1. ಬಾಯಿಯ ಒಳಗಿರುವ ಲಾಲಾರಸ ಎಂಬ ಸಲೈವಾ ಗ್ರಂಥಿಗಳು ಕ್ರಿಯಾಶೀಲವಾಗುತ್ತವೆ. ಇದು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಆಕರ್ಷಿಸಿ ಆಮ್ಲಗಳನ್ನು ಹೊರಹಾಕಲು ಸಹಾಯ ಮಾಡುತ್ತವೆ. 2. ಎಣ್ಣೆ, ಕೊಬ್ಬುನಾಶಕ ತತ್ವಗಳನ್ನು ಆಕರ್ಷಿಸುವ ಕೊರಳಯುಕ್ತ ಎಂಬ ಲಿಪಿಡೋಫಿಲಿಕ್ ಸ್ವಭಾವ ಹೊಂದಿದೆ. ಇದರಿಂದಾಗಿ ಬಾಯಿಯಲ್ಲಿನ ವಿಷಕಣಗಳು ಮತ್ತು ಅಜೈವಿಕ ತತ್ವಗಳು ಎಣ್ಣೆಯೊಡನೆ ಬಿಗಿಯಾಗಿ ಸೇರಿ ದೇಹದಿಂದ ಶುದ್ಧಿಕರೀಸುತ್ತದೆ. 3. ಪಿತ್ತ ಮತ್ತು ನಂಜು ವಸ್ತುಗಳನ್ನು ಶಮನಗೊಳಿಸಲು ಇದು ಸಹಾಯಕವಾಗುತ್ತದೆ. 4. ಆಂಟಿ-ಇನ್ಪಾಮೇಟರಿ ಎಂಬ ಶೋಧನಾಶಕವಾಗಿದೆ. 5. ಕೆಟ್ಟ ಉಸಿರು, ಹಲ್ಲು ಕೊಳೆಯುವಿಕೆ ಹಾಗೂ ದಂತ ಸೋಂಕು ತಡೆಯುವ ಜೀವಾಣುನಾಶಕವೂ ಆಗಿದೆ.
1. ಆಚಾರ್ಯ ವಾಗ್ಬಟನ ಆಯುರ್ವೆದೀಯ ಅಷ್ಟಾಂಗ ಹೃದಯಮ್ ಗ್ರಂಥದಲ್ಲಿ ಹೇಳಿದಂತೆ - ಕಬಲಗ್ರಹ ಮತ್ತು ಗಂಡೂಷ ಕ್ರಮಗಳು ಪ್ರಸ್ತಾವಿತವಾಗಿದೆ. ಇದರಿಂದ ಹಲ್ಲುಗಳ ಬಲ ಹೆಚ್ಚುತ್ತದೆ. ನಾಲಿಗೆ ಶುದ್ಧೀಕರಣ ಸುಗಮಗೊಳ್ಳುತ್ತದೆ ಮತ್ತು ಒಟ್ಟಾರೆ ದಂತ ಆರೋಗ್ಯ ಉತ್ತಮಗೊಳ್ಳುತ್ತದೆ.
2. ಚರಕ ಮಹರ್ಷಿ ಚರಕಸಂಹಿತಾ-ಸೂತ್ರಸ್ಥಾನದಲ್ಲಿ ನಿತ್ಯ ಗಂಡೂಷ ಮತ್ತು ಕಬಲಗ್ರಹಗಳನ್ನು ಮಾಡಿದರೆ ಹಲ್ಲುಮೂಲೆ (ವಸುಡು) ಆರೋಗ್ಯವಾಗಿರುತ್ತದೆ. ಪರಿಫಾ (ಕಲ್ಲು ಕಟ್ಟುವಿಕೆ), ಹಳದಿ ಬಣ್ಣ, ಹಲ್ಲುಮೇಲಿನ ಕೊರಕು ಕಡಿಮೆಯಾಗಿತ್ತದೆ. ಉಲ್ಕುಂ, ಮಸುಕು, ಮುಖದ ಉರಿಯೂತ ನಿವಾರಣೆ ಯಾಗುತ್ತದೆಂದು ವಿವರಿಸಿದ್ದಾರೆ.
ಹುರಿದ ಮುದ, ಎಣ್ಣೆ ಅಥವಾ ಔಷಧಯುಕ್ತ ದ್ರಾವಣವನ್ನು ಬಾಯಿಯೊಳಗೆ ಹಿಡಿದುಕೊಳ್ಳುವುದು. ಇದನ್ನು ಚಲಿಸದಂತೆ ಗಾಳಿಯನ್ನು ಒಳಗಿಡದೆ ಬಾಯಿಯಲ್ಲಿ ಇಟ್ಟುಕೊಳ್ಳ ಬೇಕು ಮತ್ತು ನಿರ್ದಿಷ್ಟ ಕಾಲದ ನಂತರ ತ್ಯಜಿಸಬೇಕು. ಈ ವಿಧಾನವು ಬಾಯಿಯಲ್ಲಿನ ವ್ಯರ್ಥರಸ (ಆಮ್ಲ) ಬ್ಯಾಕ್ಟಿರೀಯಾ ಹಾಗೂ ವಿಷಕಣ ಗಳನ್ನು ಶೋಷಿಸಿ ದೇಹದಿಂದ ಹೊರ ತೆಗೆಯಲು ಸಹಾಯ ಮಾಡುತ್ತದೆ. ಇದು ಹಲ್ಲು, ನಾಲಿಗೆ, ಹಾಸು, ಗಂಟ ಲಿನ ಆರೋಗ್ಯಕ್ಕೆ ಪರಿಣಾಮಕಾರಿ.
