ನ್ಯೂಸ್

ನಡುರಸ್ತೆಯಲ್ಲೇ ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​ಪುರಿಯಾ ತಾಯಿ ಹಾಗೂ ಚಾಲಕನಿಗೆ ಗುಂಡಿಕ್ಕಿ ಹತ್ಯೆ| shot-dead

ಬಟಾಲಾ: ನಿನ್ನೆ (27) ರಾತ್ರಿ ಪಂಜಾಬ್​ನ ಬಟಾಲಾ ನಗರದ ಜನನಿಬಿಡ ರಸ್ತೆಯಲ್ಲಿ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್ಪುರಿಯಾ ತಾಯಿ ಹರ್ಜಿತ್​ ಕೌರ್​ಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಕೌರ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಭಗವಾನ್‌ಪುರಿಯಾ ಅವರ ತಾಯಿ ಈ ಹಿಂದೆ ಗ್ರಾಮದ ಸರಪಂಚ್ ಆಗಿಯೂ ಸೇವೆ ಸಲ್ಲಿಸಿದ್ದರು. ಕಡಿಯನ್ ರಸ್ತೆಯಲ್ಲಿರುವ ಬೇಕರಿಯ ಹೊರಗೆ ಈ ಗುಂಡಿನ ದಾಳಿ ನಡೆದಿದ್ದು, ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ದಾಳಿಕೋರರು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಬಟಾಲಾ ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿ ಕುಳಿತಿರುವಾಗ ಈ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಚಾಲಕ ಕರಣ್‌ವೀರ್ ಸಿಂಗ್ ಕೂಡ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ. ಕುಖ್ಯಾತ ದೇವೇಂದ್ರ ಬಂಬಿಹಾ ಗ್ಯಾಂಗ್ ಇದರ ನೇರ ಹೊಣೆಯನ್ನು ಹೊತ್ತುಕೊಂಡಿದೆ.

ಜವಾಬ್ದಾರಿ ಹೊತ್ತ ಬಾಂಬಿಹಾ ಗ್ಯಾಂಗ್

(ಏಜೆನ್ಸೀಸ್)

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ರೀಲ್‌ನಲ್ಲಿ, ಗೋಪಿ ಘನಶಂಪುರಿಯಾ ಎಂಬ ಬಳಕೆದಾರ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ಈತನನ್ನು ಘನಶಂಪುರಿಯಾ ಬಂಬಿಹಾ ಗ್ಯಾಂಗ್‌ನ ಸದಸ್ಯ ಎಂದು ನಂಬಲಾಗಿದೆ. ಪೋಸ್ಟ್‌ನಲ್ಲಿ ಬಳಕೆದಾರರು ಕರಣ್‌ವೀರ್ ಬಗ್ಗೆ ಉಲ್ಲೇಖಿಸಿದ್ದಾರೆ, ಅವರೇ ನಿಜವಾದ ಗುರಿಯಾಗಿದ್ದರು ಮತ್ತು ಕೌರ್ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದರು ಎಂದು ಹೇಳಲಾಗಿದೆ.