಲಿ ಪ್ರಭಾಸ್​..!

ಈ ವಿಷಾನಿಲ ಸೋರಿಕೆ ಹೇಗೆ ಸಂಭವಿಸಿತು ಎಂಬುದರ ಇದುವರೆಗೆ ಯಾವುದೇ ಮಾಹಿತಿ ಲಭಿಸದ ಕಾರಣ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಈ ಅನಿಲ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿರಬಹುದೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಶೋಧ ಮತ್ತು ರಕ್ಷಣಾ ತಂಡಗಳು ಇನ್ನೂ ಸ್ಥಳದಲ್ಲಿದ್ದು, ಸಾವುನೋವುಗಳ ಪ್ರಮಾಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿವೆ. ಕಳೆದ ವರ್ಷ ಕ್ರಿಸ್‌ಮಸ್ ಮುನ್ನಾದಿನದಂದು, ಬೋಕ್ಸ್‌ಬರ್ಗ್‌ನಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಸಾಗಿಸುತ್ತಿದ್ದ ಟ್ರಕ್ ಸೇತುವೆಯ ಕೆಳಗೆ ಸಿಲುಕಿ ಸ್ಫೋಟಗೊಂಡ ನಂತರ ಕನಿಷ್ಠ 41 ಜನರು ಮೃತಪಟ್ಟಿದ್ದರು.(ಏಜೆನ್ಸೀಸ್​)