ganesha festival : ಗಣೇಶ ಚತುರ್ಥಿ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವದ ಹಬ್ಬವಾಗಿದೆ. ಇದೇ ಆಗಸ್ಟ್ 27 ರಂದು ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಗಣೇಶ ಮೂರ್ತಿಯ ಪ್ರತಿಷ್ಠಾಪನೆಯು ಭಕ್ತಿಯಿಂದ ಕೂಡಿದ ಆಧ್ಯಾತ್ಮಿಕ ಕಾರ್ಯವಾಗಿದ್ದು, ಈ ಸಂದರ್ಭದಲ್ಲಿ ಶಾಸ್ತ್ರೋಕ್ತವಾಗಿ ಮತ್ತು ಗೌರವದಿಂದ ಅನೇಕ ನಿಯಮಗಳನ್ನು ಪಾಲಿಸಲಾಗುತ್ತದೆ. ಗಣೇಶ ಚತುರ್ಥಿಯಂದು ಗಣೇಶನನ್ನು ಪೂಜಿಸುವುದರಿಂದ ಎಲ್ಲಾ ರಾಶಿಚಕ್ರದವರಿಗೂ ಶುಭವಾಗಲಿದೆ. ಆದರೆ ರಾಶಿಚಕ್ರದ ಆಧಾರದ ಮೇಲೆ ಕೆಲವು ನಿರ್ದಿಷ್ಟ ಸಲಹೆಗಳನ್ನು ನೀಡಲಾಗಿದೆ. ಇದು ಭಕ್ತಿಯನ್ನು ಹೆಚ್ಚಿಸಲು ಮತ್ತು ಗಣೇಶನ ಆಶೀರ್ವಾದವನ್ನು ಪಡೆಯಲು ಸಹಾಯ ಮಾಡುತ್ತದೆ.
ಗಣೇಶ ಚತುರ್ಥಿಯ ದಿನದಂದು ಭಕ್ತಿ ಮತ್ತು ವಿಶೇಷ ಆಚರಣೆಗಳಿಂದ ಗಣೇಶನನ್ನು ಪೂಜಿಸಿದರೆ, ಜೀವನದ ಎಲ್ಲಾ ದುಃಖಗಳು ಮತ್ತು ನೋವುಗಳು ಕೊನೆಗೊಳ್ಳುತ್ತವೆ ಎಂದು ನಂಬಲಾಗಿದೆ. ಈ ದಿನ ಯಾವ ರಾಶಿಯ ವ್ಯಕ್ತಿ ಗಣೇಶನನ್ನು ಹೇಗೆ ಪೂಜಿಸಬೇಕು ಎಂಬುದನ್ನು ತಿಳಿಯೋಣ.
ಪೂಜೆಯ ಸಮಯದಲ್ಲಿ ಗಣಪತಿಗೆ ಕೆಂಪು ಹೂವು ಮತ್ತು 21 ಗರಿಕೆಗಳನ್ನು ಅರ್ಪಿಸಿ. ಜೊತೆಗೆ ಮೋದಕವನ್ನು ಅರ್ಪಿಸಿ ಓಂ ಗಣ ಗಣಪತಯೇ ನಮಃ ಎಂಬ ಮಂತ್ರ ಜಪಿಸಿ.
ಮೇಷ ರಾಶಿ
ಈ ರಾಶಿಯವರು ಗಣೇಶನಿಗೆ ಬಿಳಿ ಹೂವುಗಳನ್ನು ಅರ್ಪಿಸಬೇಕು ಮತ್ತು ತುಪ್ಪದ ದೀಪವನ್ನು ಹಚ್ಚಬೇಕು. ಗಣೇಶ ಚತುರ್ಥಿಯ ದಿನದಂದು ಗಣೇಶನಿಗೆ ಹಳದಿ ಲಡ್ಡುಗಳನ್ನು ಅರ್ಪಿಸಿದರೆ ತುಂಬಾ ಒಳ್ಳೆಯದು.
