ಶಬ್ದ ಮಾಲಿನ್ಯದಿಂದ ಕಿವಿ ಮಾತ್ರವಲ್ಲ, ನಿದ್ದೆ-ಹೃದಯದ ಆರೋಗ್ಯಕ್ಕೂ ಹೊಡೆತ 
ನ್ಯೂಸ್

Noise Pollution: ಹಾರ್ನ್‌ನಿಂದ ಡಿಜೆವರೆಗೆ ಎಲ್ಲೆಲ್ಲೂ ಸದ್ದು; ಕಿವಿ ಮಾತ್ರವಲ್ಲ, ನಿದ್ದೆ-ಹೃದಯದ ಆರೋಗ್ಯಕ್ಕೂ ಬೀಳ್ತಿದೆ ಹೊಡೆತ!

ನಗರಗಳಲ್ಲಿ ನಿರಂತರವಾಗಿ ಕಾಡುವ ಶಬ್ದ ಮಾಲಿನ್ಯವು ಶ್ರವಣ ಸಾಮರ್ಥ್ಯ, ನಿದ್ರೆ, ಒತ್ತಡ, ಹೃದಯದ ಆರೋಗ್ಯ ಮಾತ್ರವಲ್ಲದೆ ಮಕ್ಕಳ ಕಲಿಕೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

Noise Pollution: ಹಬ್ಬ-ಹರಿದಿನಗಳಲ್ಲಿ ಡಿಜೆ, ಧ್ವನಿವರ್ಧಕ, ಪಟಾಕಿಗಳ ಸದ್ದು ಜೋರಾಗೋದು ಸಾಮಾನ್ಯ. ಆದ್ರೆ ವಾಹನಗಳ ಹಾರ್ನ್, ಟ್ರಾಫಿಕ್, ಕಟ್ಟಡ ಕಾಮಗಾರಿ ಹಾಗೂ ಜೋರಾಗಿ ಇಯರ್‌ಫೋನ್ ಬಳಸೋದ್ರಿಂದ ನಗರಗಳಲ್ಲಿ ವರ್ಷವಿಡೀ ಶಬ್ದ ಮಾಲಿನ್ಯ ಹೆಚ್ಚಾಗ್ತಿದೆ. ಇದರಿಂದ ಕಿವಿ ಮಾತ್ರವಲ್ಲ, ನಿದ್ದೆ, ಒತ್ತಡ, ಹೃದಯದ ಆರೋಗ್ಯ ಹಾಗೂ ಏಕಾಗ್ರತೆ ಮೇಲೂ ಪರಿಣಾಮ ಬೀರಬಹುದು ಅಂತ ತಜ್ಞರು ಎಚ್ಚರಿಸಿದ್ದಾರೆ.

85 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದಕ್ಕೆ ದೀರ್ಘಕಾಲ ಒಡ್ಡಿಕೊಂಡ್ರೆ ಒಳಕಿವಿಯ ಸೂಕ್ಷ್ಮ ಕೋಶಗಳು ಹಾನಿಯಾಗಿ, ಶ್ರವಣ ಶಕ್ತಿ ಶಾಶ್ವತವಾಗಿ ಕುಂಠಿತವಾಗಬಹುದು. ಕಿವಿಯಲ್ಲಿ ಗುಂಯ್ ಶಬ್ದ, ಕೇಳಿಸೋದು ಕಡಿಮೆಯಾಗೋದು ಹಾಗೂ ಕಿವಿ ಬ್ಲಾಕ್ ಆಗೋದು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಬಹುದು.

ಶಬ್ದದಿಂದ ನಿದ್ದೆಗೆ ಭಂಗ, ಒತ್ತಡ

ನಿರಂತರ ಶಬ್ದದಿಂದ ಒತ್ತಡ, ಕಿರಿಕಿರಿ, ಆತಂಕ ಹಾಗೂ ಆಯಾಸ ಹೆಚ್ಚಾಗಬಹುದು. ರಾತ್ರಿ ಶಬ್ದದಿಂದ ನಿದ್ದೆ ಪದೇಪದೇ ಅಡ್ಡಿಯಾದ್ರೆ ನಿದ್ದೆ ಚಕ್ರಕ್ಕೆ ತೊಂದರೆಯಾಗಿ ಮರುದಿನ ಸುಸ್ತು ಹೆಚ್ಚಾಗಬಹುದು. ದೀರ್ಘಕಾಲದ ಶಬ್ದ ಮಾಲಿನ್ಯ ರಕ್ತದೊತ್ತಡ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನೂ ಹೆಚ್ಚಿಸಬಹುದು.

ನಗರಗಳಲ್ಲಿ ವರ್ಷವಿಡೀ ಹೆಚ್ಚಾಗುತ್ತಿದೆ ಶಬ್ದ ಮಾಲಿನ್ಯ

ಮಕ್ಕಳ ಮೇಲೂ ಪರಿಣಾಮ

ಶಬ್ದ ಮಾಲಿನ್ಯ ಮಕ್ಕಳ ಕಲಿಕೆ, ಏಕಾಗ್ರತೆ, ನೆನಪು ಹಾಗೂ ಭಾಷಾ ಬೆಳವಣಿಗೆ ಮೇಲೂ ಪರಿಣಾಮ ಬೀರಬಹುದು ಎಂದು ತಜ್ಞೆಯೊಬ್ಬರು ಹೇಳಿದ್ದಾರೆ. ಇನ್ನು ಜೋರಾಗಿ ಇಯರ್‌ಬಡ್ಸ್ ಬಳಸೋದ್ರಿಂದ ಯುವಕರಲ್ಲಿ ಶ್ರವಣ ಹಾನಿ ತಕ್ಷಣ ಗೊತ್ತಾಗದೇ, ವರ್ಷಗಳ ಬಳಿಕ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಹಬ್ಬದ ದಿನ ಮಾತ್ರವಲ್ಲ, ವರ್ಷವಿಡೀ ಸಮಸ್ಯೆ

ಪರಿಸರ ತಜ್ಞರ ಪ್ರಕಾರ, ವಾಹನಗಳು, ಹಾರ್ನ್, ಕಟ್ಟಡ ಕಾಮಗಾರಿ ಹಾಗೂ ವಾಣಿಜ್ಯ ಚಟುವಟಿಕೆಗಳಿಂದ ನಗರಗಳಲ್ಲಿ ವರ್ಷವಿಡೀ ಶಬ್ದ ಮಾಲಿನ್ಯ ಇರುತ್ತೆ. ಹಬ್ಬದ ಸಂದರ್ಭದಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತೆ.

ಇದನ್ನೂ ಓದಿ: ಜಾಲಹಳ್ಳಿಯಲ್ಲಿ ಭೀಕರ ಅಪಘಾತ; ಪಾದಚಾರಿಗೆ ಡಿಕ್ಕಿ ಹೊಡೆದ ಟೆಂಪೋ, ಸಿಸಿಟಿವಿ ದೃಶ್ಯ ವೈರಲ್! | Bengaluru Accident

ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ವರ್ಷವಿಡೀ ಶಬ್ದದ ಮಟ್ಟ ಅಳೆಯೋದು, ರಸ್ತೆ ಬದಿಯಲ್ಲಿ ಮರ ಬೆಳೆಸೋದು, ಕಾರ್ಯಕ್ರಮಗಳಲ್ಲಿ ಶಬ್ದ ತಡೆಗೋಡೆ ಬಳಸೋದು ಹಾಗೂ ಹಾರ್ನ್ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ನಿಯಮಗಳನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸೋದು ಅಗತ್ಯ.(ಏಜೆನ್ಸೀಸ್)