ಬೆಂಗಳೂರು: ರಾಜಧಾನಿಯಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಕಳೆಗಟ್ಟಿದೆ. ಅಂಗಡಿ, ಮಾಲ್ಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದರೆ, ಶನಿವಾರ ಮಾರುಕಟ್ಟೆಗಳಲ್ಲಿ ಹಬ್ಬಕ್ಕೆ ಹೂ-ಹಣ್ಣು, ದೀಪಗಳು ಹಾಗೂ ಆಕಾಶಬುಟ್ಟಿಗಳ ಖರೀದಿ ಬಿರುಸಾಗಿ ಸಾಗಿತ್ತು.
ಪೂಜೆಗೆ ಬೇಕಾದ ಹೂವು, ಹಣ್ಣು, ಬೂದುಗುಂಬಳ, ಬಾಳೆಕಂದು, ಅಂಗಡಿಗಳಲ್ಲಿ ಜನರು ಖರೀದಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ಆಯುಧಪೂಜೆ ಹಾಗೂ ವಿಜಯದಶಮಿಯಂದು ವಾಹನ ಹಾಗೂ ಅಂಗಡಿ ಮಳಿಗೆಗಳು, ಕಾರ್ಖಾನೆಗಳಲ್ಲಿ ಪೂಜೆ ಮಾಡಿದರೆ, ಹಲವರು ದೀಪಾವಳಿಯಲ್ಲಿ ಮಾಡುತ್ತಾರೆ. ಹಾಗಾಗಿ ಅಂಗಡಿಗಳಲ್ಲಿ ಸಿಹಿತಿನಿಸುಗಳ ಖರೀದಿಯೂ ಹೆಚ್ಚಿತ್ತು.
ಹೂ ಬೆಳೆಗಾರರಿಗೆ ಸಂಕಷ್ಟ: ಈ ಬಾರಿ ತರಕಾರಿ ಬೆಳೆಗಾರರೆಲ್ಲ ಹೂವಿನ ಬೆಳೆಯತ್ತ ವಾಲಿದ್ದರಿಂದ ಯಥೇಚ್ಚ ಪ್ರಮಾಣದ ಹೂವು ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಹೂವಿನ ಬೆಲೆ ಸಗಟು ದರದಲ್ಲಿ ಇಳಿಕೆಯಾಗಿದೆ. ಸಗಟು ದರದಲ್ಲಿ ಸೇವಂತಿಗೆ ಕೆ.ಜಿ. ಹೂವಿಗೆ ಕೇವಲ 30-50 ರೂ. ಇದೆ. ಉಳಿದಂತೆ