ನ್ಯೂಸ್

ಯುಕೆಯಲ್ಲಿ ಮೋದಿ ಚಾಯ್ ಪೆ ಚರ್ಚಾ! ಭಾರತ ಮೂಲದ ಚಾಯ್​ವಾಲಾ ಪ್ರಧಾನಿಗೆ ಹೇಳಿದ್ದೇನು? Narendra Modi In UK

Narendra Modi In UK: ಯುಕೆ ಪ್ರಧಾನಿಯವರ ಅಧಿಕೃತ ನಿವಾಸವಾದ ಚೆಕರ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಚಹಾ ಸೇವಿಸುವ ಮೂಲಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.

ಅಮಲಾ ಚಾಯ್ ಮಾಲೀಕ ಭಾರತೀಯ ಮೂಲದ ಉದ್ಯಮಿ ಅಖಿಲ್ ಪಟೇಲ್ , ಯುಕೆ ಪ್ರಧಾನಿ ನಿವಾಸದಲ್ಲಿ ತಾತ್ಕಾಲಿಕ ಟೀ ಸ್ಟಾಲ್ ಸ್ಥಾಪಿಸಿದ್ದು, ಈ ವೇಳೆ ಪಟೇಲ್ ಮತ್ತು ಪ್ರಧಾನಿ ಮೋದಿ ನಡುವಿನ ಹೃದಯಸ್ಪರ್ಶಿ ಸಂವಾದವು ಈಗ ವೈರಲ್ ಆಗಿದೆ.

ಇಬ್ಬರು ನಾಯಕರು ತಮ್ಮ ಅಂಗಡಿಗೆ ಬಂದಾಗ, ವರ್ಣರಂಜಿತ ನೆಹರೂ ಜಾಕೆಟ್ ಧರಿಸಿದ ಪಟೇಲ್, ತಮ್ಮ ಚಹಾ ಪುಡಿಯನ್ನು ಭಾರತದ ಅಸ್ಸಾಂನಿಂದ, ಅದಕ್ಕೆ ಬಳಸುವ ಮಸಾಲೆಗಳನ್ನು ಕೇರಳದಿಂದ ತರಲಾಗುತ್ತದೆ. ಆದರೆ, ಲಂಡನ್‌ನಲ್ಲಿ ತಯಾರಿಸಲಾಗುತ್ತದೆ ಎಂದು ಪಟೇಲ್, ಸ್ಟಾರ್ಮರ್‌ಗೆ ಒಂದು ಕಪ್ ಚಹಾ ನೀಡುತ್ತಾ ಹೇಳಿದರು.

ಪಟೇಲ್ ಅವರು ಪ್ರಧಾನಿ ಮೋದಿಯವರಿಗೆ ಒಂದು ಕಪ್ ಚಹಾವನ್ನು ಹಸ್ತಾಂತರಿಸುವಾಗ ಹೇಳಿದ ಮಾತೊಂದು ಸದ್ಯ ಎಲ್ಲರ ಗಮನ ಸೆಳೆದಿದೆ, ಒಬ್ಬ ಚಾಯ್‌ವಾಲಾದಿಂದ ಇನ್ನೊಬ್ಬ ಚಾಯ್​ವಾಲಾಗೆ ಎಂಬ ಮಾತು ವಿಡಿಯೋದಲ್ಲಿದೆ. ಆ ಹಾಸ್ಯಕ್ಕೆ ಮೋದಿ ನಗುತ್ತಾ, ತಲೆಯಾಡಿಸುವುದರೊಂದಿಗೆ ಪ್ರತಿಕ್ರಿಯಿಸಿದರು.

ಈ ಸಂವಾದದ ಚಿತ್ರಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ. "ಚೆಕರ್ಸ್‌ನಲ್ಲಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಚಾಯ್ ಪೆ ಚರ್ಚಾ, ಭಾರತ-ಯುಕೆ ಸಂಬಂಧಗಳನ್ನು ಬಲಪಡಿಸುತ್ತದೆ!" ಎಂದು ಟ್ವೀಟ್ ಮಾಡಿದ್ದಾರೆ.

2019 ರಲ್ಲಿ ಅಮಲಾ ಚಾಯ್ ಮುನ್ನಡೆಸುತ್ತಿರುವ ಪಟೇಲ್, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ನರೇಂದ್ರ ಮೋದಿ ಮತ್ತು ಕೀರ್ ಸ್ಟಾರ್ಮರ್‌ಗೆ ಚಾಯ್ ಬಡಿಸುತ್ತಿರುವ ಕ್ಷಣವನ್ನು ಎಂತಹ ಮೋಜಿನ ದಿನ! ನಿಜಕ್ಕೂ ಇದು ಗೌರವವನ್ನು ಮೀರಿದ್ದು ಮತ್ತು ಸ್ಫೂರ್ತಿ ನೀಡುವಂತ ಮಾತುಗಳು. ಒಂದು ಅದ್ಭುತವಾದ ಕ್ಷಣಗಳು ಎಂದು ಪಟೇಲ್ ವೈರಲ್ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.(ಏಜೆನ್ಸೀಸ್)

-