ವೃಷಭ ರಾಶಿ
ಈ ರಾಶಿಯ ಜನರು ಗಣೇಶ ಚತುರ್ಥಿಯ ದಿನ ದೇವರಿಗೆ ಕಡಲೆ ಹಿಟ್ಟಿನ ಲಡ್ಡುಗಳನ್ನು ಅರ್ಪಿಸಬೇಕು.
ಮಿಥುನ
ಬಿಳಿ ಹೂವುಗಳು ಮತ್ತು ತೆಂಗಿನಕಾಯಿಗಳನ್ನು ಅರ್ಪಿಸಿ ಹಾಗೂ ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಅರ್ಪಿಸಿದರೆ ಶುಭವಾಗಿರುತ್ತದೆ.
ಕರ್ಕಾಟಕ ರಾಶಿ
ಗಣೇಶನನ್ನು ಸರಿಯಾದ ವಿಧಿವಿಧಾನಗಳೊಂದಿಗೆ ಪೂಜಿಸಿ. ಪೂಜೆಯ ಸಮಯದಲ್ಲಿ ಹಳದಿ ಹೂವುಗಳು, ಗರಿಕೆ, ಸಿಹಿತಿಂಡಿಗಳನ್ನು ಅರ್ಪಿಸಿ.
ಸಿಂಹ ರಾಶಿ
ಹಸಿರು ಗರಿಕೆ ಹುಲ್ಲು ಮತ್ತು ಹಳದಿ ಹೂವುಗಳ ಜೊತೆಗೆ ಪ್ರಸಾದವಾಗಿ ಮೋದಕವನ್ನು ಅರ್ಪಿಸಿ.
ಕನ್ಯಾ ರಾಶಿ
ಗಣೇಶ ಚತುರ್ಥಿ ಪೂಜೆಯ ಸಮಯದಲ್ಲಿ ಗಣೇಶನಿಗೆ ಹಳದಿ ಸಿಹಿತಿಂಡಿಗಳನ್ನು ಅರ್ಪಿಸಿ.
ತುಲಾ
ಈ ರಾಶಿಯ ಜನರು ಗಣಪನಿಗೆ ದಾಳಿಂಬೆ, ಕೆಂಪು ಹೂವುಮತ್ತು ಬೆಲ್ಲವನ್ನು ಅರ್ಪಿಸಬೇಕು.
ವೃಶ್ಚಿಕ ರಾಶಿ
ಹಳದಿ ಲಡ್ಡುಗಳನ್ನು, ಹಳದಿ ಹೂವುಗಳು ಮತ್ತು ಅರಿಶಿನವನ್ನು ಅರ್ಪಿಸಿದರೆ ಉತ್ತಮ.
ಧನು ರಾಶಿ
ಈ ರಾಶಿಯವರು ದೇವರಿಗೆ ನೀಲಿ ಅಥವಾ ನೇರಳೆ ಹೂವುಗಳನ್ನು ಅರ್ಪಿಸಿ
ಮಕರ ರಾಶಿ
ನೀಲಿ ಅಥವಾ ಬಿಳಿ ಹೂವುಗಳನ್ನು ಅರ್ಪಿಸಿ ಅರ್ಪಿಸಬೇಕು. ಓಂ ವಿಘ್ನರಾಜಾಯ ನಮಃ ಎಂದು 108 ಬಾರಿ ಜಪ ಮಾಡಿ.
ಕುಂಭ ರಾಶಿ
(ಏಜೆನ್ಸೀಸ್)
ದೇವರನ್ನು ವಿಧಿವಿಧಾನಗಳೊಂದಿಗೆ ಪೂಜಿಸಿ ಮತ್ತು ಗುಲಾಬಿ ಹೂವು ಹಾಗೂ ಪೇಡವನ್ನು ಅರ್ಪಿಸಿ.
ಮೀನ ರಾಶಿ
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.