ಮುಂಬೈ: ಆಗಸ್ಟ್ 11 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಸನ್ನಿ ಡಿಯೋಲ್ ನಟನೆಯ 'ಗದರ್ 2' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆಯನ್ನು ಕಾಣುವ ಮುಖೇನ ಇದೀಗ ಬ್ಲಾಕ್‌ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದೆ. ಸದ್ಯ ಈ ಸಿನಿಮಾ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿದ್ದ 'ಕೆಜಿಎಫ್ 2' ಚಿತ್ರದ ಗಳಿಕೆಯನ್ನು ಹಿಂದಿಕ್ಕುವಲ್ಲಿ ಈಗ ಯಶಸ್ವಿಯಾಗಿದೆ.
ಹೊಸದೊಂದು ಮೈಲಿಗಲ್ಲು ಸಾಧಿಸುವ ಮೂಲಕ ಸಿನಿಪ್ರೇಕ್ಷಕರ ಗಮನಸೆಳೆದ 'ಗದರ್ 2', ಹಿಂದಿನ ದಾಖಲೆಗಳಿಗೆ ಸೆಡ್ಡು ಹೊಡೆದು, ತನ್ನದೇ ಹೊಸ ದಾಖಲೆಯನ್ನು ಬರೆಯುತ್ತಿದೆ. ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿದ್ದ 'ಕೆಜಿಎಫ್ 2' ಚಿತ್ರದ ಗಳಿಕೆಯನ್ನು ಇದೀಗ ಸನ್ನಿ ಡಿಯೋಲ್ ಸಿನಿಮಾ ಮುರಿದಿದೆ.
2001ರ ಬ್ಲಾಕ್‌ಬಸ್ಟರ್ 'ಗದರ್'ನ ಮುಂದುವರಿದ ಭಾಗವಾದ 'ಗದರ್ 2', 439 ಕೋಟಿ ರೂ. ನಿವ್ವಳ ಗಳಿಕೆ ಕಾಣುವ ಮೂಲಕ 'ಕೆಜಿಎಫ್ 2' ಚಿತ್ರದ 434 ಕೋಟಿ ರೂ. ಕಲೆಕ್ಷನ್ ಅನ್ನು ಹಿಂದಿಕ್ಕಿದೆ. ಈ ಮುಖೇನ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
'ಗದರ್ 2' ಬಿಡುಗಡೆಗೊಂಡ ಮೊದಲ ದಿನದಿಂದಲೂ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವು, ಬಾಲಿವುಡ್ನ 'ಪಠಾಣ್', 'ಬಾಹುಬಲಿ 2' ಬಳಿಕ 3ನೇ ಅತಿ ಹೆಚ್ಚು ಗಳಿಕೆ ಕಂಡ ಚಲನಚಿತ್ರವಾಗಿ ಹೊರಹೊಮ್ಮಿದೆ.
ಅನಿಲ್ ಶರ್ಮಾ ನಿರ್ದೇಶನದ 'ಗದರ್ 2' ಚಿತ್ರದಲ್ಲಿ ಉತ್ಕರ್ಷ್ ಶರ್ಮಾ, ಸಿಮ್ರತ್ ಕೌರ್, ಮನೀಶ್ ವಾಧ್ವಾ, ಗೌರವ್ ಚೋಪ್ರಾ, ಲುವ್ ಸಿನ್ಹಾ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಈ ಚಿತ್ರ ಚಿತ್ರಮಂದಿರಗಳಲ್ಲಿ ಇಂದಿಗೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ,(ಏಜೆನ್ಸೀಸ್).