ಶಿಥಿಲಗೊಂಡ ಸರ್ಕಾರಿ ಶಾಲಾ ಕೋಣೆ

24 ydg 01
Published on

ಯಾದಗಿರಿ: ತಾಲೂಕಿನ ಹೊನಗೇರಾ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಐದು ಕೊಣೆಗಳು ಸಂಪೂರ್ಣ ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು ನಿತ್ಯ ಬಯಲಿನಲ್ಲಿಯೇ ಕುಳಿತು ಪಾಠ ಆಲಿಸುವಂತಾಗಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾ ಘಟಕ ಆರೋಪಿಸಿದೆ.

ಆಗೋ-ಈಗೋ ಬೀಳುವಂತಿರುವ ಶಾಲೆಗೆ ಜಿಲ್ಲಾ ಘಟಕದ ನಿಯೋಗದ ಸಂಚಾಲಕ ಗವಿಲಿಂಗ ಹೊರನಗೇರಾ ಭೇಟಿ ನೀಡಿ, ಅಲ್ಲಿನ ಸಮಸ್ಯೆ ಖುದ್ದಾಗಿ ಗಮನಿಸಿದರು. ಒಟ್ಟು ೯ ಕೊಠಡಿಗಳಿದ್ದು, ಇವುಗಳಲ್ಲಿ ೫ ಕೊಠಡಿಗಳು ಶಿಥಿಲಗೊಂಡ ಕಾರಣ ಅವುಗಳನ್ನು ಮುಚ್ಚಲಾಗಿದೆ. ಉಳಿದ ಕೇವಲ ೪ ಕೊಣೆಗಳಲ್ಲಿ ಸುಮಾರು ೫೯೦ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಸ್ಥಳದ ಅಭಾದಿಂದ ಕೆಲವೊಂದು ತರಗತಿ ಶಾಲಾ ಮೈದಾನದಯೇ ನಡೆಸಲಾಗುತ್ತಿದೆ. ಇದು ವಿದ್ಯಾರ್ಥಿಗಳಿಗೂ ಮತ್ತು ಶಿಕ್ಷಕರಿಗೂ ತುಂಬಾ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದರು.

ಸರ್ಕಾರಿ ಶಾಲೆಗೆ ಮಕ್ಕಳು ಬರುವುದು ಕಡಿಮೆಯಾದ ಈ ವೇಳೆ ಇಲ್ಲಿ ಇಷ್ಟೋಂದು ದೊಡ್ಡ ಪ್ರಮಾಣದಲ್ಲಿ ಮಕ್ಕಳು ಅಭ್ಯಾಸ ಮಾಡುತ್ತಿರುವುದು ಹೆಮ್ಮೆಯ ವಿಷಯ. ಆದರೆ ಸಂಪೂರ್ಣ ಶಿಥಿಲಗೊಂಡ ಈ ಕಟ್ಟಡದಲ್ಲಿ ಜೀವ ಭಯದಲ್ಲಿ ಶಿಕ್ಷಕರು ಪಾಠ ಮಾಡಲಾಗುತ್ತಿದ್ದು, ಮಕ್ಕಳು ಸಹ ಯಾವಾಗ ಏನು ಆಗುತ್ತಿದೆಯೋ ಎಂಬ ಭಯ ಅವರನ್ನು ಕಾಡುತ್ತಿದೆ.

ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿ ಪರಿಶೀಲಿಸಿ ಕೂಡಲೇ ಸೂಕ್ತ ಕ್ರಮ ತೆಗೆದುಕೊಂಡು ಮಕ್ಕಳು ಮತ್ತು ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಹಾಗೊಂದು ವೇಳೆ ನಿರ್ಲಕ್ಷÈವಹಿಸಿದರೆ ಬೀದಿಗಳಿದು ಹೋರಾಟ ಮಾಡಲಾಗವುದು ಎಂದು ಅವರು ಎಚ್ಚರಿಸಿದ್ದಾರೆ. ಎಬಿವಿಪಿ ಮುಖಂಡ ನಾಗರಡ್ಡಿ ಸೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net