ಹೈದರಾಬಾದ್: ರಾಮ್ ಚರಣ್ ಮತ್ತು ಕಿಯಾರ ಅಡ್ವಾಣಿ ಅಭಿನಯದ ಚೇಂಚರ್ ಗೇಮ್(Game Changer) ಸಿನಿಮಾ ಇದೇ ಜ.10ರಂದು ಬಿಡುಗಡೆಯಾಗಿದೆ. ಬಿಡುಗಡೆಯಾಗಿ ಕೆಲವೇ ಕ್ಷಣಗಳಲ್ಲಿ ಚಿತ್ರ ಪೈರಸಿ(ನಕಲಿ)ಯಾಗಿದೆ ಎಂದು ಚಿತ್ರತಂಡ ದೂರಿದ್ದು, ಪೈರಸಿ ಮಾಡಿದವರ ವಿರುದ್ದ ಇದೀಗ ಎಫ್ಐಆರ್ ದಾಖಲಾಗಿದೆ.
ಗೇಮ್ ಚೇಂಚರ್ ಸಿನಿಮಾ ತಮಿಳಿನ ಶಂಕರ್ ರ್ನಿರ್ದೇಶನ ಮಾಡಿದ್ದಾರೆ. ದೊಡ್ಡ ಬಜೆಟ್ನ ಚಿತ್ರ ಇದಾಗಿದೆ. ಸಿನಿಮಾ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಪೈರಸಿಯಾಗಿದೆ. ಅಲ್ಲದೆ. ಬಿಡುಗಡೆಗೊಂಡ ಕೆಲ ದಿನಗಳಲ್ಲಿಯೇ ಎಚ್ಡಿ ಪ್ರಿಂಟ್ ಫುಲ್ ಸಿನಿಮಾ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂದು ಚಿತ್ರತಂಡ ದೂರಿದೆ. ಫುಲ್ ಸಿನಿಮಾವನ್ನು ಯುಟ್ಯೂಬ್ನಲ್ಲಿ ಲೀಕ್ ಮಾಡಲಾಗಿದೆ. ದೊಡ್ಡ ಗಾತ್ರದ ಸಿನಿಮಾಗಳಿಗೆ ದೊಡ್ಡ ಬಜೆಟ್ ಹಾಕಿದ್ದೇವೆ. ಆದರೆ. ಇಂತಹ ಕೃತ್ಯಗಳಿಂದ ಚಿತ್ರಗಳು ನಷ್ಟ ಆಗಲಿವೆ ಎಂದು ಚಿತ್ರತಂಡ ಬೇಸರ ವ್ಯಕ್ತಪಡಿದೆ.
ಸಿನಿಮಾ ಬಿಡುಗಡೆ ಮುನ್ನವೇ ಹಲವರು ಪೈರಸಿ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ಪೈರಸಿ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಕಪಿಲ್ ದೇವ್ ತಲೆಗೆ ಗುಂಡು ಹಾರಿಸಲು ಹೋಗಿದ್ದೆ.. ಯುವಿ ತಂದೆ ಹೇಳಿಕೆಗೆ ಕಪಿಲ್ ಕೊಟ್ಟ ಉತ್ತರ ವೈರಲ್! | Kapil
ಈ ಪೈರಸಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೈಬರ್ ಕ್ರೈಮ್ ಪೊಲೀಸರಿಗೆ ಚಿತ್ರತಂಡ, ಇದೀಗ 45 ಜನರ ವಿರುದ್ದ ಎಫ್ಐಆರ್ ದಾಖಲು ಮಾಡಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು 45 ಜನರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಅಲ್ಲದೆ, ಈ ತಂಡದಲ್ಲಿ 45 ಜನರಷ್ಟೇ ಇದ್ದಾರೆಯೇ ಅಥವಾ ಯಾರ ಕೈವಾಡ ಇದಿಯೇ ಎಂದು ತನಿಖೆ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)