ಮುಂಬೈ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದ ಗುಜರಾತ್ ಮತ್ತು ಮುಂಬೈ ಸೆಂಟ್ರಲ್ ನಡುವಣ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಅಪಘಾತಕ್ಕೀಡಾಗಿದೆ. ಬೆಳಗ್ಗೆ 11.15ರ ಸುಮಾರಿಗೆ ವತ್ವಾ ಮತ್ತು ಮಣಿನಗರ ನಡುವಣ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ. ರೈಲಿನ ಮುಂಭಾಗ ಹಾಗೂ ಇಂಜಿನ್ಗೆ ಹಾನಿಯಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಸಂಚರಿಸುವ ಸಮಯಲ್ಲಿ ಎಮ್ಮೆಗಳು ರೈಲ್ವೇ ಹಳಿ ದಾಟಿದೆ. ಇದರಿಂದಾಗಿ ಅಪಘಾತ ಸಂಭವಿಸಿದೆ. ರೈಲು 100 kmph ವೇಗದಲ್ಲಿ ಸಂಚರಿಸುತ್ತಿತ್ತು. ಹೀಗಾಗಿ ದೊಡ್ಡ ಮಟ್ಟದ ಹಾನಿಯಾಗಿಲ್ಲ. ಫೈಬರ್ನಿಂದ ಕೂಡಿದ ರೈಲಿನ ಮುಂಭಾಕ್ಕೆ ಹಾನಿಯಾಗಿದೆ.
11.15ರ ವೇಳೆ ವತ್ವಾ - ಮಣಿನಗರ ಮಾರ್ಗವಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬರಲಿದೆ. ಈ ವೇಳೆ ರೈಲ್ವೇ ಹಳಿ ಸಮೀಪ ನಿಮ್ಮ ದನಕರುಗಳನ್ನು ಬಿಡಬೇಡಿ ಎಂದು ಈ ಭಾಗದ ಸ್ಥಳೀಯರಿಗೆ ರೈಲ್ವೇ ಇಲಾಖೆ ತಿಳಿಸಿದೆ. (ಏಜೆನ್ಸೀಸ್)