ಮುಂದಿನ ತಿಂಗಳು 14ಕ್ಕೆ ಚುನಾವಣೆ ಎದುರಿಸಲಿರುವ ಗೋವಾದ ರಾಜಕೀಯ ವಿಶಿಷ್ಟವಾದ ರಾಷ್ಟ್ರೀಯ ದಾಖಲೆಯನ್ನು ನಿರ್ವಿುಸಿದೆ. ಕಳೆದ ಐದು ವರ್ಷದಲ್ಲಿ ಇಲ್ಲಿನ ಶೇ. 60ರಷ್ಟು ಶಾಸಕರು ಪಕ್ಷಾಂತರ ಮಾಡಿದ್ದಾರೆ. ದೇಶದ ಯಾವ ಭಾಗದಲ್ಲೂ ಇಷ್ಟು ದೊಡ್ಡ ಮಟ್ಟದಲ್ಲಿ ಶಾಸಕರು ಪಕ್ಷಗಳ ಬದಲಾವಣೆ ಮಾಡಿಲ್ಲ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾಮ್್ಸರ್ (ಎಡಿಆರ್) ಅಧ್ಯಯನ ತಿಳಿಸಿದೆ.
- 40 ಸದಸ್ಯ ಬಲದ ವಿಧಾನಸಭೆಯಲ್ಲಿ 24 ಶಾಸಕರು ಪಕ್ಷಾಂತರ (ಶೇ. 60)
- 2017ರಲ್ಲಿ ಕಾಂಗ್ರೆಸ್ನ ಮೂವರು ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದರು.
- 2019ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಚಂದ್ರಕಾಂತ್ ಕವ್ಲೇಕರ್ ಸಹಿತ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಿದರು.
- ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿಯ (ಎಂಜಿಪಿ) ಇಬ್ಬರು ಶಾಸಕರು ಬಿಜೆಪಿಗೆ ಸೇರಿದರು.
- ಚುನಾವಣೆ ಘೋಷಣೆ ಆಗುವುದಕ್ಕೂ ಮುನ್ನ ಜಿಎಫ್ಪಿಯ ಓರ್ವ ಶಾಸಕ ಬಿಜೆಪಿ ಬಂದರೆ, ಅವರ ಹಿಂದೆಯೇ ಮಾಜಿ ಸಿಎಂ ಮತ್ತು ಕಾಂಗ್ರೆಸ್ ಮುಖಂಡ ರವಿ ನಾಯಕ್ ಬಿಜೆಪಿಗೆ ಕಾಲಿಟ್ಟರು.
- ಕಾಂಗ್ರೆಸ್ನ ನಾಯಕ ಮತ್ತು ಮಾಜಿ ಸಿಎಂ ಎಲ್. ಫೆಲೀರೋ ಮತ್ತು ಎನ್ಸಿಪಿಯಲ್ಲಿದ್ದ ಮಾಜಿ ಸಿಎಂ ರ್ಚಚಿಲ್ ಅಲೆಮಾವೊ ಟಿಎಂಸಿಗೆ ಸೇರಿದರು.
- ಟಿಎಂಸಿ ಸೇರಿದ್ದ ಕಾಂಗ್ರೆಸ್ ಶಾಸಕ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ, ಈಗ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಹೇಳಿದ್ದಾರೆ.
- ಶಾಸಕ ವಿಲ್ಫ್ರೆಡ್ ಡಿಸೋಜಾ ಈಗ ಪಕ್ಷೇತರರಾಗಿ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ.
- ಮೈಕಲ್ ಲೋಬೊ, ಜೋಸ್ ಲೂಯಿಸ್, ಅಲಿನಾ ಸಲ್ಡಾನಾ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ.
- ಪಕ್ಷಾಂತರದ ನಂತರ ಬಿಜೆಪಿಯಲ್ಲಿ 27 ಶಾಸಕರಿದ್ದಾರೆ.
- 2017ರಲ್ಲಿ ಕಾಂಗ್ರೆಸ್ 17, ಬಿಜೆಪಿ 13 ಸ್ಥಾನಗಳಿಸಿದ್ದವು.