ಅದೇ ದ್ರಾವಣ ಬಾಯಿ ಯಲ್ಲಿ ತೆಗೆದುಕೊಂಡು ಕಚ್ಚಿ, ಮಿಶ್ರಿಸಿ, ಬಾಯಿ ಮುಕ್ಕಳಿಸಿ ಕೊನೆಗೆ ಉಗುಳುವುದು. ಇದು ಗಂಟಲು ನೋವು, ಶೋಧ, ದಂತ ವಸಡಿನ, ಮಸೂರಿನ ಉರಿಯೂತ ಮತ್ತು ಬಾಯಿಯ ಶುದ್ಧೀಕರಣಕ್ಕೆ ಸಹಕಾರಿ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಸುವಿನ ತುಪ್ಪ, ತಲೆಎಣ್ಣೆ/ ತೆಂಗಿನ ಎಣ್ಣೆ/ ಜೇನುತುಪ್ಪ /ಔಷಧೀಯ ದ್ರಾವಣವನ್ನು 10-15 ನಿಮಿಷ ಬಾಯಿಯಲ್ಲಿ ಹಿಡಿಯಬೇಕು. ಕಬಲಗ್ರಹದಲ್ಲಿ ಬಾಯಿಯೊಳಗಿನ ದ್ರಾವಣವನ್ನು ಮುಕ್ಕಳಿಸಿ ತ್ಯಜಿಸಬೇಕು. ಗಂಟಲು ನೋವು, ಶೀತ, ನೆಗಡಿಯಿದ್ದರೆ 2-3 ದಿನ ಉಗುರು ಬೆಚ್ಚಗಿನ ನೀರಿನೊಂದಿಗೆ ಮಾಡಬಹುದು.
1. ಆಯುರ್ವೆದದ ಪ್ರಕಾರ: ದಂತ, ಹಾಸು, ಗಂಟಲು, ಮುಖ ಆರೋಗ್ಯಕ್ಕೆ ಅತ್ಯಂತ ಪರಿಣಾಮಕಾರಿ. 2. ವಿಜ್ಞಾನ ಪ್ರಕಾರ: ಬ್ಯಾಕ್ಟಿರೀಯಾ ಕಡಿಮೆ ಮಾಡಿ ದಂತ ಸಮಸ್ಯೆಗಳ ನಿವಾರಣೆ ಹಾಗೂ ಡಿ ಟಾಕ್ಸಿಫಿಕೇಶನ್. 3. ಪ್ರಸ್ತುತ ಅವಶ್ಯಕತೆ : ಆಧುನಿಕ ಆಹಾರದ ದುಷ್ಟ್ರಭಾವ, ಹಲ್ಲು ಸಮಸ್ಯೆ ಮತ್ತು ಶಾರೀರಿಕ ಶುದ್ಧೀಕರಣ.
ನಮ್ಮ ಆಹಾರ ಕಾರ್ಖಾನೆ-ಯಂತ್ರದ ಮೂಲಕ ತಯಾರಿಸಿ ರಾಸಾಯನಿಕ ಸಂರಕ್ಷಣೆ ಪದಾರ್ಥಗಳು ಕೃತಕ ಬಣ್ಣ, ರುಚಿ ವರ್ಧಕ ಇತ್ಯಾದಿ ಹೊಂದಿರಬಹುದು. ಸಕ್ಕರೆ ಹಾಗೂ ಕಾಬೋಹೈಡ್ರೇಟ್ ಹೆಚ್ಚಾಗಿದೆ. ಇದು ಹಲ್ಲುಗಳಲ್ಲಿ ಬ್ಯಾಕ್ಟಿರೀಯಾ ಹೆಚ್ಚಿಸಲು ಕಾರಣವಾಗುತ್ತದೆ. ಗಂಡೂಷ ಕ್ರಿಯೆ ಆರೋಗ್ಯಕರ ಪಿತ್ತ ನಿಯಂತ್ರಣ, ಚರ್ಮದ ಆರೋಗ್ಯ ಸುಧಾರಿಸುತ್ತದೆ.
2011ರ ಜರ್ನಲ್ ಆಪ್ ಆಯುರ್ವೆದ ಎಂಡ್ ಇಂಟಿಗ್ರೇಟಿವ ಮೆಡಿಸಿನ್ ಪ್ರಕಾರ ಎಳ್ಳೆಣ್ಣೆಯಿಂದ ಗಂಡೂಷ ಮಾಡಿಸಿದರೆ ಹಲ್ಲುಗಳ ರಂಧ್ರ, ಹಲ್ಲುಮೂಲೆ, ಉರಿಯೂತ, ಬ್ಯಾಕ್ಟಿರೀಯಾ ಸೋಂಕು ಕಡಿಮೆಯಾಗುವುದು. ಆಯಿಲ್ ಪುಲ್ಲಿಂಗ್ ತಂತ್ರ ನೈಸರ್ಗಿಕ ಹಲ್ಲುಗಳ ಮೇಲೆ ಹಾನಿಕಾರಕ ಬ್ಯಾಕ್ಟೀರಿಯಾಗಳ ಮುಚ್ಚಳಿಕೆ ತೆಗೆದು ಹಾಕುತ್ತದೆ ಹಾಗೂ ದಂತ ರೋಗವನ್ನು ತಡೆಯುತ್ತದೆ.