ನ್ಯೂಸ್

ನೋಡನೋಡುತ್ತಿದ್ದಂತೆ ಕುಸಿದುಬಿದ್ದ ಬಹುಮಹಡಿ ಕಟ್ಟಡ! ಅವಶೇಷಗಳಡಿ ಸಿಲುಕಿರುವವರಿಗಾಗಿ ಹುಡುಕಾಟ

ನವದೆಹಲಿ: ದೆಹಲಿಯ ಸಬ್ಜಿ ಮಂಡಿ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದು ಇಂದು ದಿಢೀರನೇ ಕುಸಿದು ಬಿದ್ದಿದೆ. ಕಟ್ಟಡದ ಬಳಿ ಹಾದುಹೋಗುತ್ತಿದ್ದರೆನ್ನಲಾದ ಇಬ್ಬರು ಮಕ್ಕಳು ಮತ್ತು ತಲೆಗೆ ಪೆಟ್ಟು ಬಿದ್ದಿರುವ ಓರ್ವ ವೃದ್ಧನನ್ನು ರಕ್ಷಿಸಲಾಗಿದೆ. ಕಟ್ಟಡದಲ್ಲಿದ್ದ ನಾಲ್ಕೈದು ಜನರು ಇನ್ನೂ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.

ಅಗ್ನಿ ಶಾಮಕ ದಳದ ಸಿಬ್ಬಂದಿ, ಸ್ಥಳೀಯ ಪೊಲೀಸರು ಮತ್ತು ಎನ್​ಡಿಆರ್​​ಎಫ್​ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಅವಶೇಷಗಳ ಅಡಿಯಲ್ಲಿ ಎಷ್ಟು ಜನರು ಸಿಕ್ಕಿಕೊಂಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ ಎಂದು ಸೆಂಟ್ರ್​ಲ್​ ರೇಂಜ್​ ಪೊಲೀಸ್​ ಜಂಟಿ ಕಮಿಷನರ್​ ಎನ್​.ಎಸ್​.ಬಂಡೇಲಾ ಹೇಳಿದ್ದಾರೆ. (ಏಜೆನ್ಸೀಸ್)