ನ್ಯೂಸ್

ಅನಿಲ ಸ್ಫೋಟ; ನ್ಯೂಯಾರ್ಕ್ ನಗರದ ಬಹುಮಹಡಿ ಅಪಾರ್ಟ್‌ಮೆಂಟ್ ಕುಸಿತ| newyork

newyork; ಅಮೆರಿಕದ ನ್ಯೂಯಾರ್ಕ್ ನಗರದಲ್ಲಿನ ಅಲೆಕ್ಸಾಂಡರ್ ಅವೆನ್ಯೂದಲ್ಲಿ ಇಂದು (ಅ.01) 20 ಅಂತಸ್ತಿನ ಸಾರ್ವಜನಿಕ ಬಹುಮಹಡಿ ಅಪಾರ್ಟ್‌ಮೆಂಟ್ ಕಟ್ಟಡದ ಒಂದು ಭಾಗ ಕುಸಿದಿದ್ದು, ಅನಿಲ ಸ್ಫೋಟವೇ ಇದಕ್ಕೆ ಕಾರಣ ಎಂದು ಅಗ್ನಿಶಾಮಕ ಇಲಾಖೆ ಮಾಹಿತಿ ನೀಡಿದೆ.

ಸದ್ಯ ಈ ಘಟನೆಯಿಂದ ಯಾವುದೇ ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳಾಗಿಲ್ಲ. ಬೆಳಗ್ಗೆ 8:10 ರ ಸುಮಾರಿಗೆ ಬ್ರಾಂಕ್ಸ್‌ನ 20 ಅಂತಸ್ತಿನ ಕಟ್ಟಡದಲ್ಲಿ ಅನಿಲ ಸ್ಫೋಟ ಸಂಭವಿಸಿದ ಪರಿಣಾಮ ಕಟ್ಟಡ ಕುಸಿದಿದೆ ಎಂದು ಹೇಳಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ದೃಶ್ಯಗಳ ಪ್ರಕಾರ, ನೆಲಮಹಡಿಯಿಂದ ಛಾವಣಿಯವರೆಗೆ ಒಂದು ಮೂಲೆ ಕುಸಿದಿರುವ ಬಹುಮಹಡಿಯ ಕಟ್ಟಡವೊಂದನ್ನು ಕಾಣಬಹುದಾಗಿದೆ. ಕಟ್ಟಡ ಕುಸಿದ ಕೆಲವೇ ಕ್ಷಣಗಳಲ್ಲಿ ಸುತ್ತಮುತ್ತಲಿನ ಕಟ್ಟಡಗಳ ಮೇಲೆ ಆವರಿಸುತ್ತಿರುವುದನ್ನು ವಿಡಿಯೋಗಳಲ್ಲಿ ಕಾಣಬಹುದಾಗಿದೆ.

(ಏಜೆನ್ಸೀಸ್)

ಇನ್ನೂ ಈ ಬಗ್ಗೆ ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದು, ಬ್ರಾಂಕ್ಸ್ ಪ್ರದೇಶದಲ್ಲಿ ಅಪಾರ್ಟ್ಮೆಂಟ್ ಕಟ್ಟಡ ಕುಸಿತದ ಬಗ್ಗೆ ನಮಗೆ ಮಾಹಿತಿ ನೀಡಲಾಗಿದೆ ಮತ್ತು ಅಧಿಕಾರಿಗಳು ಅದರ ಸಂಪೂರ್ಣ ಮೌಲ್ಯಮಾಪನವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ನಿಮ್ಮ ಸುರಕ್ಷತೆಗಾಗಿ ದಯವಿಟ್ಟು ಆ ಪ್ರದೇಶದಿಂದ ಬೇರೆಡೆಗೆ ಬನ್ನಿ ಎಂದು ಕಟ್ಟಡದ ಅಕ್ಕ-ಪಕ್ಕ ನಿವಾಸಿಗಳಲ್ಲಿ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು, ನಗರ ಕಟ್ಟಡ ಅಧಿಕಾರಿಗಳು ಧಾವಿಸಿ ತನಿಖೆ ಆರಂಭಿಸಿದ್ದಾರೆ.