More

    ಸರ್ಕಾರದ ಹಸ್ತಕ್ಷೇಪ:ಚಾಂಪಿಯನ್ಸ್ ಟ್ರೋಫಿ ಅರ್ಹತೆ ಕಳೆದುಕೊಂಡ ಮಾಜಿ ಚಾಂಪಿಯನ್ಸ್

    ಬೆಂಗಳೂರು: ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪದಿಂದಾಗಿ ಐಸಿಸಿಯಿಂದ ಅಮಾನತುಗೊಂಡಿರುವ ಬೆನ್ನಲ್ಲೇ ಶ್ರೀಲಂಕಾ ತಂಡ 2025ರ ಚಾಂಪಿಯನ್ಸ್ ಟ್ರೋಫಿ ಅರ್ಹತೆಯಿಂದಲೂ ವಂಚಿತವಾಗಿದೆ. ಏಕದಿನ ವಿಶ್ವಕಪ್‌ನ ಅಗ್ರ-8 ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದು, ಲಂಕಾ ಆಡಿರುವ 9 ಪಂದ್ಯಗಳಲ್ಲಿ 4 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನಿಯಾಗಿ ಟೂರ್ನಿ ಮುಗಿಸಿದೆ. ಇದರಿಂದಾಗಿ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿದೆ. ಆದರೆ, ಒಂದು ವೇಳೆ ಲಂಕಾ ಅರ್ಹತೆ ಗಳಿಸಿದ್ದರೂ, ಲಂಕಾ ಮಂಡಳಿಯ ಮೇಲಿನ ನಿರ್ಬಂಧವನ್ನು ಐಸಿಸಿ ತೆರವುಗೊಳಿಸದಿದ್ದರೆ ಟೂರ್ನಿಯಲ್ಲೂ ಆಡುವಂತಿರಲಿಲ್ಲ.

    ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ಎದುರು ಹೀನಾಯ ಸೋಲು ಅನುಭವಿಸಿದ ಶ್ರೀಲಂಕಾ ತಂಡದ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಕ್ರೀಡಾ ಸಚಿವ ರೋಶನ್ ರಣಸಿಂಘೆ ವಜಾಗೊಳಿಸಿ ನೂತನ ಮಧ್ಯಂತರ ಮಂಡಳಿಯನ್ನು ರಚಿಸಿದ್ದರು. ಬಳಿಕ ಅಲ್ಲಿನ ಸ್ಥಳೀಯ ನ್ಯಾಯಾಲಯ ಸಮಿತಿಯನ್ನು ವಜಾಗೊಳಿಸಿತ್ತು.
    1996ರ ವಿಶ್ವಕಪ್ ವಿಜೇತ ತಂಡದ ನಾಯಕ ಅರ್ಜುನ ರಣತುಂಗ ನೇತೃತ್ವದ ಏಳು ಸದಸ್ಯರ ಮಧ್ಯಂತರ ಸಮಿತಿತಲ್ಲಿ ಮೂವರು ನಿವೃತ್ತ ನ್ಯಾಯಾಧೀಶರು, ಅವರಲ್ಲಿ ಇಬ್ಬರು ಮಹಿಳೆಯರು ಮತ್ತು ಮಾಜಿ ಎಸ್‌ಎಲ್‌ಸಿ ಅಧ್ಯಕ್ಷ ಉಪಲಿ ಧರ್ಮದಾಸ ಇದ್ದರು. 2023ರ ಏಷ್ಯಾಕಪ್ ೈನಲ್ ಸೋಲಿನ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಎದುರು 302 ರನ್‌ಗಳ ಹೀನಾಯ ಸೋಲು ಅನುಭವಿಸಿದ ಶ್ರಿಲಂಕಾ ತಂಡದ ವಿರುದ್ಧ ಸಾರ್ವಜನಿಕರ ಆಕ್ರೋಶದ ಜತೆಗೆ ಶಮಿ ಸಿಲ್ವಾ ನೇತೃತ್ವದ ಶ್ರೀಲಂಕಾ ಕ್ರಿಕೆಟ್ ಮಂಡಳಿ ರಾಜೀನಾಮೆಗೆ ಒತ್ತಡ ಹೇರಲಾಗಿತ್ತು. ಸತತ ಮೂರನೇ ಅವಧಿಗೆ ಸಿಲ್ವಾ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts