ನ್ಯೂಸ್

ಮಲಗಿದ್ದಲ್ಲೇ ಹೃದಯಾಘಾತದಿಂದ ಪ್ರಾಣ ಬಿಟ್ಟ ಡಿಡಿಪಿಯು ಕೃಷ್ಣಪ್ಪ

ಗದಗ: ಪದವಿ ಪೂರ್ವ ಶಿಕ್ಷಣ ಇಲಾಖೆಯ (ಡಿಡಿಪಿಯು) ಉಪನಿರ್ದೇಶಕ ಡಾ ಪಿ. ಕೃಷ್ಣಪ್ಪ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಡಾ ಪಿ. ಕೃಷ್ಣಪ್ಪ ಅವರಿಗೆ 56 ವರ್ಷ ವಯಸ್ಸಾಗಿತ್ತು. ಮನೆಯಲ್ಲಿ ಮಲಗಿದ್ದ ವೇಳೆಯಲ್ಲಿಯೇ ಹೃದಯಾಘಾತಗೊಂಡು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಡಾ ಪಿ. ಕೃಷ್ಣಪ್ಪ ಅವರು ಮೂಲತಃ ಕೋಲಾರ ಜಿಲ್ಲೆಯವರಾಗಿದ್ದರು. ಕಳೆದ 8 ತಿಂಗಳ ಹಿಂದೆಯಷ್ಟೇ ಗದಗ ಜಿಲ್ಲೆಗೆ ವರ್ಗಾವಣೆಯಾಗಿ ಬಂದಿದ್ದರು. ಹೃದಯಾಘಾತಗೊಂಡು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಅತಿಯಾದ ಬೆವರು ಯಾವುದೇ ಸೂಕ್ತ ಕಾರಣಗಳಿಲ್ಲದೆ ನೀವು ಹಠಾತ್‌ ಆಗಿ ಸಿಕ್ಕಾಪಟ್ಟೆ ಬೆವರಲಾರಂಭಿಸಿದರೆ ಅದು ಹೃದಯಾಘಾತದ ಮೊದಲ ಲಕ್ಷ ಣವಾಗಿರಬಹುದು ಎನ್ನುತ್ತಾರ ತಜ್ಞರು. ಅಜೀರ್ಣ ಮತ್ತು ವಾಂತಿ, ಹಸಿವಾಗದಿರುವುದು, ದವಡೆ ನೋವು, ಹಠಾತ್‌ ಮತ್ತು ತಾತ್ಕಾಲಿಕ ಪ್ರಜ್ಞೆಹೀನರಾಗುವುದು, ನಿದ್ರಾ ಹೀನತೆ ಮುಖ್ಯ ಲಕ್ಷಣಗಳಾಗಿವೆ.

ಈ ಲಕ್ಷಣಗಳು ಹೃದಯ ರೋಗದ ಮುನ್ಸೂಚನೆಗಳು:

ಹೃದಯಾಘಾತವು ಇದ್ದಕ್ಕಿದ್ದಂತೆ ಸಂಭವಿಸುವುದಿಲ್ಲ, ಅದು ನಮ್ಮ ಜೀವನಶೈಲಿಯ ಅಧಾರದ ಮೇಲೆ ಅವಲಂಬಿತವಾಗಿರುತ್ತದೆ. ಜೀವನಶೈಲಿ ಎಷ್ಟು ಉತ್ತಮವಾಗಿರುತ್ತದೆಯೋ ನಮ್ಮ ಆರೋಗ್ಯ ಅಷ್ಟೇ ಉತ್ತಮವಾಗಿರುತ್ತದೆ. ಇಲ್ಲಿ ಸ್ವಲ್ಪ ಏರುಪೇರಾದರೂ ಇನ್ನಿಲ್ಲದ ಆರೋಗ್ಯ ಸಮಸ್ಯೆಗಳು ಆಹ್ವಾನ ನೀಡದೇ ಬಂದು ಬಿಡುತ್ತವೆ.