ಚುರಾಚಂದ್‌ಪುರ: ಮಣಿಪುರಲ್ಲಿ ಇಂದು(ನ. 054) ಮುಂಜಾನೆ ನಡೆದ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ(Encounter) ಯುನೈಟೆಡ್ ಕುಕಿ ರಾಷ್ಟ್ರೀಯ ಸೇನೆ(ಯುಕೆಎನ್ಎ) ನಾಲ್ವರು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ.
ಚುರಾಚಂದ್‌ಪುರ ಜಿಲ್ಲೆಯ ಹೆಂಗ್ಲೆಪ್ ಉಪವಿಭಾಗದ ಖಾನ್ಪಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಹೇಳಿಕೆ ಬಿಡುಡಗೆ ಮಾಡಿರುವ ರಕ್ಷಣಾ ಸಚಿವಾಲಯ, ಚುರಚಂದ್‌ಪುರದಿಂದ ಪಶ್ಚಿಮಕ್ಕೆ ಸುಮಾರು 80 ಕಿ.ಮೀ ದೂರದಲ್ಲಿರುವ ಖಾನ್ಪಿ ಗ್ರಾಮದಲ್ಲಿ ಸೇನಾ ಪಡೆಯ ಮೇಲೆ ಭಯೋತ್ಪಾದಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಭದ್ರತಾ ಪಡೆಗಳು ಮತ್ತು ಎಸ್‌ಒಒ ಅಲ್ಲದ ದಂಗೆಕೋರ ಗುಂಪಿನ ಯುಕೆಎನ್‌ಎಯ ಸಶಸ್ತ್ರ ಕಾರ್ಯಕರ್ತರ ನಡುವಿನ ಗುಂಡಿನ ಚಕಮಕಿಯಲ್ಲಿ ನಾಲ್ವರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಕಾರು-ಟ್ರಕ್ ಮುಖಾಮುಖಿ ಡಿಕ್ಕಿ; ಆರು ಮಂದಿ ಸಾವು, ಇಬ್ಬರಿಗೆ ಗಾಯ| Road accident
ಕುಕಿ ಸೇನೆ ಕಾರ್ಯಕರ್ತರ ಇತ್ತೀಚಿಗೆ ಅನೇಕ ದೌರ್ಜನ್ಯಗಳನ್ನು ನಡೆಸಿದ್ದು, ಈ ಹಿನ್ನೆಲೆ ಕಾರ್ಯಾಚರಣೆ ನಡೆಸಲಾಗಿದೆ. ಮುಗ್ಧ ನಾಗರಿಕರನ್ನು ರಕ್ಷಿಸಲು, ಎಲ್ಲಾ ಬೆದರಿಕೆಗಳನ್ನು ತಗ್ಗಿಸಲು ಹಾಗೂ ಮಣಿಪುರದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ಮುಂದುವರೆದ ಭಾಗ ಎಂದು ತಿಳಿಸಿದೆ. (ಏಜೆನ್ಸೀಸ್)